ಸುದ್ದಿಬಿಂದು ಬ್ಯೂರೋ ವರದಿ
ಹೊನ್ನಾವರ : ಬೀಚ್ ಪ್ರವಾಸೋದ್ಯಮ, ಧಾರ್ಮಿಕ ಕ್ಷೇತ್ರದ ಪ್ರವಾಸೋದ್ಯಮ, ಪರಿಸರ ಪ್ರವಾಸೋದ್ಯಮ ಹೊಂದಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗ ಮೊದಲ ಬಾರಿಗೆ ವಾಟರ್ ಪಾರ್ಕ್ ಪ್ರವಾಸೋದ್ಯಮ ಸೇರ್ಪಡೆಯಾಗಿದೆ.ಆರಂಭದಲ್ಲೆ ಪ್ರವಾಸಿಗರನ್ನ ಸೆಳೆಯುತ್ತಿದ್ದು ಏಂಜಾಯ್ ಮಾಡತ್ತಿದ್ದಾರೆ
.

ಹೊನ್ನಾವರ ತಾಲ್ಲೂಕಿನ ಶರಾವತಿ ನದಿ ದಂಡೆ ಮಾವಿನಕುರ್ವೆಯಲ್ಲಿ ಆಂಥೋನಿ ಮತ್ತು ಸುದರ್ಶನ್ ಪಿಳ್ಳೆ ಇವರ ಮಾಲಿಕತ್ವದಲ್ಲಿ ನಿರ್ಮಾಣವಾದ ಜಾಯ್ ಎಂಡ್ ಜಾಯ್ ಹೆಸರಿನ ವಾಟರ್ ಪಾರ್ಕ್.‌ಈ ಮೂಲಕ ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮಕ್ಕೆ ವಾಟರ್ ಪಾರ್ಕ್ ಸೇರ್ಪಡೆಯಾಗಿದ್ದು ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ.ಈಗಾಗಲೆ ವೇಗವಾಗಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಬೆಳೆಯುತ್ತಿರುವ ಹೊನ್ನಾವರ ಶರಾವತಿ ನದಿ ಹಿನ್ನೀರಿನಲ್ಲಿ ನಡೆಯುವ ಬೋಟಿಂಗ್ ನಿಂದ ಪ್ರಸಿದ್ಧಿ ಪಡೆದಿತ್ತು ಈಗ ಅದೆ ದಂಡೆಯಲ್ಲಿ 12ಎಕರೆ ಜಾಗದಲ್ಲಿ ನಿರ್ಮಾಣವಾದ ಬೃಹತ್ ವಾಟರ್ ಪಾರ್ಕ್ ಈಗ ಪ್ರವಾಸಿಗರ ಎಂಜಾಯ್ ಮೆಂಟ್ ಗೆ ಮತ್ತೊಂದು ವೇದಿಕೆಯಾಗಿದೆ, ಈಗಾಗಲೆ ಹೊನ್ನಾವರ ತಾಲೂಕು ಇಕೋ ಬೀಚ್, ಕಾಂಡ್ಲಾ ನಡಿಗೆ, ಶರಾವತಿ ಹಿನ್ನೀರಿನಲ್ಲಿ ನಡೆಯುವ ಬೋಟಿಂಗ್ ನಿಂದ ಭಾರೀ ಗಮನಸೆಳೆದಿತ್ತು ಈಗ ವಾಟರ್ ಪಾರ್ಕ್ ಕೂಡ ಅದೆ ಮಾದರಿಯಲ್ಲಿ ಪ್ರವಾಸಿಗರ ಗಮನ ಸೆಳೆಯುತ್ತಿದೆ…..

ಇನ್ನೂ ಈಗ ನಿರ್ಮಾಣವಾದ ವಾಟರ್ ಪಾರ್ಕ್ ಉತ್ತರ ಕನ್ನಡ ಜಿಲ್ಲೆಯಲ್ಲೆ ಮೊದಲನೆದಾಗಿ ನಿರ್ಮಾಣವಾಗಿದೆ, ಜಿಲ್ಲೆಯ ಜನ ವಾಟರ್ ಪಾರ್ಕ್ ಸವಿ ಸವೆಯಲು ಪಕ್ಕದ ಗೋವಾ ರಾಜ್ಯ, ಇಲ್ಲವೆ ಪಕ್ಕದ ದಕ್ಷಿಣ ಕನ್ನಡ ಜಿಲ್ಲೆಗೆ ವಾಲುತ್ತಿದ್ದರು ಆದರೆ ಈಗ ಜಿಲ್ಲೆಯ ಹೊನ್ನಾವರದಲ್ಲಿ ನಿರ್ಮಾಣವಾಗಿದ್ರಿಂದ ಇದು ಪ್ರವಾಸಿಗರಿಗೆ ಸಿಕ್ಕ ದೊಡ್ಡ ಅವಕಾಶವಾಗಿದೆ.ಹೊನ್ನಾವರ ಶರಾವತಿ ನದಿ ಹಿನ್ನೀರಿನ ಪ್ರದೇಶದಲ್ಲಿ ಈ‌ ಹಿಂದೆ ಬೃಹತ್ ಪ್ರಮಾಣದಲ್ಲಿ ಮರಳುಗಾರಿಕೆ ನಡೆಯುತ್ತಿತ್ತು ಆದರೆ ಬದಲಾದ ವ್ಯವಸ್ಥೆ ಮರಳುಗಾರಿಕೆ ನಿಷೇಧ ಇರುವ ಹಿನ್ನಲೆಯಲ್ಲಿ ಈಗ ಪ್ರವಾಸೋದ್ಯಮ ಸ್ಥಳವಾಗಿ ಬದಲಾಗಿದೆ. ಈ‌ ನಡುವೆ ಈಗ ಇದೆ ಜಾಗದಲ್ಲಿ ವಾಟರ್ ಪಾರ್ಕ್‌ ನಿರ್ಮಾಣವಾಗಿದ್ದು ಪ್ರವಾಸೋದ್ಯಮಕ್ಕೆ ಮತ್ತೊಂದು ಗರಿ ಬಂದಿದೆ.

ಇದನ್ನೂ ಓದಿ