ಸುದ್ದಿಬಿಂದು ಬ್ಯೂರೋ ವರದಿ
ಯಲ್ಲಾಪುರ : ರಾಜ್ಯ ಕಾಂಗ್ರೇಸ್ ಸರಕಾರದ ದುರಾಡಳಿತದಿಂದ ರಾಜ್ಯದ ಜ‌ನ ಹೈರಾಣಾಗಿದ್ದಾರೆ.ಪ್ರತಿಯೊಂದು ವಸ್ತುಗಳ ಬೆಲೆ ಗಗನಕ್ಕೇರಿದೆ.ಈ ಸರಕಾರದ ವಿರುದ್ಧ ನಾವು ನಡೆಸುತ್ತಿರುವ ಪ್ರತಿಭಟನೆಯ ಎಫೆಕ್ಟ್ ರಾಜ್ಯ ಕಾಂಗ್ರೇಸ್ ಸರಕಾರಕ್ಕೆ ತಟ್ಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ನಡೆದ ಬಿಜೆಪಿ ಜನಾಕ್ರೋಶ ಸಮಾವೇಶವನ್ನ ಉದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ. ಇದು ಬೆಲೆ ಏರಿಕೆ ಸರ್ಕಾರ, ಹಿಂದೂಗಳನ್ನ ಅವಮಾನ ಮಾಡಿರುವ ಕಾಂಗ್ರೆಸ್ ಸರ್ಕಾರವನ್ನ ತೊಲಗಿಸಬೇಕಿದೆ. ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಈ ಸರ್ಕಾರ ಅನ್ಯಾಯ ಮಾಡುತ್ತಿದೆ. ಚುನಾವಣೆಯಲ್ಲಿ ಜನತೆಗೆ ಸುಳ್ಳು ಭರವಸೆಯನ್ನ ನೀಡಿ ಅಧಿಕಾರಕ್ಕೆ ಬಂದಿದೆ. ಯಾವ ಗ್ಯಾರಂಟಿಗಳನ್ನ ಸಂಪರ್ಕವಾಗಿ ನೀಡಲು ಆಗುತ್ತಿಲ್ಲ.‌‌‌ಎಲ್ಲಾ ಹಣವನ್ನ ಗ್ಯಾರಂಟಿ ಯೋಜನೆಗೆ ಬಳಕೆ ಮಾಡುತ್ತಿದ್ದು,‌ ಯಾವುದೇ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ

ಈ ಹಿಂದೆ ನಮ್ಮ ಸರಕಾರ ಇದ್ದಾಗ 40% ಸರಕಾರ ಎಂದು ಆರೋಪಿಸಿದ್ದರು. ಆದರೆ ಇಂದಿನ ಕಾಂಗ್ರೇಸ್ ಸರಕಾರದಲ್ಲಿ 80% ಕಮಿಷನ್ ದಂಧೆ‌ ನಡೆಯುತ್ತಿದೆ.‌ ಹಣ ಕೊಡದೆ ಈ ಸರಕಾರದಲ್ಲಿ ಕೆಲಸಗಳು ಆಗುತ್ತಿಲ್ಲ‌ ಎಂದು ನಾವು ಹೇಳುತ್ತಿಲ್ಲ.‌ಅವರದೆ ಪಕ್ಷದ ಶಾಸಕರು ಹೇಳಿಕೆ ನೀಡುತ್ತಿದ್ದಾರೆ.ಅದಕ್ಕಾಗಿ ಜನಾಕ್ರೋಶ ಯಾತ್ರೆ ಮಾಡಲಾಗುತ್ತಿದೆ.

ನಮ್ಮ‌ ಹೋರಾಟದ ಎಫೆಕ್ಟ್ ಕಾಂಗ್ರೆಸ್ ಗೆ ತಟ್ಟಿದೆ‌. ಅದಕ್ಕಾಗಿ ಕೇಂದ್ರದ ವಿರುದ್ದ ಹೋರಾಟ ಮಾಡಲು ಕಾಂಗ್ರೆಸ್ ಮುಂದಾಗಿದೆ. ಇದಕ್ಕೆ ತಕ್ಕ ಉತ್ತರ ನಾವು ಕೊಡುತ್ತೇವೆ. ಕಮಿಷನ್ ಆರೋಪ ಬಿಜೆಪಿ ಸರ್ಕಾರದ ವಿರುದ್ದ ಮಾಡಿದ್ದರು. ಅದು ರಾಜಕೀಯ ಪ್ರೇರಿತ ಆರೋಪ ಮಾತ್ರ ಆಗಿತ್ತು. ಕರ್ನಾಟಕ‌ ಈಗಿನ ಸರ್ಕಾರ ದೇಶದಲ್ಲಿ‌ ಭ್ರಷ್ಟಾಚಾರದಲ್ಲಿ‌ ನಂಬರ್ ಒನ್‌ ಆಗಿದೆ.‌‌ ಇದನ್ನ ಸಿಎಂ‌ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರೇ ಹೇಳಿದ್ದಾರೆ.ಗುತ್ತಿಗೆದಾರರು ಸರ್ಕಾರದ ಕಮಿಷನ್ ದಂದೆ ವಿರುದ್ದ ಧ್ವನಿ ಎತ್ತಿದ್ದಾರೆ

ಪೊಲೀಸ್ ಇಲಾಖೆಗೆ ಈ ವರೆಗೆ 1 ನೇ ತಾರೀಕೆ ಸಂಬಂಳ‌ ಆಗುತ್ತಿತ್ತು. ಈಗ 8 ನೇ ತಾರೀಕು ಆದರು ಸಂಬಂಳ ಹಾಕಲು ಆಗುತ್ತಿಲ್ಲ. ರಾಜ್ಯ ಆರ್ಥಿಕ ಪರಿಸ್ಥಿತಿ ಕುಸಿದಿದೆ.‌ ಅದಕ್ಕಾಗಿ ಬೆಲೆ‌ ಏರಿಕೆ ಮಾಡಲು ಸರ್ಕಾರ ಮುಂದಾಗಿದೆ‌ ಎಂದು ರಾಜ್ಯ ಕಾಂಗ್ರೇಸ್ ಸರಕಾರ ವಿರುದ್ಧ ಆಕ್ರೋಶ‌ ಹೊರ ಹಾಕಿದ್ದಾರೆ.

ಇದನ್ನೂ ಓದಿ