ಸುದ್ದಿಬಿಂದು ಬ್ಯೂರೋ
ಅಂಕೋಲಾ :
ತೋಟವೊಂದರಲ್ಲಿ ತೆಂಗಿನ ಕಾಯಿ ಕೊಯ್ಯಲು ಮರ ವೇರಿದ ವ್ಯಕ್ತಿ ಓರ್ವನ ಮೇಲೆ‌ ಪಕ್ಕದ ತೋಟದವರು ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಹೆಗ್ಗಾರ ಗ್ರಾಮದ ಕೋನಾಳದಲ್ಲಿ ನಡೆದಿದೆ.

ಘಟನೆಯಲ್ಲಿ ತೆಂಗಿನ ಮರ ಹತ್ತಿದ್ದ ನರಸಿಂಹ ಗೋವಿಂದ ನಾಯ್ಕ ಅವರ ಮೇಲೆ ಸುರೇಶ ರಾಮ ಪಟಗಾರ ಎಂಬುವವರು ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿದ್ದಾರೆ. ನರಸಿಂಹ ನಾಯ್ಕ ಅವರು ಸುಬ್ರಮಣ್ಯ ನಾಯ್ಕ ಅವರ ತೋಟದಲ್ಲಿ ತೆಂಗಿನ ಮರವನ್ನ ಹತ್ತಿ ಕಾಯಿ ಕೊಯ್ಯುತ್ತಿದ್ದರು ಎನ್ನಲಾಗಿದೆ. ಈ ವೇಳೆ ಅವರು ಮರದಿಂದ ಕೆಳಗೆ ಎಸೆದ ತೆಂಗಿನ ಕಾಯಿ ಸುರೇಶ ರಾಮ ಪಟಗಾರ ಅವರ ತೋಟದಲ್ಲಿ ಬಿದ್ದಿದ್ದು, ಇದರಿಂದ‌ ಕೋಪಗೊಂಡ ಆರೋಪಿತ ಸುರೇಶ ಪಟಗಾರ ಹಾಗೂ ಆತನ ಪತ್ನಿ ಸೇರಿಕೊಂಡು ಏಕಾಏಕಿಯಾಗಿ ಸುಬ್ರಮಣ್ಯ ಅವರ ತೋಟಕ್ಕೆ ನುಗ್ಗಿ ಕಾಯಿ ಕೊಯ್ಯು ಕೆಳಗೆ ಇಳಿಯುತ್ತಿದ್ದ ನರಸಿಂಹ ನಾಯ್ಕ ಅವರಿಗೆ ಕಟ್ಟಿಗೆಯಿಂದ ತಲೆ ಹಾಗೂ ಮುಖದ ಮೇಲೆ‌ಹೊಡೆದು ಮಾರಣಾಂತಿಕ ಹಲ್ಲೆ ಮಾಡಿದ್ದಾರೆನ್ನಲಾಗಿದೆ.

ಇದರಿಂದಾಗಿ ಕಾರ್ಮಿಕ ನರಸಿಂಹ ನಾಯ್ಕ ಅವರ ತಲೆ ಹಾಗೂ ಮುಖದ ಭಾಗಕ್ಕೆ ಗಂಭೀರವಾಗಿ ಗಾಯವಾಗಿದೆ. ತಕ್ಷಣ ಆತನಿಗೆ ಅಂಕೋಲಾ ಸರಕಾರಿ ಆಸ್ಪತ ದಾಖಲಿಸಿ ಚಿಕಿತ್ಸೆ ನೀಡಲಾಯಿತ್ತಾದರೂ ಗಂಭೀರ ಗಾಯಗೊಂಡಿರುವ ಕಾರಣ ಆತನಿಗೆ ಕಾರವಾರದ ಕ್ರೀಮ್ಸ್ ಗೆ ರವಾನಿಸಲಾಗಿದೆ. ಇನ್ನೂ ಘಟನೆಯ ಕುರಿತು ಅಂಕೋಲಾ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ‌ದಾಖಲಿಸಿಕೊಂಡ‌ ಪೊಲೀಸರು ಹಲ್ಲೆ‌ ನಡೆಸಿದ ಆರೋಪಿಗಳ ಬಂಧನಕ್ಕಾಗಿ ಕಾರ್ಯಚರಣೆ ನಡೆಸಿದ್ದು, ಆರೋಪಿಗಳು ಸದ್ಯ ತಲೆ‌ ಕರೆಸಿಕೊಂಡಿದ್ದಾರೆನ್ನಲಾಗಿದೆ.