ಸುದ್ದಿಬಿಂದು ಬ್ಯೂರೋ ವರದಿ
ಗೋಕರ್ಣ ಗ್ರಾಮ ಪಂಚಾಯತದಿಂದ ಸಂಗ್ರಹಿಸಲಾಗಿದ್ದ ಕಸವನ್ನ ಅಶೋಕೆಯ ಗುಡ್ಡದ ಮೇಲೆ ಬೇಕಾ ಬಿಟ್ಟಿಯಾಗಿ ಎಸೆಯಲಾಗುತ್ತಿತ್ತು. ಇದರಿಂದಾಗಿ ಆ ಭಾಗದಲ್ಲಿ ಕುಡಿಯುವ ನೀರಿನ ಬಾವಿ ನೀರು ಕಲುಷಿತವಾಗತ್ತಾ ಇದ್ದವು, ಇದರ ಜೊತೆಯಲ್ಲಿ ಆ ರಸ್ತೆಯಲ್ಲಿ ಸಂಚರಿಸುವ ಸ್ಥಳೀಯರಿಗೆ ಸೇರಿದಂತೆ ನಿತ್ಯವೂ ಇಲ್ಲಿಗೆ ಬರುವ ಪ್ರವಾಸಿಗರಿಗೆ ದುರ್ನಾತ ಉಂಟಾಗುತ್ತಿತ್ತು..ಅಷ್ಟೆ ಅಲ್ಲದೆ ಇಲ್ಲಿ ಬಿಸಾಕುವ ತ್ಯಾಜ್ಯವನ್ನ ಜಾನುವಾರುಗಳು ತಿನ್ನುತ್ತಿದ್ದು, ಇದರಿಂದ ರೈತರ ಅನೇಕ ಜಾನುವಾರುಗಳು ಸಾವನ್ನಪ್ಪಿದ್ದವು.

ಇವೆಲ್ಲ ಕಾರಣಕ್ಕಾಗಿ ತ್ಯಾಜ್ಯವನ್ನ ಈ ಬಾಗದಲ್ಲಿ ಎಸೆಯಬಾರದು ಹಾಗೂ ಪಂಚಾಯತ ವ್ಯಾಪ್ತಿಯಲ್ಲಿ ತ್ಯಾಜ್ಯ ಘಟಕವನ್ನ ನಿರ್ಮಾಣ ಮಾಡುವಂತೆ ಸಾಕಷ್ಟು ಪ್ರತಿಭಟನೆ ನಡೆಸಿದ್ದರು. ಇದರಿಂದ ಎಚ್ಚೆತ್ತುಕೊಂಡಿದ್ದ ಜಿಲ್ಲಾಡಳಿತ ಸಾರ್ವಜನಿಕರು ವಿರೋಧಿಸಿದ್ದ ಸ್ಥಳದಲ್ಲೇ 70ಲಕ್ಷ ವೆಚ್ಚದಲ್ಲಿ ತ್ಯಾಜ್ಯ ಘಟಕವನ್ನ ನಿರ್ಮಾಣ ಮಾಡಿತ್ತು. ಆದರೆ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರರು ಘಟಕ ನಿರ್ಮಾಣವನ್ನ ಸಮರ್ಪಕವಾಗಿ ನಿರ್ಮಾಣ ಮಾಡದೆ ಬಿಲ್ ಪಡೆದುಕೊಂಡಿದ್ದಾರೆಂದು ಸಾರ್ವಜನಿಕರು ಆರೋಪಿಸುತ್ತಲೆ ಇದ್ದಾರೆ.
ಅದೆ ಸ್ಥಳದಲ್ಲೆ ಘಟಕ ನಿರ್ಮಾಣವಾಗಿದ್ದರು ಕೂಡ ಮನೆ,ಹೊಟೇಲ್ ಸೇರಿದಂತೆ ಎಲ್ಲಾ ತ್ಯಾವ್ಯವನ್ನ ಘಟಕದಲ್ಲಿ ಹಾಕದೆ ಮೊದಲಿನಂತೆ ಬಯಲು ಪ್ರದೇಶದಲ್ಲಿಯೇ ಎಸೆಯಲ್ಲಾಗತ್ತಾ ಇತ್ತು. ಈ ಬಗ್ಗೆ ಸುದ್ದಿ ಬಿಂದು ಸುದ್ದಿ ಬಿತ್ತರಿಸಿದ 24ಗಂಟೆಯಲ್ಲಿ ಅದರಲ್ಲೂ ರಾತ್ರೋ ರಾತ್ರಿಯೇ ರಾಶಿ ರಾಶಿಯಾಗಿ ಬಿದ್ದ ಕಸದ ರಾಶಿಯನ್ನ ಬೇರೆಡೆ ಸಾಗಿಸಲಾಗಿದೆ. ಸುದ್ದಿ ಬಿತ್ತರವಾದ ಬಳಿಕ ಗ್ರಾಮ ಪಂಚಾಯತ ಎಚ್ಚೆತ್ತುಕೊಂಡಿದ್ದು, ಸುದ್ದಿ ಬಿಂದು ವರದಿಗೆ ಸಾರ್ವಜನಿಕರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗಮನಿಸಿ