ಸುದ್ದಿಬಿಂದು ಬ್ಯೂರೋ
ಭಟ್ಕಳ :
ಜಿಲ್ಲೆಯಲ್ಲಿ ಕಳೆದ ಕೆಲ‌ದಿನಗಳ ಹಿಂದೆ ಸುರಿದ ಧಾರಾಕಾರ ಮಳೆಗೆ ಅನೇಕ ಕಡೆಯಲ್ಲಿ ಪ್ರವಾಹ ಉಂಟಾಗಿರುವುದನ್ನ ನೋಡಿದ್ದೇವೆ ಆದರೆ ಉತ್ತರಕನ್ನಡ ಜಿಲ್ಲೆಯ ಭಟ್ಕಳ ಕೆಎಸ್ಆರ್ ಟಿಸಿ ಬಸ್ ಡಿಪೋದಲ್ಲಿರುವ ರೆಸ್ಟ್ ರೂಂ ನಲ್ಲಿ ಮಳೆಗಾಲದಲ್ಲಿಯೂ ಕುಡಿಯುವ ಹನಿ ನೀರಿಗೂ ತತ್ವಾರ ಎದುರಾಗಿದೆ ಎನ್ನಲಾಗಿದ್ದು, ನೀರಿಲ್ಲದೆ ಸಿಬ್ಬಂದಿಗಳು ಪರದಾಡುವಂತಾಗಿದೆ.

ಭಟ್ಕಳ KSRTC ಡಿಪೋದಲ್ಲಿ ಕಳೆದ 21ದಿನಗಳಿಂದ ಕುಡಿಯಲು ಸಹ ಹನಿ ನೀರು ಸೀಗುತ್ತಿಲ್ಲ ಎನ್ನುವ ಆರೋಪ ಕಳೆದ ಅನೇಕ‌ ದಿನಗಳಿಂದ. ಕೇಳಿಬರುತ್ತಿದೆ. ಇಲ್ಲಿಗೆ ಬರುವ ಚಾಲಕರು, ನಿರ್ವಾಹಕರು ನೀರು ಕುಡಿಯ ಬೇಕು ಅಂತಾ ಹೋದರೆ ಹನಿ ನೀರು ಸಿಗುತ್ತಿಲ್ಲವಂತೆ. ಅಷ್ಟೆ ಅಲ್ಲದೆ‌ ಟಾಯ್ಲೆಟ್ ರೂಂ ನಲ್ಲಿಯೂ ಸಹ ನೀರಿಲ್ಲದೆ‌ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುವ ಆರೋಪ ಅಲ್ಲಿನ ಸಿಬ್ಬಂದಿಗಳಿಂದಲ್ಲೆ ಕೇಳಿ ಬರುತ್ತಿದೆ. ಮಳೆಗಾಲದಲ್ಲೆ‌ ನೀರಿಗೆ ಈರೀತಿ ಸಮಸ್ಯೆ ಎದುರಾದರೆ ಇನ್ನೂ ಬೇಸಿಗೆಯಲ್ಲಿ ಯಾವ ಪರಿಸ್ಥಿತಿ ಎಂದು ಹೇಳೋದಕ್ಕೆ ಸಾಧ್ಯವಿಲ್ಲ..

ಈ ಸಮಸ್ಯೆ ಬಗ್ಗೆ ಹಲವು ದಿನಗಳಿಂದ ಅಲ್ಲಿನ ಸಿಬ್ಬಂದಿಗಳು ಡಿಪೋ ಮ್ಯಾನೇಜರ್ ಅವರ ಗಮನಕ್ಕೆ ತರುತ್ತಿದ್ದಾರೆ ಎನ್ನಲಾಗುಗಿದೆ. ಆದರೆ ಮ್ಯಾನೇಜರ್ ಮಾತ್ರಾ ಯಾವುದನ್ನು ಸಹ ಕಿವಿಗೆ ಹಾಕಿಕೊಳ್ಳುತ್ತಿಲ್ಲ ಎನ್ನುವ ಬಗ್ಗೆ ಸಹ ಆರೋಪವಿದೆ. ನೀರಿನ ಸಮಸ್ಯೆ ಹೇಳಿದರೆ ಯಾರು ರೆಸ್ಟ್ ರೂಂ ನಲ್ಲಿ ಉಳಿಯೋದು ಬೇಡೆ ಬೇರೆ ಎಲ್ಲಾದ್ದರೂ ಬೇರೆ ಕಡೆ ನೋಡಕೊಳ್ಳಿ ಎಂದು ನೀರಿನ ಸಮಸ್ಯೆ ಕೇಳಲು ಹೋದವರಿಗೆ ಮ್ಯಾನೇಜರ್ ಹೇಳಿ ಕಳುಹಿಸುತ್ತಿದ್ದಾರಂತೆ.

ಮಳೆ ನೀರೆ ಗತಿ
ರೆಸ್ಟ್ ರೂಂ ಗೆ ಬರುವ ಸಿಬ್ಬಂದಿಗಳು ನೀರಿಲ್ಲದೆ..ಮಳೆ ಬರುವುದನ್ನ ಕಾಯಬೇಕಾದ ಪರಿಸ್ಥಿತಿ ಎದುರಾಗಿದ್ದು, ಮಳೆ‌ ನೀರನ್ನೆ‌ ಹಿಡಿದುಕೊಂಡೇ. ಟಾಯ್ಲೆಟ್, ಸ್ನಾನ ಎಲ್ಲವನ್ನ‌ ಮಾಡಕೊಂಡು ಹೋಗಬೇಕು. ಒಂದು ವೇಳೆ ಸಿಬ್ಬಂದಿಗಳು ರೆಸ್ಟ್ ರೂಂ ಗೆ ಬಂದಾಗ ಮಳೆ ಬರದೆ ಇದ್ದರೆ ಅವತ್ತು.ಹಾಗೆ ಡ್ಯೂಟಿಗೆ ತೆರಳಬೇಕಾದ ಪರಿಸ್ಥಿತಿ ಎದುರಾಗಿದೆ.

ಎರಡ ಮೂರದಿನ ಸ್ನಾನ ಮಾಡೋದಕ್ಕೆ ಆಗಲ್ಲ.
ಸರ್ ನಾವು ಭಟ್ಕಳ ಡಿಪೋದಿಂದ ಬೇರೆ ಜಿಲ್ಲೆ ಹಾಗೂ ರಾಜ್ಯಕ್ಮೆ ಹೋದರೆ ವಾಪಸ್ ಬರೋದ್ಕೆ‌ ಎರಡ ಮೂರ ದಿನ ಹೋಗತ್ತೆ.ನೀರಿದ್ದರೂ ಸ್ನಾನ‌ ಮಾಡೋದಕ್ಕೆ ಸಮಯ ಸಿಗೋದಿಲ್ಲ‌. ಇಲ್ಲಿಗೆ ಬಂದು ಸ್ನಾನ ಮಾಡಬೇಕು ಅಂದರೆ ಇಲ್ಲಿಗೆ ಬಂದರೆ ಟಾಯ್ಲೆಟ್ ಗೂ ನೀರು ಇರಲ್ಲ, ಇನ್ನೂ ಸ್ನಾನ ಮಾಡೋದು ಹೇಗೆ..? ಹೀಗಾಗಿ ಕಳೆದ 21ದಿನಗಳಿಂದ ನಾವು ಸರಿಯಾಗಿ ಸ್ನಾನ ಮಾಡದೆ ಕಾಲ ಕಳೆಯಬೇಕಾದ ಪರಿಸ್ಥಿತಿ ಉಂಟಾಗಿದೆ.ಇನ್ನೂ ಈ ಸಮಸ್ಯೆ ಬಗೆಹರಿಸದೆ ಹೋದರೆ ನಾವೇಲ್ಲಾ ಸೇರಿ ಸಚಿವರ ಬಳಿ ಹೋಗಿ ನಮ್ಮ ಸಮಸ್ಯೆ ಹೇಳಕೊಳ್ಳಬೇಕಾಗುತ್ತದೆ ಎಂದು ಹೆಸರು ಹೇಳಲು ಬಯಸದ ಹತ್ತಾರು ಮಂದಿ ಚಾಲಕರು ಹಾಗೂ ನಿರ್ವಾಹಕಕರು‌ ಹೇಳಿಕೊಂಡಿದ್ದಾರೆ.