ಬೆಂಗಳೂರು:ಕಳೆದ ಕೆಲ ದಿನಗಳಿಂದ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಿದ್ದು, ಬಂಗಾರ ಖರೀದಿಸುವವರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ನಿನ್ನೆ ಸಹ ಭಾರೀ ಬೆಲೆ ಏರಿಕೆ ಕಂಡ ಬಂಗಾರ ಇಂದು ಸಹ ಬೆಲೆ ಏರಿಕೆ ಮುಂದುವರಿದಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆ ಆಗಿರುವುದ ಇದಕ್ಕೆ ಪ್ರಮುಖ ಕಾರಣವಾಗಿದೆ. ಇದರ ಪರಿಣಾಮ ದೇಶೀಯ ಮಾರುಕಟ್ಟೆಯಲ್ಲೂ ಬೆಲೆ ಏರಿಕೆ ಆಗುತ್ತಿದೆ.
ಬೆಂಗಳೂರಲ್ಲಿ ಚಿನ್ನದ ಬೆಲೆ 22ಕ್ಯಾರೆಟ್ ಚಿನ್ನದ ದರ ಪ್ರತಿ 10 ಗ್ರಾಂ ಗೆ ಮತ್ತೆ 400 ರೂ. ಏರಿಕೆಯಾಗಿದ್ದು, ₹68,650ಕ್ಕೆ ಆಗಿದೆ. 24 ಕ್ಯಾರೆಟ್ ಅಪರಂಜಿ ಚಿನ್ನದ ದರ ಕೂಡ ಪ್ರತಿ 10 ಗ್ರಾಂಗೆ 440 ರೂ. ಏರಿಕೆಯಾಗಿದ್ದು, ₹74,890ರಲ್ಲಿ ಸಾಗುತ್ತಿದೆ.
ದೆಹಲಿಯಲ್ಲಿ 22ಕ್ಯಾರೆಟ್ ಚಿನ್ನದ ಬೆಲೆ 400 ರೂ. ಏರಿಕೆಯಾಗಿದ್ದು, 68,800 ರೂ. ಇದೆ. 24 ಕ್ಯಾರೆಟ್ ಚಿನ್ನದ ದರ ಪ್ರತಿ 10 ಗ್ರಾಂಗೆ 440 ರೂ. ಏರಿಕೆಯಾಗಿದ್ದು, 74,040ರಲ್ಲಿ ವಹಿವಾಟಾಗುತ್ತಿದೆ.ಬೆಳ್ಳಿ ಬೆಲೆ ಎರಡೇ ದಿನದಲ್ಲಿ 5500 ರೂ. ಏರಿಕೆ
ಬೆಂಗಳೂರಲ್ಲಿ ಬೆಳ್ಳಿ ಬೆಲೆ ರಾಕೆಟ್ ವೇಗದಲ್ಲಿ ಗಗನಕ್ಕೇರುತ್ತಿದೆ. ಬೆಳ್ಳಿ ಬೆಲೆ ಪ್ರತಿ ಕೆಜಿಗೆ 3500 ರೂ. ಏರಿಕೆಯಾಗಿದ್ದು.ಮತ್ತೆ 2000 ರೂ. ಹೆಚ್ಚಳವಾಗಿದೆ. ಅಂದರೆ, ಕಳೆದ ಎರಡು ದಿನದಲ್ಲಿ ಬೆಳ್ಳಿ ಬೆಲೆ ಒಟ್ಟು 5500 ರೂ. ಏರಿಕೆ ಆದಂತಾಗಿದೆ. ಬೆಂಗಳೂರಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 97,000 ರೂ. ಗಡಿ ದಾಟಿದೆ. ದೆಹಲಿಯಲ್ಲಿ ಬೆಳ್ಳಿ ಬೆಲೆ 2500 ರೂಪಾಯಿ ಏರಿಕೆಯಾಗಿದ್ದು, 92,000 ರೂ. ತಲುಪಿದೆ.
ಗಮನಿಸಿ