ಕಾರವಾರ: ವಿವಾಹಿತ ಮಹಿಳೆಯನ್ನು ಲೈಂಗಿಕವಾಗಿ ಬಳಸಿಕೊಂಡು, ಬ್ಲ್ಯಾಕ್‌ಮೇಲ್ ಮಾಡಿದ ಆರೋಪಿ ಓರ್ವನನ್ನ ಕಾರವಾರದ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಆರ್ಲಪದವು ಮೂಲದ ಪ್ರಶಾಂತ ಭಟ್ ಮಾಣಿಲ ಬಂಧಿತ ಆರೋಪಿಯಾಗಿದ್ದಾನೆ. ಉತ್ತರ ಕನ್ನಡ ಜಿಲ್ಲೆಯ ವಿವಾಹಿತ ಮಹಿಳೆ (ಸ್ಥಳ ಮತ್ತು ಹೆಸರನ್ನು ಗೌಪ್ಯವಾಗಿಡಲಾಗಿದೆ) ಸಂಗೀತ ಆಸಕ್ತಿ ಹೊಂದಿದ್ದಳು ಹೀಗಾಗಿ ಈಕೆ ಕ್ಲಬ್ ಹೌಸ್ ಆ್ಯಪ್ (club house app) ನಲ್ಲಿ ಹಾಡುತಿದ್ದಳು. ಈ ವೇಳೆ ಪ್ರಶಾಂತ್ ಭಟ್ ಪರಿಚಯವಾಗಿದ್ದಾನೆ. ಈ ಪರಿಚಯ ಇಬ್ಬರಲ್ಲೂ ಪ್ರೀತಿಗೆ ತಿರುಗಿದೆ.

2023ರ ಜನವರಿ ತಿಂಗಳಲ್ಲಿ ಆರೋಪಿಯು ಮಹಿಳೆಯನ್ನು ಭೇಟಿಯಾಗಲು ಬಂದು ಖಾಸಗಿ ಲಾಡ್ಜ್ ಒಂದರಲ್ಲಿ ರೂಂ ಮಾಡಿದ್ದನು .ಈ ವೇಳೆ ಅಲ್ಲಿಗೆ ಬಂದಿದ್ದ ಈ ಮಹಿಳೆಯನ್ನು ಪ್ರೀತಿಯ ನಾಟಕವಾಡಿ ಸೆಕ್ಸ್ ಗೆ ಬಳಸಿಕೊಂಡಿದ್ದಾನೆ.

ನಂತರ ಪೆಬ್ರವರಿ ತಿಂಗಳಲ್ಲಿ ಅದೇ ಲಾಡ್ಜ್ ನಲ್ಲಿ ರೂಮ್ ಮಾಡಿ ಆಕೆಯನ್ನು ಕರೆಸಿಕೊಂಡು ಕಾಮಕೇಳಿ ಆಟವಾಡಿ ಆಕೆಯ ಖಾಸಗಿ ಕ್ಷಣಗಳನ್ನು ತನ್ನ ಮೊಬೈಲ್ ನಲ್ಲಿ ರೆಕಾರ್ಡ ಮಾಡಿದ್ದಾನೆ.

ಇದಲ್ಲದೇ ಈಕೆ ಮನೆಯಲ್ಲಿದ್ದಾಗ ವಿಡಿಯೋ ಕಾಲ್ (video call) ಮಾಡಿ ಆಕೆಯನ್ನು ಬೆತ್ತಲಾಗುವಂತೆ ಹೇಳಿ ಇವುಗಳ ಪೋಟೋ ಮಾಡಿಕೊಂಡಿದ್ದಾನೆ. ನಂತರ ಈಕೆಗೆ ತಾನು ಸೆಕ್ಸ್ ಮಾಡಿದ್ದ ವಿಡಿಯೋ ವನ್ನು ಕಳುಹಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದು ಮೊದಲು ಆ ವಿವಾಹಿತ ಮಹಿಳೆಯಿಂದ 25 ಸಾವಿರ ಹಣ ಪಡೆದಿದ್ದಾನೆ.
ಬಳಿಕ ಮಹಿಳೆಯ ಖಾಸಗಿ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುವುದಾಗಿ ಬೆದರಿಸಿ 7 ಲಕ್ಷ ರೂ.ಗೆ ಗಳಿಗೆ ಬೇಡಿಕೆ ಇಟ್ಟಿದ್ದ ಅಲ್ಲದೇ, ಮಹಿಳೆಯ ತಾಯಿ ಹಾಗೂ ಸ್ನೇಹಿತರಿಗೂ ಖಾಸಗಿ ಕ್ಷಣಗಳ ಚಿತ್ರಗಳನ್ನು ಕಳುಹಿಸಿದ್ದನು.

ತಾನು ಪರಪುರುಷನೊಂದಿಗೆ ಮಾಡಿದ ತಪ್ಪಿನಿಂದಾಗಿ ಪಶ್ಚಾತ್ತಾಪ ಪಟ್ಟ ಮಹಿಳೆ ತಾನು ಮೋಸ ಹೋಗಿದ್ದನ್ನು ಅರಿತು ತನ್ನ ಪತಿಗೆ ಹಾಗೂ ಕುಟುಂಬಕ್ಕೆ ನಡೆದ ಘಟನೆಯನ್ನು ವಿವರಿಸಿದ್ದಾಳೆ.

ನಂತರ ಆಕೆಯ ಪತಿ ಕಾರವಾರದ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದು ಇದೀಗ ಆತನನ್ನು ಕಾರವಾರದ ಮಹಿಳಾ ಠಾಣೆ ಪೊಲೀಸರ ತಂಡ ಬಂಧಿಸಿ ಹೆರೆಮುಡಿ ಕಟ್ಟಿದ್ದಾರೆ.