ಸುದ್ದಿಬಿಂದು ಬ್ಯೂರೊ ವರದಿ
ಭಟ್ಕಳ: ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಮನೆಯ ಮುಂಬಾಗಿಲನ್ನು ಮುರಿದು 40ಗ್ರಾಂ ಚಿನ್ನಾಭರಣವನ್ನು ಕದ್ದು ಪರಾರಿಯಾದ ಘಟನೆ ತಾಲೂಕಿನ ಮುರುಡೇಶ್ವರ ವ್ಯಾಪ್ತಿಯ ತೆರ್ನಮಕ್ಕಿ ಕಟಗೇರಿಯಲ್ಲಿ ನಡೆದಿದೆ.

ಕಳೆದ ಎರಡು ವರ್ಷದಿಂದ ಮಮತಾ ಕೃಷ್ಣ ಶೆಟ್ಟಿ ಎನ್ನುವವರು ತಮ್ಮ ತವರು ಮನೆಯಲ್ಲಿ ವಾಸವಿದ್ದು, ನ.2ರಂದು ದೀಪಾವಳಿ ಹಬ್ಬದ ಹಿನ್ನೆಲೆ ತನ್ನ ಗಂಡ ಮಕ್ಕಳ ಜೊತೆಗೆ ತಾಲೂಕಿನ ತಲಗೋಡಿನ ತನ್ನ ಗಂಡ ಮನೆಗೆ ಹಬ್ಬದ ಆಚರಣೆಗೆ ತವರು ಮನೆಗೆ ಬೀಗ ಹಾಕಿ ತೆರಳಿದ್ದರು ನವೆಂಬರ.4 ರಂದು ಬೆಳಿಗ್ಗೆ ಆರು ಗಂಟೆ ಸುಮಾರಿಗೆ ದೇವರ ಪೂಜೆ ಮಾಡಲೆಂದು ಮನೆಯ ಬಾಗಿಲು ತೆರೆದಾಗ ಮನೆಯ ಮುಂದಿನ ಬಾಗಿಲಿನ ಬೀಗ ಮುರಿದಿದ್ದು, ಬಾಗಿಲು ಮುಚ್ಚಿದ ಸ್ಥಿತಿಯಲ್ಲಿತ್ತು. ಮನೆಯೊಗಿನ ಗೊದ್ರೇಜ್ ಕಪಾಟನ್ನು ತೆರೆದು ಅದರಲ್ಲಿದ್ದ ವಸ್ತುಗಳೆಲ್ಲವೂ ಚೆಲ್ಲಾಪಿಲ್ಲಿಯಾಗಿವೆ.

ತಕ್ಷಣ ಮನೋಜ ಶೆಟ್ಟಿ ಅವರು ಅವರ ಸಹೋದರಿ ಮಮತಾ ಶೆಟ್ಟಿ ಅವರಿಗೆ ಪೋನ್ ಕರೆ ಮಾಡಿ ವಿಷಯ ತಿಳಿಸಿದ್ದು, ಪೊಲೀಸರಿಗೂ ವಿಷಯ ತಿಳಿಸಿದ್ದರು.ದೇವರ ಕೋಣೆಯ ಮುಂದೆ ಇಟ್ಟಿರುವ ಗೊದ್ರೇಜ್ ಕಪಾಟ ಮತ್ತು ಪಕ್ಕದ ರೂಂನಲ್ಲಿದ್ದ ಇನ್ನೊಂದು ಗೊದ್ರೇಜ್ ಕಪಾಟ ಮುರಿದಿದ್ದಾರೆ. ದೇವರ ಕೋಣೆಯ ಮುಂದೆ ಇಟ್ಟಿರುವ ಗೊದ್ರೇಜ್ ಕಪಾಟಿನಲ್ಲಿದ್ದ 40ಗ್ರಾಂ ಬಂಗಾರದ ಆಭರಣಗಳು ಕಳ್ಳತನ ವಾಗಿರುವ ಕುರಿತು ದೂರಿನಲ್ಲಿ ದಾಖಲಿಸಿದ್ದಾರೆ.

ಕಪಾಟಿನಲ್ಲಿದ್ದ 10ಗ್ರಾಂ ಒಂದು ಬಂಗಾರದ ಚೈನ್, 15 ಗ್ರಾಂ 5 ಕೈ ಉಂಗುರ, 15 ಗ್ರಾಂ 2 ಬಂಗಾರದ ಕಿವಿ ಒಲೆ ಸೇರಿ ಒಟ್ಟು 40 ಗ್ರಾಂ ಬಂಗಾರದ ಆಭರಣ ಅಂದಾಜು ಬೆಲೆ 1,40,000 ರೂ. ಕಿಮ್ಮತ್ತಿನ ಆಭರಣಗಳನ್ನು ಕಳುವು ಮಾಡಿಕೊಂಡು ಹೋಗಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪ್ರಕರಣವನ್ನು ದಾಖಲಿಸಿಕೊಂಡ ಮುರುಡೇಶ್ವರ ಪೊಲೀಸರು ಕಾರವಾರದಿಂದ ಸ್ಥಳಕ್ಕೆ ಬೆರಳಚ್ಚು ಮತ್ತು ಡಾಗ್ ಸ್ಕಾಡ್ ತಂಡ ಕರೆಯಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣವನ್ನು ಮುರುಡೇಶ್ವರ ಪೊಲೀಸ್ ಠಾಣೆಯ ಸಿ.ಎಚ್.ಸಿ ವಸಂತ ಎಮ್. ಮುಕ್ರಿ ಅವರು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಗಮನಿಸಿ