ಸುದ್ದಿಬಿಂದು ಬ್ಯೂರೋ
ಕಾರವಾರ : ನಗರದ ಲಂಡನ್ ಬ್ರಿಡ್ಜ್ ಬಳಿ ರಾಷ್ಟ್ರೀಯ ಹೆದ್ದಾರಿ 66ರ ಟನೆಲ್ ನಲ್ಲಿ ಬಂದ್ ಆಗಿದ್ದ ವಾಹನ ಸಂಚಾರವನ್ನ ಆರಂಭಿಸುವಂತೆ ಉತ್ತರಕನ್ನಡ ಜಿಲ್ಲಾಡಳಿತ ಐಆರ್ ಬಿ ಕಂಪನಿಗೆ ಪತ್ರಬರೆದಿದ್ದು, ಸಂಚಾರದ ವೇಳೆ ಅವಘಢವಾದ್ದರೆ ಅದಕ್ಕೆ ಕಂಪನಿಯೇ ಹೊಣೆ ಎನ್ನುವ ಷರತ್ತುಗಳನ್ನ ನೀಡಿ ಅವಕಾಶ ನೀಡಿದೆ.
ಕಾರವಾರದ ಲಂಡನ್ ಬ್ರಿಡ್ಜ್ ನಿಂದ ಬಿಣಗಾದವರಗೆ ಗುಡ್ಡವನ್ನ ಕೊರೆದು ಸುರಂಗ ತೆಗೆಯಲಾಗಿದೆ. ಮಳೆಗಾಲದ ಪೂರ್ವದಲ್ಲಿ ಸಂಸದ ಅನಂತಕುಮಾರ ಹೆಗಡೆ ಈ ಸುಂಗರ ಮಾರ್ಗ ಉದ್ಘಾಟಿಸಿದ್ದರು. ಮಳೆಗಾಲದವರೆಗೂ ಎಲ್ಲಾ ವಾಹನಗಳು ಇದೆ ಮಾರ್ಗವಾಗಿ ಸಂಚರಿಸುತ್ತಾ ಇತ್ತು.
ಆದರೆ ಮಳೆಗಾಲದಲ್ಲಿ ಟನೆಲ್ ಸೋರಿಕೆಯಾಗಿರುವುದರಿಂದ ಅದನ್ನ ಸ್ಥಗಿತ ಮಾಡಲಾಗಿತ್ತು. ಈಗಾಗಲೆ ಈ ಚತುಷ್ಪಥ ಹೆದ್ದಾರಿಯಲ್ಲಿ ಸಾಕಷ್ಟು ಸಾವು ನೋವುಗಳು ಸಂಭವಿಸಿರುವ ಕಾರಣ, ಈ ಟೆನೆಲ್ ಸಂಚಾರಕ್ಕೆ ಯೋಗ್ಯವಾಗಿದೇಯಾ ಇಲ್ಲವಾ ಎನ್ನುವ ಕುರಿತಾಗಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರು ಗುತ್ತಿಗೆ ಕಂಪನಿ ಬಳಿ ಫಿಟ್ನೆಸ್ ಸರ್ಟಿಫಿಕೇಟ್ ನೀಡುವಂತೆ ಕೇಳಿದ್ದರು.
ಆದರೆ ಗುತ್ತಿಗೆ ಪಡೆದ ಕಂಪನಿ ಬಳಿ ಯಾವುದೇ ಫಿಟ್ನೆಸ್ ಸರ್ಟಿಫಿಕೇಟ್ ಇಲ್ಲದ ಕಾರಣ ಕಂಪನಿ ಟನೆಲ್ ಬಂದ್ ಮಾಡಲಾಗಿತ್ತು ಎನ್ನಲಾಗಿದೆ. ಇಷ್ಟುದಿನ ಕಳೆದರು ಗುತ್ತಿಗೆ ಕಂಪನಿ ಜಿಲ್ಲಾಡಳಿತಕ್ಕೆ ಫಿಟ್ನೆಸ್ ಸರ್ಟಿಫಿಕೇಟ್ ನೀಡಿರಲಿಲ್ಲ.ಆದರೆ ಟನೆಲ್ ಓಪನ್ ಮಾಡುವಂತೆ ಸಾರ್ವಜನಿಕರ ಒತ್ತಡ ಹೆಚ್ಚಾಗಿದ್ದರಿಂದ ಇದೀಗ ಜಿಲ್ಲಾಡಳಿತ ಇಂದಿನಿಂದ ಟನಲ್‌ನಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಿದೆ.
ಆದರೆ ಸಂಚಾರದ ವೇಳೆ ಏನೆ ಅವಘಢಗಳು ಸಂಬಂವಿಸಿದ್ದರು ಕೂಡ ಅದಕ್ಕೆ ಐಆರ್ ಬಿ ಕಂಪನಿಯೇ ನೇರ ಹೊಣೆ ಎಂದು ಪತ್ರದಲ್ಲಿ ಉಲ್ಲೇಖಿಸಿದೆ. ಇದಕ್ಕೆಲ್ಲಾ ಒಪ್ಪಿಕೊಂಡು ಕಂಪನಿ ಸುರಂಗ ಮಾರ್ಗದಲ್ಲಿ ಇಂದಿನಿಂದ ವಾಹನ ಸಂಚಾರ ಆರಂಭಿಸಿದೆ.
ಇನ್ನೂ ಇದೆ ತಿಂಗಳ 8ರಂದು ನುರಿತ ತಜ್ಞನರನ್ನ ತಂದು ಜಿಲ್ಲಾಡಳಿತದ ಸಮ್ಮುಖದಲ್ಲಿಯೆ ಸುರಂಗ ಮಾರ್ಗವನ್ನ ಪರಿಶೀಲನೆ ನಡೆಸುವಂತೆ ಸಹ ಪತ್ರಸಲ್ಲಿ ತಿಳಿಸಲಾಗಿದ್ದು, ಇದಕ್ಕೆ ತಪ್ಪಿದಲ್ಲಿ ಮುಂದಿನ ಕ್ರಮವನ್ನ ಜಿಲ್ಲಾಡಳಿತ ತೆಗೆದುಕೊಳ್ಳುವ ಅವಕಾಶ ಸಹ ಇದೆ.