ತಿರುವನಂತಪುರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿ ನಡೆದ ಗುಡ್ಡಕುಸಿತದ ರಕ್ಷಣಾ ಕಾರ್ಯಾಚರಣೆಯಲ್ಲಿ ಕರ್ನಾಟ ಸರಕಾರ ಕೈಗೊಂಡ ಪ್ರಯತ್ನಗಳ ಬಗ್ಗೆ ಕೇರಳ ಸರ್ಕಾರ ಮತ್ತು ಜನತೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್(PINARAYI VIJAYAN) ಅವರು ಕರ್ನಾಟಕ ಸಿಎಂ ಸಿದ್ದರಾಮಯ್ಯ(CM SIDDARAMAIHA ) ಮತ್ತು ಕಾರವಾರ ಶಾಸಕ ಸತೀಶ್ ಸೈಲ್(MLA SATISH SAIL) ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಿರೂರು ಗುಡ್ಡ ಕುಸಿತದ ದುರಂತವನ್ನು ಗಂಭೀರವಾಗಿ ಪರಿಗಣಿಸಿ ನಾಪತ್ತೆಯಾಗಿದ್ದ ನಮ್ಮ ರಾಜ್ಯದ ಅರ್ಜುನನ ಪತ್ತೆಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿ ಅರ್ಜುನ್ ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದರು,ಅದರಂತೆಯೇ ಹಲವಾರು ಬಗೆಯಲ್ಲಿ ಕಾರ್ಯಾಚರಣೆ ನಡೆಸಿ ಸಪ್ಟೆಂಬರ್ 25 ರಂದು ಅರ್ಜುನನ ಕಳೆಬರಹ ದೊರೆತಿದ್ದ ಹಿನ್ನೆಲೆ ಪತ್ರದ ಮುಖಾಂತರ ಶೋಧ ಕಾರ್ಯಾಚರಣೆಯಲ್ಲಿ ನಿರಂತರವಾಗಿ ಶ್ರಮಿಸಿದ ಸ್ಥಳೀಯ ಶಾಸಕ ಸತೀಶ್ ಸೈಲ್ ರಿಗೆ ಹಾಗೂ ಜಿಲ್ಲಾಡಳಿತಕ್ಕೆ ಧನ್ಯವಾದ ತಿಳಿಸಿದ್ದಾರೆ.
ಜುಲೈ 16 ಭೀಕರ ಗುಡ್ಡ ಕುಸಿತ ಸಂಭವಿಸಿ ಒಂದೇ ಕುಟುಂಬದ ನಾಲ್ಕುಮಂದಿ ಸಹಿತ 11 ಮಂದಿ ಪ್ರಾಣಕಳೆದುಕೊಂಡಿದ್ದರು,ಜಿಲ್ಲಾಡಳಿತಕ್ಕೆ ನಾಪತ್ತೆಯಾದವರ ಪತ್ತೆ ಕಾರ್ಯವೇ ಸವಾಲಾಗಿ ಪರಿಣಮಿಸಿತ್ತು, ನಾಪತ್ತೆಯಾದ 11 ಮಂದಿಯ ಪೈಕಿ 8 ಮಂದಿಯ ಶವ ಪತ್ತೆಯಾಗಿತ್ತು. ಇನ್ನೂಳಿದ ಮೂವರಾದ ಸ್ಥಳೀಯರಾದ ಜಗನ್ನಾಥ ನಾಯ್ಕ,ಲೋಕೇಶ ನಾಯ್ಕ ಹಾಗೂ ಕೇರಳ ಮೂಲದ ಅರ್ಜುನ್ ಮೃತದೇಹ ಪತ್ತೆಯಾಗಿರದ ಹಿನ್ನೆಲೆಯಲ್ಲಿ, ಮೃತದೇಹ ಪತ್ತೆಗೆ ಜಿಲ್ಲಾಡಳಿತ ಹಲವು ಪ್ರಯತ್ನ ಮಾಡಿತ್ತು.
ಸಪ್ಟೆಂಬರ್ 19 ರಿಂದ ಜಿಲ್ಲಾಡಳಿತ ಬಾರ್ಜ್ ಸಹಿತ ಡ್ರಜ್ಜಿಂಗ್ ಯಂತ್ರಗಳನ್ನು ತರಿಸಿಕೊಂಡು ಮೂರನೇ ಹಂತದ ಕಾರ್ಯಚರಣೆ ಆರಂಭಿಸಿತ್ತುನ ಈ ನಡುಗೆ ಮೂರನೇ ಹಂತದ ಆರನೇ ದಿನದ ಕಾರ್ಯಚರಣೆಯಲ್ಲಿ ಕೇರಳ ಮೂಲದ ಬೆಂಜ್ ಲಾರಿ ಹಾಗೂ ಚಾಲಕ ಅರ್ಜುನ್ ಅವಶೇಷಗಳು ಪತ್ತೆಯಾಗಿದೆ.
ಲಾರಿ ಚಾಲಕ ಅರ್ಜುನ್ ನ ಮೃತದೇಹದ ಕಳೆಬರಹ ಹಾಗೂ ಲಾರಿ ಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದ ಕಾರ್ಯವೈಕರಿ ಕುರಿತಾಗಿ ಕೇರಳ ಸಿಎಂ ಕೃತಜ್ಞತೆ ಸಲ್ಲಿಸಿದ್ದಾರೆ.
ಗಮನಿಸಿ