suddibindu.in
ಕುಮಟಾ : ರಾಷ್ಟ್ರೀಯ ಹೆದ್ದಾರಿ 66ರ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತದಲ್ಲಿ ಕಣ್ಮರೆಯಾದ ಜಗನ್ನಾಥ ಪುತ್ತಿ ಕೃತಿಕಾ ಗೆ ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ ಅವರ ಪ್ರಯತ್ನ ಫಲವಾಗಿ ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ಕಾರ್ಯನಿರ್ವಹಿಸುವ ಬಿ.ಎಚ್.ಇ.ಎಲ್ ಕಂಪನಿಯಲ್ಲಿ ಉದ್ಯೋಗ ಲಭಿಸಿದ್ದು, ಈ ಬಗ್ಗೆ ದೂರವಾಣಿ ಮೂಲಕ ಜಗನ್ನಾಥ ಕುಟುಂಬಸ್ಥರು ಕುಮಾರಸ್ವಾಮಿ ಅವರನ್ನ ಅಭಿನಂದಿಸಿದ್ದಾರೆ
.

ಕೈಗಾ ಅಣು ವಿದ್ಯುತ್ ಸ್ಥಾವರದ ಬಿ.ಎಚ್ಇ,ಎಲಗ ಕಂಪನಿಯಿಂದ ಜಗನ್ನಾಥ ‌ನಾಯ್ಕ ಅವರ ತೃತೀಯ ‌ಮಗಳಾಗಿರುವ ಕೃತಿಕಾಳಿಗೆ ಉದ್ಯೋಗ ಆಗಿರುವ ಬಗ್ಗೆ ದೂರವಾಣಿ ಕರೆ ಸಹ ಬಂದಿದೆ‌.ಇನ್ನೂ ಈ ವಿಚಾರದ ಬಗ್ಗೆ ಕುಮಾರಸ್ವಾಮಿ ಅವರು ಕೂಡ ಸೂರಜ್ ನಾಯ್ಕ ಅವರಿಗೂ ದೂರವಾಣಿ ಕರೆ ಮಾಡಿ ಜಗನ್ನಾಥ ನಾಯ್ಕ ಅವರ ಮಗಳಿಗೆ ಕೈಗಾದ ಬಿ.ಎಚ್.ಇ.ಎಲ್ ಕಂಪನಿಯಲ್ಲಿ ಉದ್ಯೋಗ ಆಗಿರುವುದನ್ನ ತಿಳಿಸಿದ್ದಾರೆ.

ಶಿರೂರು ಗುಡ್ಡಕುಸಿತದ ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನ ಜಗನ್ನಾಥ ನಾಯ್ಕ ಅವರ ಕುಟುಂಬದವರು ಭೇಟಿಯಾಗಿ ತಂದೆ ಕಣ್ಮರೆಯಾದಗಿರುವ ಬಗ್ಗೆ ಅಳಲು ತೋಡಿಕೊಂಡಿದ್ದರು. ಈ ವೇಳೆ ಕುಮಾರಸ್ವಾಮಿ ಅವರು ಯಾವ ಕಾರಣಕ್ಕೂ ನೀವು ಭಯ ಪಡಬೇಕಾಗಿಲ್ಲ.ನಿಮ್ಮ‌ ಜೊತೆ ನಾವು ಇದ್ದೇವೆ ಆದಷ್ಟು ಶ್ರೀಘ್ರದಲ್ಲಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿದ್ದ‌ ಕುಮಾರಸ್ವಾಮಿ ಅವರು, ಸೂರಜ್ ನಾಯ್ಕ ಅವರ ಜೊತೆ ಎಲ್ಲಾ ದಾಖಲಾತಿಯನ್ನ ಪೊರೈಸಿ ನಾನು ಅವರೊಂದಿಗೆ ಮತ್ತೆ ಸಂಪರ್ಕಿಸಿ ಉದ್ಯೋಗ ಕೊಡಿಸುವುದಾಗಿ ಜಗನ್ನಾಥ ಕುಟುಂಬದವರಿಗೆ ಭರವಸೆ ನೀಡಿ ಹೋಗಿದ್ದರು.

ಕೊನೆಗೂ ಘಟನೆಯಾದ ಎರಡೇ ತಿಂಗಳಲ್ಲಿ‌ ಜಗನ್ನಾಥ ನಾಯ್ಕ ಪುತ್ರಿಗೆ ಉದ್ಯೋಗ ಕೊಡಿಸುವ ಮೂಲಕ ಕೇಂದ್ರ ಸಚಿವ‌ ಕುಮಾರಸ್ವಾಮಿ ನುಡಿದಂತೆ ನಡೆದಿದ್ದಾರೆ.ಇನ್ನೋರ್ವ ಪುತ್ರಿ ಪಲ್ಲವಿ ನಾಯ್ಕ ಗೆ ಕಳೆದವಾರ ಪ್ರವಾಸೋದ್ಯಮ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದ ಉದ್ಯೋಗ ನೀಡಲಾಗಿದೆ..

ಇದನ್ನೂ ಓದಿ