ಸುದ್ದಿಬಿಂದು ಬ್ಯೂರೋ ವರದಿ
ಯಲ್ಲಾಪುರ : ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಪತ್ರಕರ್ತ ಜಗದೀಶ ನಾಯಕ ಯಲ್ಲಾಪುರ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ.
ಅನಾರೋಗ್ಯಕ್ಕೆ ಒಳಗಾಗಿದ್ದ ಜಗದೀಶ ನಾಯಕ ಅವರನ್ನ ಚಿಕಿತ್ಸೆಗಾಗಿ ಹುಬ್ಬಳ್ಳಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಚಿಕಿತ್ಸೆಗೆ ಸ್ಪಂಧಿಸದೆ ಇರುವ ಕಾರಣ ಇಂದು ಬೆಳಿಗ್ಗೆ ಹುಬ್ಬಳ್ಳಿ ಆಸ್ಪತ್ರೆಯಿಂದ ಯಲ್ಲಾಪುರಕ್ಕೆ ವಾಪಸ್ ತರಲಾಗಿತ್ತು.ಸಂಜೆ ವೇಳೆ ಅವರು ನಿಧನರಾಗಿದ್ದಾರೆ.
ಜಗದೀಶ ನಾಯಕ ಇವರು ಪ್ರಜಾ ವಾಣಿ, ನುಡಿಜೇನು,ಕಡಲವಾಣಿ, ಕರಾವಳಿ ಮುಂಜಾವು,ಸೇರಿ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಪತ್ರಿಕೆಯಲ್ಲಿ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದರು. ಅಷ್ಟೆ ಅಲ್ಲದೆ ಅವರದ್ದೆ ಆಗಿರುವ ಯಲ್ಲಾಪುರ ನ್ಯೂಸ್ ಎಂಬ ನ್ಯೂಸ್ ಪೋರ್ಟಲ್ ಸಹ ಮಾಡಿಕೊಂಡಿದ್ದರು. ಬಡತನದಲ್ಲೇ ಜೀವನ ನಡೆಸುತ್ತಿದ್ದ ಜಗದೀಶ ನಾಯಕ ನಿಧನರಾಗಿದ್ದು, ಇವರ ನಿಧನಕ್ಕೆ ಪತ್ರಕರ್ತರು ಸೇರಿ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಇನ್ನೂ ಹೆಚ್ಚಿನ ಸುದ್ದಿ ಓದಿ