ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಯತಿ ನರಸಿಂಹಾನಂದ ಗಿರಿ ಸರಸ್ವತಿ ಯಿಂದ ಕೋಮುವಾದಿ ಭಾಷಣ ಮಾಡಿ , ಪ್ರವಾದಿ ಅವರನ್ನು ಅವಮಾನಿಸಿದ್ದನ್ನು ವಿರೋಧಿಸಿ ಮಂಗಳವಾರ ಭಟ್ಕಳ ಬಂದ್‌ಗೆ ಕರೆ ನೀಡಲಾಗಿದೆ..

ಕಳೆದ ಸೆಪ್ಟಂಬರ್ 29 ರಂದು ಉತ್ತರ ಪ್ರದೇಶ ರಾಜ್ಯದ ಗಾಜಿಯಾಬಾದ್ , ಲೋಹಿಯಾ ನಗರದ ಹಿಂದಿ ಸಭಾಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದಾಸ್ನಾ ದೇವಸ್ಥಾನದ ಪ್ರಧಾನ ಅರ್ಚಕರಾದ ಯತಿ ನರಸಿಂಹಾನಂದ ಗಿರಿ ಸರಸ್ವತಿ ಎಂಬುವವರು ಪ್ರವಾದಿ ಒಬ್ಬರ ವಿರುದ್ಧ ಅವಮಾನಕರ ಭಾಷಣ ಮಾಡಿದ್ದರು.‌ ಇಸ್ಲಾಂ ಧರ್ಮದ ವಿರುದ್ಧ ಕೋಮು ಪ್ರಚೋದಕ ಭಾಷಣ ಮಾಡಿ ಉದ್ದೇಶ ಪೂರ್ವಕವಾಗಿ ಮುಸ್ಲಿಮರ ಭಾವನೆಗೆ ದಕ್ಕೆ ತಂದಿದ್ದರು‌.ದೇಶದ ಕೋಮು ಸೌಹಾರ್ದತೆಯನ್ನು ಹಾಳುಗೆಡವಿ ಉದ್ವಿಗ್ನತೆ ಉಂಟು ಮಾಡುವ ಉದ್ದೇಶವನ್ನು ಅವರ ಭಾಷಣ ಹೊಂದಿತ್ತು ಎಂದು ಭಟ್ಕಳದ ತಂಜೀಮ್ ಸಂಸ್ಥೆ ಆರೋಪಿಸಿದೆ.‌

ಯತಿ ನರಸಿಂಹಾನಂದ ಗಿರಿ ಸರಸ್ವತಿ ಅವರು
ಮುಸ್ಲಿಂ ಸಮುದಾಯವನ್ನು ಕೀಳಾಗಿ ಕಾಣುವ ಗುರಿ ಹೊಂದಿದ್ದಾರೆ.ಅವರ ಕೋಮುಪ್ರಚೋದಕ ಭಾಷಣ ಇದನ್ನು ಸಾಬೀತು ಮಾಡಿದೆ.ಆದರಿಂದ ಯತಿ ನರಸಿಂಹಾನಂದ ಗಿರಿ ಸರಸ್ವತಿ ವಿರುದ್ಧ ಸೂಕ್ತ ಕಾನೂನಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ತಂಝೀಮ್ ಸಂಸ್ಥೆಯು ಮಂಗಳವಾರ 15-10-2024 ರಂದು ಬೆಳಿಗ್ಗೆ 6-00 ಗಂಟೆಯಿಂದ ಬುಧುವಾರ ಬೆಳಗಿನತನಕ (ಒಂದು ದಿನ) ಮುಸ್ಲಿಂ ಸಮುದಾಯದಿಂದ ಅಂಗಡಿ ಮುಂಗಟ್ಟುಗಳು ಬಂದ್ ಮಾಡಿ ಭಟ್ಕಳ ತಾಲೂಕಿನ ವ್ಯಾಪ್ತಿಯಲ್ಲಿ ಬಂದ್ ನಡೆಸುವುದಾಗಿ ಪ್ರಕಟಿಸಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ ಏರ್ಪಡಿಸಿದ್ದಾರೆ.

ಗಮನಿಸಿ