ಕಾರವಾರ : ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮಹತ್ವದ ಹೆಜ್ಜೆ ಇಟ್ಟಿದ್ದು. ಜೆಡಿಎಸ್ ಎನ್ ಡಿ ಎ(NDA) ಮೈತ್ರಿಕೂಟವನ್ನು ಸೇರುವ ಮೂಲಕ ಹೊಸ ಪಯಣ ಆರಂಭಿಸುತ್ತಿದೆ.
ಈ ಮಧ್ಯೆ ಜೆಡಿಎಸ್‌ (Jds) ಪಕ್ಷಕ್ಕೆ ಸಂಕಷ್ಟ ಎದುರಾಗಿದೆ.

ಸದ್ಯ ಜೆಡಿಎಸ್ ನಲ್ಲಿರುವ ಅನೇಕ‌ ಮುಸ್ಲಿಂ ನಾಯಕರು ಗೌಪ್ಯ ಸಭೆಗಳನ್ನ ನಡೆಸಿ ಜೆಡಿಎಸ್ ತೊರೆಯುವ ನಿರ್ಧಾರಕ್ಕೆ ಮುಂದಾಗಿರುವ ಬಗ್ಗೆ ಮಾಹಿತಿ ‌ಲಭ್ಯವಾಗಿದೆ.ಇದನ್ನ ಕುಮಾರಸ್ವಾಮಿ ಹೇಗೆ ನಿಭಾಯಿಸಲಿದ್ದಾರೆ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ. ಎನ್ ಡಿ ಎ ಮೈತ್ರಿ ಕೂಟ ಸೇರುವ ಸಂದರ್ಭದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ.

ಕೇಂದ್ರ ಸಚಿವ ಅಮಿತ್‌ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಅವರನ್ನೊಳಗೊಂಡ ಸಭೆಗಾಗಲಿ, ಮಾತುಕತೆಗಾಗಲಿ ಕರೆದುಕೊಂಡು ಹೋಗಲಿಲ್ಲ, ಬದಲಾಗಿ, ಪುತ್ರ ನಿಖಿಲ್ ಕುಮಾರ್ ಸ್ವಾಮಿ ಅವರನ್ನು ಕುಮಾರಸ್ವಾಮಿ ಅವರನ್ನ ಕರೆದುಕೊಂಡು ಹೋಗಿರುವುದು ಅನೇಕ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.

ಹೆಚ್ ಡಿ ಕುಮಾರಸ್ವಾಮಿ ಅವರ ಈ ನಡೆ ಜೆಡಿಎಸ್ ಅನೇಕ ಮುಸ್ಲಿಂ ನಾಯಕರನ್ನು ಕೆರಳಿಸಿದ್ದು, ಅವರು ಅನೇಕ ಸಭೆಗಳನ್ನು ನಡೆಸುತ್ತಿದ್ದಾರೆ.ಬೆಂಗಳೂರು ನಗರದ ಕೆ ಕೆ ಗೆಸ್ಟ್ ಹೌಸ್ ನಲ್ಲಿ ನಡೆದ ಸಭೆಯಲ್ಲಿ ಸಾಕಷ್ಟು ಹೆಚ್ಚಿನ ಮುಖಂಡರು ಜೆಡಿಎಸ್‌ ತೊರೆಯುವ ನಿರ್ಧಾರ ಕೈಗೊಂಡಿದ್ದಾರೆ.

ಜೆಡಿಎಸ್‌ ಕಾರ್ಯಾಧ್ಯಕ್ಷ ಎನ್ ಎಂ ನಬಿ ಹಾಗೂ ಇತರ ಮುಖಂಡರಾದ ಮೋಹಿದ್ ಅಲ್ತಾಫ್, ನಾಸೀನ್ ಉಸ್ತಾದ್, ವಕ್ತಾರ ನೂರ್ ಅಹಮ್ಮದ್ ಸೇರದಂತೆ ರಾಜ್ಯದ ಅನೇಕ ಭಾಗಗಳಿಂದ ಮುಸ್ಲಿಂ ಮುಖಂಡರು ಸಭೆ ಮಾಡಿದ್ದಾರೆ. ಜೆಡಿಎಸ್‌ ಮುಖಂಡರಾದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ನಡೆ ಸಾಕಷ್ಟು ನೋವು ತಂದಿದೆ. ನಾವು ಪಕ್ಷ ಬಿಡದೇ ಬೇರೆ ದಾರಿಯಿಲ್ಲ ಎಂದು ಅವರು ಹೇಳಿದ್ದಾರೆ.

ಸಚಿವ ಜಮೀರ್ ಅಹಮದ್ ಖಾನ್, ಜೆಡಿಎಸ್ ಪಕ್ಷದ ಮುಖಂಡ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದು, ಮುಸ್ಲಿಂರ ಬೆಂಬಲದಿಂದ ಜೆಡಿಎಸ್ 19ಸ್ಥಾನಗಳನ್ನು ಗೆದ್ದುಕೊಂಡಿದೆ. ಇಲ್ಲದಿದ್ದರೆ ಪಕ್ಷ ನಾಲ್ಕೂ ಸ್ಥಾನವನ್ನು ಗೆಲ್ಲುತ್ತಿರಲಿಲ್ಲ. ಕುಮಾರಸ್ವಾಮಿ ಅವರು ಚನ್ನಪಟ್ಟಣದಲ್ಲಿ ಮುಸ್ಲಿಂ ಮತದಾರರಿಂದ ಗೆದ್ದಿದ್ದಾರೆ. ಇಲ್ಲದೆ ಹೋಗಿದ್ದರೆ ಸೋಲಿನ ರುಚಿ ಅನುಭವಿಸುತ್ತಿದ್ದರು ಎಂದಿದ್ದಾರೆ.

ಒಟ್ಟರೆಯಾಗಿ ಲೋಕಸಭಾ ಚುನಾವಣೆಗೆ ಬಿಜೆಪಿ ಜೊತೆ ಕೈ ಜೋಡಿಸಿರುವ ಜೆಡಿಎಸ್ ಗೆ ಆರಂಭದಲ್ಲಿ ಭಾರೀ ದೊಡ್ಡ ಆಘಾತ ಉಂಟಾಗಿದೆ. ಮುಂದಿನದಿನದಲ್ಲಿ ರಾಜ್ಯದಲ್ಲಿ ಜೆಡಿಎಸ್ ಸಂಪೂರ್ಣವಾಗಿ ಬಿಜೆಪಿ ಜೊತೆಗೆ ವಿಲೀನವಾಗಲಿದೇಯಾ ಎನ್ನುವ ಮಾತು ಕೇಳಿ ಬರುತ್ತಿದೆ.