ಸುದ್ದಿಬಿಂದು ಬ್ಯೂರೋ
ಶಿರಸಿ :
ಬಿಜೆಪಿ ಕಾರ್ಯಕರ್ತ ಹಾಗೂ ನಗರಸಭೆ ಸದಸ್ಯರು ಪ್ರಯಾಣಿಸುತ್ತಿದ್ದ ಕಾರ ಅಪಘಾತವಾಗಿ ಐವರು ಗಾಯಗೊಂಡು ಓರ್ವ ಗಂಭೀರವಾಗಿ ರುವ ಘಟನೆ ಹಾರೂಗಾರ ಬಳಿ ನಡೆದಿದೆ.

ಅಪಘಾತದಲ್ಲಿ ಕಾರವಾರದಲ್ಲಿ ನಿತೀನ ರಾಯ್ಕರ್ ಅವರಿಗೆ ಗಂಭೀರವಾಗಿ ಗಾಯವಾಗಿದೆ. ಇನ್ನುಳಿದಂತೆ ವಿ ಎಂ ಹೆಗಡೆ, ಪ್ರದೀಪ ಗುನಗಿ,ಗಜಾನನ ರೇವಣಕರ್ ಹಾಗೂ ಸಂದೇಶ ಅವರಿಗೆ ಗಾಯವಾಗಿದೆ.

ಇವರು ಶಿರಸಿಯಲ್ಲಿ ನಡೆದ ಬಿಜೆಪಿ ‌ಕಾರ್ಯಾಗಾರಕ್ಕೆ ಬಂದಿದ್ದು, ಬಳಿಕ ವಾಪಸ್ ಕಾರವಾರಕ್ಕೆ ತೆರಳುತ್ತಿದ್ದ ಸಮಯದಲ್ಲಿ ಎದುರಿನಿಂದ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದ ಟ್ಯಾಂಕರ್ ಇನೋವಾ ಕಾರ್ ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಇನೋವಾ ಕಾರ ಸಂಪೂರ್ಣವಾಗಿ ಜಖಂಗೊಂಡಿದೆ..

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ನಿತೀನ ರಾಯ್ಕರ್ ಅವರಿಗೆ ಹೆಚ್ಷಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಆಸ್ಪತ್ರೆಗೆ ‌ರವಾನಿಸಲಾಗಿದೆ. ಅಪಘಾತದ ಕುರಿತು ಶಿರಸಿ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.