Manipal:ಮಣಿಪಾಲ (ಉಡುಪಿ): ಕುಶಾಲನಗರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಜಗದೀಶ್ ಅವರಿಗೆ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್‌ನಿಂದ ಡಾಕ್ಟರೇಟ್‌ ಪದವಿ ನೀಡಲಾಗಿದೆ.

ಜಗದೀಶ್ ಅವರು ಎಮ್‌ಐಟಿಯ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಡಾ.ಕೆ.ಬಾಲಕೃಷ್ಣ ರಾವ್ ಅವರ ಮಾರ್ಗದರ್ಶನದಲ್ಲಿ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಿವಿಲ್ ಎಂಜಿನಿಯರಿಂಗ್‌ನಿಂದ ಡಾಕ್ಟರೇಟ್‌ ಪದವಿಗೆ ಸಂಶೋಧನಾ ಪ್ರಬಂಧ ಮಂಡಿಸಿದ್ದರು.

‘ಎಫೆಕ್ಟ್ ಆಫ್ ಮ್ಯಾನುಫ್ಯಾಕ್ಚರ್ಡ್ ಸ್ಯಾಂಡ್ ಆ್ಯಂಡ್ ಸ್ಟೀಲ್ ಸ್ಲ್ಯಾಗ್ ಅಗ್ರಿಗೇಟ್ ಆನ್ ಸ್ಟ್ರೆಂಥ್ ಆ್ಯಂಡ್ ಡ್ಯುರೇಬಲಿಟಿ ಪ್ರಾಪರ್ಟೀಸ್ ಆಫ್ ಹೈ ಪರ್ಫಾರ್ಮೆನ್ಸ್ ಕಾಂಕ್ರೀಟ್: ಆ್ಯನ್ ಎಕ್ಸ್ಪಿರಿಮೆಂಟಲ್ ಅಪ್ರೋಚ್’ ಸಂಶೋಧನಾ ಪ್ರಬಂಧವನ್ನು ಅವರು ಸೋಮವಾರ ಎಮ್‌ಐಟಿಯ ಹಂಪಿ ಸೆಮಿನಾರ್ ಹಾಲ್‌ನಲ್ಲಿ ಅವರು ಪ್ರಸ್ತುತಪಡಿಸಿದರು.

ಕಾರವಾರದ ಮಾಜಾಳಿಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿಭಾಗದಲ್ಲಿ 2011ರಿಂದ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ಜಗದೀಶ್, ಕಳೆದ ತಿಂಗಳಷ್ಟೇ ಕುಶಾಲನಗರ ಎಂಜಿನಿಯರಿಂಗ್ ಕಾಲೇಜಿಗೆ ವರ್ಗಾವಣೆಗೊಂಡಿದ್ದರು. ಕಾರವಾರದಲ್ಲಿದ್ದಾಗಲೇ ಅವರು ಪಿಎಚ್ಡಿ ಅಧ್ಯಯನ ನಡೆಸುತ್ತಿದ್ದರು.

ಗಮನಿಸಿ