ಸುದ್ದಿಬಿಂದು ಬ್ಯೂರೋ
ಶಿರಸಿ: ಭೂಮಿ, ಸಂವಿಧಾನ ಬದ್ಧ ಮತ್ತು ಮೂಲಭೂತ ಹಕ್ಕು. ಜಿಲ್ಲೆಯಲ್ಲಿ ಅರಣ್ಯ ಸಾಂದ್ರತೆ ಶೇ 80ರಷ್ಟು ಇರುವದರಿಂದ ಜನವಸತಿ ಮತ್ತು ಸಾಗುವಳಿಗಾಗಿ ಅರಣ್ಯಭೂಮಿ ಅವಲಂಬಿತವಾಗಿರುವದು ಅನಿವಾರ್ಯ. ಅರಣ್ಯವಾಸಿಗಳ ಭೂಮಿ ಹಕ್ಕಿಗಾಗಿ ಕಾನೂನು ಜಾರಿಗೆ ಬಂದರು, ಕಾಲ ಕಾಲಕ್ಕೆ ಸರಕಾರ ಬದಲಾದರೂ ಅರಣ್ಯವಾಸಿಗಳ ಭೂಮಿ ಹಕ್ಕು ಇಂದೂ ಅರಣ್ಯವಾಸಿಗಳಿಗೆ ಮರೀಚಿಕೆಯಾಗಿರುವದು ಖೇದಕರ.

ಇಂತಹ ಸಂದಿಗ್ಧತೆಯನ್ನು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಅರಣ್ಯ ಭೂಮಿ ಹಕ್ಕಿಗಾಗಿ ಕಳೆದ ೩೩ ವರ್ಷದಿಂದ ಅರಣ್ಯವಾಸಿಗಳಲ್ಲಿ ಜಾಗ್ರತೆ ಮತ್ತು ಕಾನೂನು ಹೋರಾಟದಲ್ಲಿ ಸಂಘಟನೆಯು ಪ್ರಮುಖ ಅಸ್ತçವಾಗಿ ಬಳಸಿಕೊಂಡಿರುವದು ದಾಖಲಾರ್ಹ.ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ 85 ಸಾವಿರ ಅರ್ಜಿ ಸಲ್ಲಿಸಲಾಗಿದೆ. ಪ್ರಥಮ ಹಂತದಲ್ಲಿ 67333 ಅರ್ಜಿ ತಿರಸ್ಕಾರವಾಗಿದೆ ಜಿಲ್ಲಾದ್ಯಂತ, ಸಲ್ಲಿಸಿದಂತ ಅರ್ಜಿಗಳಲ್ಲಿ ಕೇವಲ1852 ಅರ್ಜಿಗಳಿಗೆ ಮಾತ್ರ ಮಾನ್ಯತೆ ದೊರಕಿದೆ. ಅಂದರೆ, ಬಂದ ಅರ್ಜಿಗಳಲ್ಲಿ ಕೇವಲ ಶೇ 2.17 ಅರ್ಜಿಗಳಿಗೆ ಮಾತ್ರ ಮಾನ್ಯತೆ ದೊರಕಿರುವುದು ವಿಷಾದಕರ.

ಪರಿಸರವಾದಿಗಳು ಸುಪ್ರೀಂ ಕೋರ್ಟನಲ್ಲಿ ಅರಣ್ಯ ಹಕ್ಕು ಕಾಯಿದೆಯಲ್ಲಿ ತಿರಸ್ಕರಿಸಿದ ಅರಣ್ಯವಾಸಿಗಳನ್ನ ಒಕ್ಕಲೇಬ್ಬಿಸಲು ಕೋರಿ ಸಲ್ಲಿಸಿದ ಸಾರ್ವಜನಿಕ ಹಿತಾಶಕ್ತಿಯ ಅರ್ಜಿಯಲ್ಲಿ ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅರಣ್ಯವಾಸಿಗಳ ಪರವಾಗಿ ಸ್ವಪ್ರೇರಣೆಯಿಂದ ಅವಶ್ಯ ಪಕ್ಷಗಾರನಾಗಿ ಸೇರಿಕೊಂಡು, ಸುಪ್ರೀಂ ಕೋರ್ಟನಲ್ಲಿ ಅರಣ್ಯವಾಸಿಗಳ ಪರ ಧ್ವನಿ ಆಗಿರುವದು ವಿಶೇಷ. ಸಾಮಾಜಿಕ ಚಿಂತಕ ಕಾಗೋಡು ತಿಮ್ಮಪ್ಪ ಹಾಗೂ ವಿಶ್ರಾಂತ ನ್ಯಾಯಮೂರ್ತಿ ಹೆಚ್.ಎನ್. ನಾಗ್‌ಮೋಹನದಾಸ್ ಅವರ ಸಾಮಾಜಿಕ, ಕಾನೂನು ಸಲಹೆ ಹಾಗೂ ಮಾರ್ಗದರ್ಶನವು ೩ ದಶಕದ ಹೊರಾಟಕ್ಕೆ ಗಟ್ಟಿತನ ತಂದಿದೆ ಎಂದರೇ, ತಪ್ಪಾಗಲಾರದು.

ಜಿಲ್ಲೆಯಲ್ಲಿನ ಅರಣ್ಯವಾಸಿಗಳ ಪರ ದಿಟ್ಟತನದ ಅರಣ್ಯವಾಸೊಗಳ ನಿಲುವು, ಮಾದರಿಯುತ ವಿಭಿನ್ನ ಮತ್ತು ಸಾಂಘಿಕ ಅರಣ್ಯ ಭೂಮಿ ಹಕ್ಕು ಹೋರಾಟವು ಇಂದು ೩೩ನೇ ವರ್ಷಕ್ಕೆ ಹೆಜ್ಜೆ ಹಾಕಿದೆ. ನಿರಂತರ ಹೋರಾಟಕ್ಕೆ ಆಡಳಿತ ವ್ಯವಸ್ಥೆಯ ಇಚ್ಛಾಶಕ್ತಿ ಕೊರತೆ ಮತ್ತು ಕಾನೂನು ತೊಡಕುಗಳಿಂದ ಅರಣ್ಯ ಭೂಮಿ ಹಕ್ಕು ಅರಣ್ಯವಾಗಳಿಗೆ ಮರೀಚಿಕೆವಾಗಿದೆ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ವಿವಿಧ-ವಿಭಿನ್ನ 5

ಸಾವಿರಕ್ಕೂ ಮಿಕ್ಕಿ ಹೋರಾಟ:
ದಾಖಲಾರ್ಹ 5ಸಾವಿರಕ್ಕಿಂತ ಹೆಚ್ಚು ವಿವಿಧ ರೀತಿಯ ಹೋರಾಟ ಮೂಲಕ ವಿಭಿನ್ನ ಮತ್ತು ಸಾಂಘಿಕ ಹೋರಾಟವನ್ನ ರಾಜ್ಯಾದಂತ ಹಮ್ಮಿಕೊಂಡಿದ್ದು, ಇತಿಹಾಸ ಅನಕ್ಷರಸ್ಥ, ಗ್ರಾಮೀಣ ಮತ್ತು ಗುಡ್ಡಗಾಡು ಜನರಲ್ಲಿ ಹೋರಾಟ ಮತ್ತು ಕಾನೂನು ಜಾಗ್ರತೆ ಮೂಡಿಸಿರುವುದು ಹೋರಾಟಕ್ಕೆ ಸವಾಲು ಆಗಿರುವುದನ್ನ ರವೀಂದ್ರ ನಾಯ್ಕ ಹೋರಾಟದ ಮಜಲುಗಳನ್ನು ವಿವರಿಸಿದರು.

ಇದನ್ನೂ ಓದಿ