ಇದನ್ನೂ ಓದಿ

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಎನ್ ಸಿಬಿ ತಂಡ 15 ಕೋಟಿ ಮೌಲ್ಯದ ಗಾಂಜಾ ವಶಕ್ಕೆ ಪಡೆದು ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದೆ.ಬೆಂಗಳೂರು ಎನ್.ಸಿ.ಬಿ ತಂಡ ಹಾಗೂ ಬೀದರ್ ಜಿಲ್ಲಾ ಔರಾದ್ ಪೊಲೀಸರ ಜಂಟಿ ಕಾರ್ಯಚರಣೆ ನಡೆಸಿದ್ದಾರೆ..ಅಕ್ರಮ ಗಾಂಜಾ ಸಾಗಾಟ ಕುರಿತು ಖಚಿತ ಮಾಹಿತಿ ಮೇರೆಗೆ ಎನ್ ಸಿ ಬಿ ತಂಡ ಹಿಂಬಾಲಿಸಿ ಔರಾದ್ ನ ವನಮಾರಪಳ್ಳಿ ಬಳಿ ಸಿಪಿಐ ರಘುವೀರಸಿಂಗ್ ಮತ್ತು ತಂಡ ದಾಳಿ ನಡೆಸಿದ್ದಾರೆ….

ಖದೀಮರು ಲಾರಿಯಲ್ಲಿ ಸಿಮೆಂಟ್ ಇಟ್ಟಿಗೆ ತುಂಬಿದ್ದು ಒಳಗಡೆ ಗಾಂಜಾ ಪ್ಯಾಕೇಟ್ಗಳನ್ನು ಅಡಗಿಸಿಟ್ಟಿ ಸಾಗಾಟ ಮಾಡುತ್ತಿದ್ದರು.ಅಕ್ರಮ ಸಾಗಣೆ ಪ್ರಕರಣದಲ್ಲಿ ಬೀದರನ ಹುಮನಾಬಾದ ತಾಲ್ಲೂಕಿನ ಹಂದಿಕೇರಾ ಗ್ರಾಮದ ಇಬ್ಬರು ಆರೋಪಗಳನ್ನು ಬಂಧಿಸಲಾಗಿದೆ.1500 ಕೆ.ಜಿ ಗಾಂಜಾ (1500 kg ganja) ಇದ್ದು ಅಂದಾಜು 15 ಕೋಟಿ ರೂಪಾಯಿ ಮೌಲ್ಯದ ಪತ್ತೆಯಾಗಿದು ತನಿಖೆ ಮುಂದುವರೆದಿದೆ ಎಂದು ಎಸ್ಪಿ ಚೆನ್ನಬಸವಣ್ಣ ಲಂಗೋಟಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.