ಸುದ್ದಿಬಿಂದು ಬ್ಯೂರೋ ವರದಿ
ಹುಬ್ಬಳ್ಳಿ: ಅಪ್ರಾಪ್ತ ಬಾಲಕಿಗೆ ಮನೆ ಬಾಗಿಲು ಹಾಕಿಕೊಂಡು ಮುತ್ತು ಕೊಟ್ಟ ಆರೋಪದಲ್ಲಿ ಜೈಲು ಸೇರಿದ್ದ ಇಲ್ಲಿನ ಸಂಚಾರಿ ಠಾಣೆಯ ಮುಖ್ಯ ಪೇದೆಯನ್ನ ಅಮಾನತ್ತು ಮಾಡಿ ಆದೇಶ ಹೊರಡಿಸಲಾಗಿದೆ.
ಅಲ್ಲಾಭಕ್ಷ್ಯ ಖಾದೀಮನವರ ಎಂಬ ಹೆಡ್‌ಕಾನ್ಸಟೇಬಲ್ ಕೇಶ್ವಾಪುರ ಪೊಲೀಸ್ ಠಾಣೆಯ ವ್ಯಾಪ್ತಿಯೊಂದರ ಮನೆಯಲ್ಲಿ ಅನುಚಿತವಾಗಿ ವರ್ತಿಸಿದ್ದಾರೆಂದು ಸ್ಥಳೀಯರು, ಆತನಿಗೆ ಹಿಗ್ಗಾ ಮುಗ್ಗಾ ಗೂಸಾ ನೀಡಿ ಪೊಲೀಸರಿಗೆ ಒಪ್ಪಿಸಿದ್ದರು.ಆರೋಪಿಯನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಪೊಲೀಸರು ಒಪ್ಪಿಸಿದ್ದರು. ಈ ಹಿನ್ನೆಲೆಯಲ್ಲಿ ಹೆಡ್‌ಕಾನ್ಸಟೇಬಲ್ ಅವರನ್ನ ಈಗ ಅಮಾನತ್ತು ಮಾಡಲಾಗಿದೆ.
ಗಮನಿಸಿ