ಕುಮಟಾದ ಗ್ರಾಮ ದೇವಿ, ಭೂದೇವಿ ಎಂದೇ ಪ್ರಸಿದ್ಧವಾದ ದೇವರಹಕ್ಕಲದ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಅರ್ಚಕರಾದ ಪ್ರಶಾಂತ ಗುನಗಾ ಅವರು ಇಂದು ಶ್ರೀ ದೇವಿಯನ್ನು ಆಗಸ್ಟ್ 15ರ ಸ್ವಾತಂತ್ರ್ಯೋತ್ಸವ ಪ್ರಯುಕ್ತ ವಿಶೇಷವಾಗಿ ಕೇಸರಿ, ಬಿಳಿ, ಹಸಿರು ಬಣ್ಣದ “ತ್ರಿವರ್ಣ” ಅಲಂಕಾರ ಮಾಡಿದ್ದಾರೆ. ಇದು ದೇವಸ್ಥಾನದ ಸದ್ಭಕ್ತರನ್ನು ಆಕರ್ಷಿಸುವ ಜೊತೆಗೆ ಭಕ್ತರಲ್ಲಿ ಧಾರ್ಮಿಕತೆಯ ಮೂಲಕವೂ ಸ್ವಾತಂತ್ರ್ಯೋತ್ಸವದ ಜಾಗೃತಿ ಮತ್ತು ಮಹತ್ವ ಮೂಡಿಸಿದೆ.

ಇದನ್ನೂ ಓದಿ

ಹಿಂದೂಗಳು ನಿತ್ಯ ಆರಾಧಿಸುವ ಶ್ರಾವಣ ಮಾಸ ಇದಾಗಿದ್ದು, ದೇವಸ್ಥಾನದಲ್ಲಿ ನಿತ್ಯ ಒಂದಿಲ್ಲೊಂದು ಪೂಜೆ, ಪುನಸ್ಕಾರಗಳು ನಡೆಯುತ್ತಲೇ ಇರುತ್ತವೆ. ಇಂದಿನ ಶ್ರೀ ದೇವಿಯತ್ರಿವರ್ಣ” ಅಲಂಕಾರ ಭಕ್ತರನ್ನು ಬಹಳವಾಗಿ ಆಕರ್ಷಿಸಿದ್ದು, ಪ್ರಶಾಂತ ಗುನಗಾರ ಕೈಚಳಕ ಭಕ್ತ ಸಮೂಹದಲ್ಲಿ ಮತ್ತಷ್ಟು ಬೆರಗು ಮತ್ತು ಆಸೆ ಮೂಡಿಸಿದೆ. ಮುಂಬರುವ ಹೂವಿನ ಪೂಜೆ, ನವರಾತ್ರಿ ಉತ್ಸವ ಹಾಗೂ ಮತ್ತಿತರ ಸುಸಂದರ್ಭಗಳಲ್ಲಿ ಪ್ರಶಾಂತ ಗುನಗಾರ ಕೈಯಿಂದ ನಾವು ಮತ್ತಷ್ಟು ವಿನೂತನ ಅಲಂಕಾರಗಳನ್ನು ಬಯಸುತ್ತೇವೆ” ಎಂದು ದೇವಸ್ಥಾನದ ಭಕ್ತಕೋಟಿಗಳಲ್ಲಿ ಒಬ್ಬರಾದ ಮಂಜುನಾಥ (ಯೋಗಿ) ನಾಯ್ಕ ತಿಳಿಸಿದ್ದಾರೆ.