ಸುದ್ದಿಬಿಂದು ಬ್ಯೂರೋ
ಕಾರವಾರ: ಗಣೇಶ ವಿಸರ್ಜನೆ ಮೆರೆವಣಿಗೆ ಸಂದರ್ಭದಲ್ಲಿ ‌ಕರ್ತವ್ಯದಲ್ಲಿದ್ದ ಚಿತ್ತಾಕುಲ ಪೊಲೀಸ್ ಠಾಣೆಯ ಪಿಎಸ್ಐ ಮಾಹಾಂತೇಶ ವಾಲ್ಮೀಕಿ ಅವರನ್ನ ತಡೆದು ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಲ್ಲದೆ ಅವರ ಶರ್ಟ್‌ ಕಾಲರ್ ಹಿಡಿದು ಹಲ್ಲೆಗೆ ಯತ್ನಿಸಿದ್ದ ವ್ಯಕ್ತಿಯನ್ನ ಬಂಧಿಸಿರುವ ಘಟನೆ ಕಾರವಾರದ ಚಿತ್ತಾಕುಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ದಿಲೀಪ್ ಜ್ಞಾನೇಶ್ವರ ಗಜನಿಕರ್ ಬಂಧಿತ ಆರೋಪಿತನಾಗಿದ್ದಾನೆ..ಈತ ಗಣಪತಿ ವಿಸರ್ಜನೆ ಮೆರವಣಿಗೆ ಕರ್ತವ್ಯದಲ್ಲಿದ್ದ ಚಿತ್ತಾಕುಲ ಪಿಎಸ್ಐ ಮಹಾಂತೇಶ ಅವರು ಮೆರೆವಣಿಗೆ ಮುಂದೆ ಸಾಗುವಂತೆ ಸೂಚನೆ ನೀಡಿದ್ದರು ಎನ್ನಲಾಗಿದೆ.ಈ ವೇಳೆ ದಿಲೀಪ್ ಜ್ಞಾನೇಶ್ವರ್ ನಾವು ಡಿಜೆ ಹಾಡಿಗೆ ಡ್ಯಾನ್ಸ್‌ ಮಾಡಬೇಕು ನಮ್ಮನ್ನು ತಡೆಯಬೇಡಿ ಎಂದು ಹೇಳಿ ಕರ್ತವ್ಯದಲ್ಲಿದ್ದ ಪಿಎಸ್ಐ ಪಿಎಸ್ಐ ಅವರನ್ನ ತಡೆದು ಅವರ ಶರ್ಟ್ ಕಾಲರ್ ಹಿಡಿದು ಅವರ‌ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದ ಎನ್ನಲಾಗಿದೆ.

ಆತನನ್ನ ಬಂಧಿಸಿರುವ ಪೊಲೀಸರು ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಆರೋಪಿತ ದಿಲೀಪ್ ಜ್ಞಾನೇಶ್ವರ ಗಜನಿಕರ್ ವಿರುದ್ಧ ಕಲಂ: 132, 126(2), 351(2) ದಾಖಲಾಗಿದ್ದು. ಪ್ರಕರಣಕ್ಕೆ ಸಂಬಂಧಿಸಿ ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಆರೋಪಿತ ತನ್ನ ಮೇಲೆ ಪಿಎಸ್ಐ ಮಹಾಂತೇಶ ಅವರೇ ಹಲ್ಲೆ ಮಾಡಿದ್ದಾರೆಂದು ಆರೋಪಿಸಿದ್ದರು. ಇದಕ್ಕೆ ಸಂಬಧಿಸಿ ಆತನನ್ನ ವೈದ್ಯಕೀಯ ತಪಾಸಣೆ ಮಾಡಿದ್ದು, ತಪಾಸಣೆ ಮಾಡಿದ ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿಗಳು, ಆರೋಪಿತನು ದೈಹಿಕವಾಗಿ ಸದೃಡವಾಗಿರುವ ಬಗ್ಗೆ ಪ್ರಮಾಣ ಪತ್ರವನ್ನು ನೀಡಿದ್ದು, ಆರೋಪಿತನ ದಸ್ತಗಿರಿಯ ವೇಳೆ ಯಾವುದೇ ಹಲ್ಲೆ ಮಾಡಿದ್ದು ಇರುವುದಿಲ್ಲವೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.

ಗಮನಿಸಿ