ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಬಹುಭಾಷ ನಟ ಹಾಗೂ ನಿರ್ದೇಶಕ ರಮೇಶ ಅರವಿಂದ ಕುಟಂಬ ಸಮೇತರಾಗಿ ಇಂದು ಪ್ರವಾಸಕ್ಕಾಗಿ ಉತ್ತರ ಕನ್ನಡ ಜಿಲ್ಲೆಯ ಕಾರವಾರಕ್ಕೆ ಆಗಮಿಸಿದ್ದಾರೆ.
ನಟ ರಮೇಶ ಕುಟುಂಬ ಕಳೆದ ಎರಡು ದಿನಗಳ ಹಿಂದೆ ದಾಂಡೇಲಿಗೆ ಆಗಮಿಸಿದ್ದು, ಅಲ್ಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದು, ಇಂದು ಬೆಳಿಗ್ಗೆ ದಾಂಡೇಲಿಯಿಂದ ಕಾರವಾರದ ದೇವಾಭಾಗ್ ಬೀಚ್ ಗೆ ಆಗಮಿಸಿದ್ದಾರೆ. ಮಧ್ಯಾಹ್ನದ ಊಟವನ್ನ ದೇವಭಾಗ್ ರೇಸಾರ್ಟ್ನಲ್ಲೆ ಸವಿದ ರಮೇಶ ಕುಟುಂಬ ಕೆಲ ಹೊತ್ತು ಕಡಲತೀರದಲ್ಲಿ ಸುತ್ತಾಡಿ, ಸಂಜೆ ಬೋಟ್ ಮೂಲಕ ಕೂರ್ಮಗಡ ರೇಸಾರ್ಟ್‌ಗೆ ತೆರಳಿದ್ದು ಇಂದು ರಾತ್ರಿ ಅಲ್ಲೆ ವಾಸ್ತವ್ಯ ಮಾಡಲಿದ್ದಾರೆ.
ಗಮನಿಸಿ