suddibindu.in
ಕಾರವಾರ: ಸರಕಾರಿ ಆಸ್ಪತ್ರೆಗಳಲ್ಲಿ (government hospital) ಸಿಗುವ ಕಾಂಡೋಮ್ (condom packet) ಪ್ಯಾಕೇಟ್‌ಗಳು ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಟ್ಯಾಗೋರ್ ಕಡಲ ತೀರದಲ್ಲಿ (Ravindranath Tagore) ಕಂಡು ಬಂದಿದ್ದು, ಇಲ್ಲಿಗೆ ಬರುವ ಪ್ರವಾಸಿಗರಿಗೆ ಮುಜುಗರ ಉಂಟಾಗುವಂತೆ ಮಾಡಿದೆ..
ಕಡಲತೀರದ ಫುಡ್ ಕೋರ್ಟ್ ಹಿಂಬದಿಯಲ್ಲಿ ಒಂದೇ ಸ್ಥಳದಲ್ಲಿ ರಾಶಿ ರಾಶಿಯಾಗಿ ಕಾಂಡೋಮ್ ಪ್ಯಾಕೆಟ್‌ಗಳು ಬಿದ್ದಿದ್ದು. ಈ ಪ್ಯಾಕೇಟಿನ ಮೇಲೆ ಗೌರ್ಮೆಂಟ್ ಆಫ್ ಇಂಡಿಯಾ ಎಂದು ನಮೂದಿಸಿದೆ. ಸಮುದ್ರ ಅಲೆಗಳಿಂದ ದಡಕ್ಕೆ ಬಂದಿರಬಹುದು ಅಥವಾ ಕಡಲ ತೀರದ ಬಳಿಯ ಮೈದಾನದಿಂದ ಹರಿದು ಬರುವ ನೀರು ಸಮುದ್ರ ಸೇರುವೆಡೆ ನೈಸರ್ಗಿಕವಾಗಿ ನಾಲೆಯೊಂದು ಸೃಷ್ಠಿಯಾಗಿದೆ. ಅಲ್ಲಿಂದಲೇ ನೀರಿನೊಂದಿಗೆ ಕಸ ಸಮುದ್ರ ಸೇರುತ್ತಿದೆ. ನಿರೋಧ್‌ಗಳು ಕೂಡ ಅದೇ ರೀತಿ ತೇಲಿ ಬಂದಿರಬಹುದು ಎನ್ನಲಾಗಿದೆ.
ಇದನ್ನೂ ಓದಿ
- ಮುಡಾ ಹಗರಣ :ಲೋಕಾಯುಕ್ತ ತನಿಖೆಗೆ ಹಾಜರಾದ ಸಿಎಂ ಸಿದ್ದರಾಮಯ್ಯ
- ಮನೆ ಬೀಗ ಮುರಿದು 40ಗ್ರಾಂ ಚಿನ್ನಾಭರಣ ಕಳ್ಳತನ
- ಅಪ್ರಾಪ್ತ ಬಾಲಕಿಗೆ ಮುತ್ತು ಕೊಟ್ಟ ಆರೋಪದಲ್ಲಿ ಹೆಡ್ಕಾನ್ಸಟೇಬಲ್ ಅಮಾನತ್ತು
ಆದರೆ ಸರಕಾರಿ ಆಸ್ಪತ್ರೆಯಲ್ಲಿ ಸಿಗುವ ನಿರೋಧ್‌ಗಳು ಇಷ್ಟು ಪ್ರಮಾಣದಲ್ಲಿ ಒಂದೆಡೆ ಬಿದ್ದಿರುವುದು ಅಚ್ಚರಿ ಮೂಡಿಸಿದೆ.ಕಡಲ ತೀರದಲ್ಲಿ ಓಡಾಡುವ ಪ್ರವಾಸಿಗರು ಹಾಗೂ ಸ್ಥಳೀಯರು ಒಂದೇ ಕಡೆ ಇಷ್ಟೊಂದು ಕಾಂಡೋಮ್ ಪ್ಯಾಕೇಟ್‌ಗಳನ್ನು ಕಂಡು ಅಚ್ಚರಿಪಟ್ಟರು. ಅಲ್ಲದೆ ಥರಾವರಿ ಕತೆ ಕಟ್ಟಿ ಮಾತನಾಡುತ್ತಿದ್ದಾರೆ.