suddibindu.in
ರಾಯಚೂರು (Raichur). ಬೋರ್ ವೆಲ್ ಬಳಿ ಅರೆ ಬರೆ ವಿದ್ಯುತ್ ಕಾಮಗಾರಿ ನಡೆಸಿದ್ದರಿಂದ ವಿದ್ಯುತ್ ಸ್ಪರ್ಶಿಸಿ ಬಾಲಕ ಕೊನೆಯುಸಿರೆಳೆದಿರುವ ಘಟನೆ ನಡೆದಿದೆ.ಜಿಲ್ಲೆಯ ಲಿಂಗಸುಗೂರು (Lingasuguru) ತಾಲೂಕಿನ ದೇವರಭೂಪುರ ಗ್ರಾಮದಲ್ಲಿ ದುರ್ಘಟನೆ ನಡೆದಿದೆ.
- Kumta News/ನಿಯಂತ್ರಣ ತಪ್ಪಿ ಕಾರಿಗೆ ಗುದ್ದಿದ ಕ್ರೂಜರ್ ವಾಹನ :ತಪ್ಪಿದ ದುರಂತ
- Air India/ವಿಮಾನ ದುರಂತ : ಗುಜರಾತ ಮಾಜಿ ಸಿಎಂ ಗಂಭೀರ ನೂರಕ್ಕೂ ಹೆಚ್ಚು ಪ್ರಯಾಣಿಕರ ಸಾವು
- ಯುವತಿಯರ ದುರ್ಬಳಕೆ ಪ್ರಕರಣ : ಸಿದ್ದಾಪುರ ಕಾಂಗ್ರೇಸ್ ಮುಖಂಡನ ವಿಚಾರಣೆಗೆ ಒಳಪಡಿಸಿದ ಪೊಲೀಸರು
ಬಸವರಾಜ್ (2) ಮೃತ ಬಾಲಕ. ಬೋರ್ ವೆಲ್ ಬಳಿ ಅರೆ ಬರೆ ವಿದ್ಯುತ್ ಕಾಮಗಾರಿ ಮಾಡಿದ್ದರಿಂದ ವಿದ್ಯುತ್ ತಂತಿಗಳು ಕೆಳಗೆ ನೇತಾಡುತ್ತಿದ್ದವು. ಈ ವೇಳೆ ಬಾಲಕ ಬೋರ್ ವೆಲ್ ಬಳಿ ಹೋದಾಗ ವಿದ್ಯುತ್ ತಗುಲಿ ಶಾಕ್ ಹೊಡೆದಿದೆ.
ಬಾಲಕನನ್ನು ಲಿಂಗಸುಗೂರು ಸರ್ಕಾರಿ ಆಸ್ಪತ್ರೆಗೆ (Hospital) ದಾಖಲಿಸಿ ಚಿಕಿತ್ಸೆ ನೀಡಿತಾದರು, ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ಬಾಲಕ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಇತ್ತ ಪಂಚಾಯಿತಿ ಸಿಬ್ಬಂದಿ ಹಾಗೂ ಪಿಡಿಒ (PDO) ಎಡವಟ್ಟಿನಿಂದ ಬಾಲಕ ಮೃತಪಟ್ಟಿದ್ದಾನೆ ಎಂದು ಬಾಲಕನ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.