ಸುದ್ದಿಬಿಂದು ಬ್ಯೂರೋ ವರದಿ
Murudeshwar:ಮುರುಡೇಶ್ವರ : ಚನ್ನಪ್ಪಣ್ಣ ಉಪ ಚುನಾವಣೆ ಸೇರಿ ಮೂರು ಕ್ಷೇತ್ರದಲ್ಲಿಯೂ ನಮ್ಮ ಅಭ್ಯರ್ಥಿಗಳು ಗೆಲ್ಲುತ್ತಾರೆ.ಆದರೆ ಈಗಾಗಲೇ ಬಂದಿರುವ ಎಕ್ಸಿಟ್ ಪೋಲ್ ಸಂಪೂರ್ಣವಾಗಿ ಉಲ್ಟಾ ಆಗಲಿದೆ ಎಂದು. ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ನಿನ್ನೆಯಿಂದ ಆರಂಭವಾದ ವಿಶ್ವ ಮೀನುಗಾರಿಕಾ ದಿನಾಚರಣೆ ಕಾರ್ಯಕ್ಕೆ ಆಗಮಿಸಿ ಇಂದು ವಾಪಸ್ ಬೆಂಗಳೂರಿಗೆ ತೆರಳುವ ವೇಳೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಚನ್ನಪಟ್ಟಣ ಕ್ಷೇತ್ರದಲ್ಲೂ ಗೆಲ್ಲುತ್ತೇವೆ .ಇವತ್ತೆ ಹೇಳುತ್ತೇನೆ ಎಕ್ಸಿಟ್ ಪೋಲ್ ಸುಳ್ಳಾಗುತ್ತದೆ ಮೂರು ಕ್ಷೇತ್ರ ಗೆಲ್ಲುವ ವಿಶ್ವಾಸ ಇದೆ.ಮಹಾರಾಷ್ಟ್ರ ಚುನಾವಣೆಯಲ್ಲೂ ಅಧಿಕಾರಕ್ಕೆ ಬರುತ್ತೇವೆ. ಮಾರ್ಜಿನ್ ನಲ್ಲಿ ಅಧಿಕಾರಕ್ಕೆ ನಾವು ಬರುತ್ತೇವೆ.ಸಚಿವ ಜಮೀರ್ ಹೇಳಿಕೆ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ ಜಮೀರ್ ಒಳ್ಳೆ ಹುಡುಗ, ಒಳ್ಳೆ ಸಂಘಟಕ. ಆತುರದಲ್ಲಿ ಕೆಲವೊಮ್ಮೆ ಮಾತಮಾಡುತ್ತಾನೆ. ನಾನು ವಾರದ ಹಿಂದೆಯೇ ಬುದ್ದಿವಾದ ಹೇಳಿದ್ದೇನೆ.ಪಾರ್ಟಿ ಪ್ರೆಸಿಟೆಂಟ್ ಆಗಿ ನಾನೇ ಬುದ್ದಿವಾದ ಹೇಳಿದ್ದೇನೆ. ಇದೇ ಅಂತಿಮ, ಜಮೀರ್ ಸಹ ಕ್ಷಮೆ ಕೇಳಿದ್ದಾರೆ ಎಂದಿದ್ದಾರೆ..
ಗಮನಿಸಿ