ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ :ಉತ್ತರ ಕನ್ನಡ ಜಿಲ್ಲೆಯಲ್ಲಿ ಬಂದರು ನಿರ್ಮಾಣದ ವಿರುದ್ದ ಇದೀಗ ಮೀನುಗಾರರ ಆಕ್ರೋಶ ಹೆಚ್ಚಾಗಿದೆ. ನಿನ್ನೆ ಅಂಕೋಲಾ ತಾಲೂಕಿನ ಕೇಣಿ ಗ್ರಾಮದಲ್ಲಿ ಬಂದರು ನಿರ್ಮಾಣ ವಿರೋಧಿಸಿ ಮೀನುಗಾರರ ತೀವ್ರ ಹೋರಾಟ ನಡೆಸಿದ್ದು.ಇಂದು ಹೊನ್ನಾವರ ತಾಲೂಕಿನ ಕಾಸರಕೋಡಿನಲ್ಲಿ ಬಂದರು ನಿರ್ಮಾಣದ ಸರ್ವೆ ಕಾರ್ಯ ವಿರೋಧಿಸಿ ಮೀನುಗಾರರು ಕಡಲಿಗೆ ಇಳಿದು ಪ್ರತಿಭಟನೆಗೆ ಇಳಿದಿದ್ದಾರೆ.
ಹೊನ್ನಾವರ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸುಮಾರು 600ಕೋಟಿ ವೆಚ್ಚದಲ್ಲಿ ಬಂದರು ನಿರ್ಮಾಣಕ್ಕೆ ಮುಂದಾಗಿದ್ದು ಇಂದು ಬಂದರು ರಸ್ತೆ ನಿರ್ಮಾಣ ಸಂಬಂಧ ಸರ್ವೆಗೆ ಜಿಲ್ಲಾಡಳಿತ ಮುಂದಾಗಿತ್ತು.ಮೀನುಗಾರರು ಪ್ರತಿಭಟನೆ ನಡೆಸದಂತೆ ಮುಂಚಿತವಾಗಿ ನಿಷೇದಾಜ್ಞೆ ಹೇರಿದ್ದು ನಿಷೇದಾಜ್ಞೆಗೂ ಲೆಕ್ಕಿಸದ ಮೀನುಗಾರರು ಶಾಲಾ ಮಕ್ಕಳನ್ನ ಕರೆದುಕೊಂಡು ಬಂದು ಪ್ರತಿಭಟನೆಗೆ ಮುಂದಾಗಿದ್ದರು. ಮೀನಗಾರರ ಪ್ರತಿಭಟನೆ ಹಿನ್ನಲೆಯಲ್ಲಿ ಸುಮಾರು 50ಕ್ಕೂ ಅಧಿಕ ಮೀನಗಾರರನ್ನ ಪೊಲೀಸರು ವಶಕ್ಕೆ ಪಡೆದಿದ್ದು ವಶಕ್ಕೆ ಪಡೆದ ಮೀನುಗಾರರ ಬಿಡುಗಡೆ ಮಾಡುವಂತೆ ಉಳಿದವರು ಪ್ರತಿಭಟನೆ ಮುಂದುವರೆಸಿದ್ದರು.
ಹೊನ್ನಾವರ ಬಂದರು ನಿರ್ಮಾಣ ಸಂಬಂಧ ಕಳೆದ ಮೂರ್ನಾಲ್ಕು ವರ್ಷದಿಂದ ಹೋರಾಟ ನಡೆಯುತ್ತಲೇ ಇದೆ.ಇಂದು ಬಂದರು ನಿರ್ಮಾಣ ಸಂಬಂಧ ಸರ್ವೆ ಕಾರ್ಯ ಮಾಡಲು ಮುಂದಾದ ವೇಳೆಯಲ್ಲಿ ಮೀನುಗಾರರು ದೊಡ್ಡ ಮಟ್ಟದಲ್ಲಿಯೇ ಪ್ರತಿಭಟನೆಗೆ ಮುಂದಾಗಿದ್ದರು.ಇನ್ನು ಕಡಲಿಗೆ ಇಳಿದು ಮೀನುಗಾರರು ಪ್ರತಿಭಟಿಸಿದ್ದು ಸುಮಾರು ನಾಲ್ವರು ಅಸ್ಥಸ್ಥಗೊಂಡು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಬಂದರು ನಿರ್ಮಾಣದ ಮೂಲಕ ವ್ಯಾಪಾರ ವ್ಯವಹಾರ ವೃದ್ದಿ ಮಾಡಬೇಕು ಎನ್ನುವುದು ಸರ್ಕಾರದ ಚಿಂತನೆಯಾದರೆ ಇನ್ನೊಂದೆಡೆ ತಮ್ಮ ತುತ್ತ ಅನ್ನ ಸಂಪಾದನೆಯ ದುಡಿಮೆಯ ಸ್ಥಳ ಬಂದರಿಗೆ ಬಲಿಯಾಗಲಿದೆ ಎನ್ನುವ ಆತಂಕ ಮೀನುಗಾರಲ್ಲಿ ಉಂಟಾಗಿದೆ.ಮುಂದಿನ ದಿನದಲ್ಲಿ ಈ ಹೋರಾಟ ಯಾವ ಹಾದಿ ಹಿಡಿಯಲಿದೆ ಎನ್ನುವುದನ್ನ ಕಾದು ನೋಡಬೇಕಿದೆ.
ಇದನ್ನೂ ಓದಿ