ಸುದ್ದಿಬಿಂದು ಬ್ಯೂರೋ
ಮುಂಡಗೋಡ : ಬಸ್ ನಿಲ್ದಾಣಗಳಲ್ಲಿ ಮಹಿಳೆಯ ವ್ಯಾನಿಟ್ ಬ್ಯಾಗ್ ನಿಂದ ಹಣ, ಬಂಗಾರ ಅಪಹರಿಸುತ್ತಿದ್ದ ಅಂತರ್ ಜಿಲ್ಲಾ ಇಬ್ಬರೂ ಕಳ್ಳಿಯರನ್ನ ಮುಂಡಗೋಡ ಪೊಲೀಸರು ಶಿವಮೊಗ್ಗದಲ್ಲಿ ಬಂಧಿಸಿ ಆರು ಲಕ್ಷ‌ ಬೆಲೆಯ ಬಂಗಾರವನ್ನ ವಶಕ್ಕೆ ಪಡೆಯಲಾಗಿದೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಶಾಂತಿ ಯಾನೆ ಕರ್ಕಿ ಕೊಂ ವೆಂಕಟರಮಣ ಕಲ್ಲವಡ್ಡರ ಹಾಗು ಮಿನಾಕ್ಷಿ ಪರಮೇಶ್ವರ ಕಲ್ಲವಡ್ಡರ ಬಂಧಿತ ಆರೋಪಿಗಳಾಗಿದ್ದಾರೆ. ಇವರು ಉತ್ತರಕನ್ನಡ ಜಿಲ್ಲೆಯ ಮುಂಡಗೋಡ,ಶಿರಸಿ ಸೇರಿದಂತೆ ಬೇರೆ ಬೇರೆ ಜಿಲ್ಲೆಯಲ್ಲಿಯೂ ಸಹ ಬಸ್‌ನಿಲ್ದಾಣಗಳಲ್ಲಿ ಮಹಿಳೆಯರ ಬ್ಯಾಗ್ ನಿಂದ ಹಣ ಹಾಗೂ ಚಿನ್ನಾಭರಣಗಳನ್ನ ಕಳ್ಳತನ ಮಾಡುತ್ತಿದ್ದರು.

ಈ ಪ್ರಕರಣ ಒಂದು ರೀತಿಯಲ್ಲಿ ಪೋಲಿಸರಿಗೆ ತಲೆ ನೋವಾಗಿತ್ತು. ಕಳ್ಳಿಯರು. ಮುಂಡಗೋಡ,ಶಿರಸಿ ಹಳೆ ಬಸ್ ನಿಲ್ದಾಣ ಮತ್ತು ನಿಲೇಕಣಿ ಬಸ್ ನಿಲ್ದಾಣ ಸೇರಿ ನಾಲ್ಕು ಕಡೆಗಳಲ್ಲಿ ಕಳ್ಳತನ ಮಾಡಿರುವ ಬಗ್ಗೆ ಶಿರಸಿ ಹಾಗೂ ಪೊಲೀಸ್ ‌ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು.ಡಿವೈಎಸ್ಪಿ ಗಣೇಶ ಅವರ ನೇತೃತ್ವದಲ್ಲಿ ಮುಂಡಗೋಡ ಸಿಪಿಆಯ್ ಟಿ ಎಸ್ ಲೋಕಾಪುರ್,ಪಿಎಸ್ಆಯ್ ಗಳಾದ ಪರಶುರಾಮ ಮಿರ್ಜಗಿ,ಹನುಮಂತ ಕುಡಗುಂಟಿ ಹಾಗೂ ಪೊಲೀಸ್ ಸಿಬ್ಬಂದಿಗಳ ಕಾರ್ಯಚರಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಅಭಿನಂಧಿಸಿದ್ದಾರೆ‌

.