‘suddibindu.in
ಧಾರವಾಡ: ಸಿಎಂ ಸಿದ್ದರಾಮಯ್ಯ ಅವರು ಅನುಮತಿ ಕೊಟ್ಟರೆ ಸಿ ಎಂ ಆಗಲು ಸಿದ್ದ ಎಂದು ಹೇಳಿಕೆ ನೀಡಿದ್ದ ಆಡಳಿತ ಸುಧಾರಣೆ ಆಯೋಗದ ಅಧ್ಯಕ್ಷ ಆರ್ ವಿ ದೇಶಪಾಂಡೆ ಇದೀಗ ಯೂರ್ಟನ್ ಹೊಡೆದಿದ್ದಾರೆ.’ನಾನು ಯಾವ ರೇಸ್‌ನಲ್ಲೂಇಲ್ಲ, ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿಯಾಗಿ ಇರುತ್ತಾರೆ’ ಎನ್ನುವ ಮೂಲಕ ದೇಶಪಾಂಡೆ ಸಿ ಎಂ ರೇಸ್‌ನಿಂದ ಹಿಂದೆ ಸರಿದಿದ್ದಾರೆ..
ಈ ಕುರಿತು ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತ್ನಾಡಿದ ಆರ್ ವಿ ದೇಶಪಾಂಡೆ, ‘ಸಿದ್ದರಾಮಯ್ಯ ನೇತೃತ್ವದಲ್ಲಿ ನಮ್ಮ ಉತ್ತಮ ಆಡಳಿತ ನಡೆಸುತ್ತಿದೆ. ಅವರೆ ಸಿ ಎಂ ಆಗಿ ಮುಂದುವರೆಯಲಿದ್ದಾರೆ ಎಂದಿರುವ ದೇಶಪಾಂಡೆ ಸಿದ್ದರಾಮಯ್ಯ ಅವರ ನಾಯಕತ್ವದ ಬಗ್ಗೆ ಯಾರೊಬ್ಬರಿಗೂ ಅಸಮಾಧಾನ ಇಲ್ಲ ಎಂದಿದ್ದಾರೆ.
ಪ್ರತಿಯೊಬ್ಬರಲ್ಲಿಯೂ ಸಿ ಎಂ ಆಗಬೇಕು ಎನ್ನುವ ಆಸೆ ಇರುವ ಬಗ್ಗೆ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆಗೆ ಸಂಬಂಧಿಸಿದ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ‘ಆಸೆ ಬೇರೆ, ದುರಾಸೆಯೇ ಬೇರೆ. ಆಸೆ, ದುರಾಸೆಪಡಲು ಅವಕಾಶ ಇಲ್ಲ’ ಎಂದರು.
ಒಟ್ಟಿನಲ್ಲಿ ಇಷ್ಟು ದಿನ ಸಿ ಎಂ ಆಗುವು ಬಗ್ಗೆ ಮಾತ್ನಾಡುತ್ತಿದ್ದ ಆರ್ ವಿ ದೇಶಪಾಂಡೆ ಅವರ ಈ ಹೇಳಿಕೆಯನ್ನ ನೋಡಿದರೆ ಸಿ ಎಂ ಬದಲಾವಣೆ ಸದ್ಯಕ್ಕೆ ಇಲ್ಲ ಎನ್ನುವಂತೆ ಕಾಣತ್ತಾ ಇದೆ. ಈ ಸುಳಿವು ಸಿಕ್ಕ ಕಾರಣಕ್ಕೆ ಆರ್ ವಿ ದೇಶಪಾಂಡೆ ಅವರು ಸಿಎಂ ರೇಸ್‌ನಿಂದ ಹಿಂದೆ ಸರಿದಿರುವಂತೆ ಕಾಣತ್ತಾ ಇದೆ.
ಇದನ್ನೂ ಓದಿ