ತನ್ನ ಸುಂದರ ಕಣ್ಣುಗಳ ಸೌಂದರ್ಯದ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ “ಮೋನಾಲಿಸಾ”ಗೆ ಈಗ ಅಪಾಯ ಎದುರಾಗಿದ್ದು ಭದ್ರತೆ ನೀಡುವಂತೆ ಸಿಎಂ ಯೋಗಿ ಆದಿತ್ಯನಾಥ್ ಬಳಿ ಮನವಿ ಮಾಡಿಕೊಂಡಿದ್ದಾರಂತೆ.
ಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆ ಮಾರುತ್ತಿದ್ದ ಯುವತಿ ತನ್ನ ಸೌಂದರ್ಯದ ಮೂಲಕ. ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್ ಆಗಿದ್ದಾರೆ. ಇಂದೋರ್‌ನ ಈ ಸುಂದರಿಯ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಸೆನ್ಸೇಷನ್ ಆಗಿವೆ. ಆಕೆಯ ಹೆಸರು ಮೋನಾಲಿಸಾ ಎಂದು ವರದಿಯಾಗಿದೆ. ಕುಂಭಮೇಳಕ್ಕೆ ಬಂದವರು ಆಕೆಯ ಸುಂದರ ನೋಟ ಮತ್ತು ನಗುವಿಗೆ ಮರುಳಾಗುತ್ತಿದ್ದಾರೆ. ಆಕೆಯ ಅದ್ಬುತ ಕಣ್ಣುಗಳು ರಾತ್ರೋ ರಾತ್ರಿ ತಾರೆ ಎನಿಸಿಕೊಳ್ಳುವಂತ ಮಾಡಿದೆ.
ಈ ಯುವತಿಗೆ ಈಗ ಸೌಂದರ್ಯವೇ ಶಾಪ ಅನ್ನಿಸುತ್ತದೆ. ಫುಟ್‌ಪಾತ್‌ನಲ್ಲಿ ಮಣಿಸರ ಮಾರುವ ಪ್ರಯಾಗ್‌ರಾಜ್ ಮಹಾಕುಂಭದ ವೈರಲ್ ಯುವತಿ ಮೊನಾಲಿಸಾ ಅವರು ಖಾಸಗಿ ವಾಹಿನಿಯೊಂದರ ವಿಶೇಷ ಸಂದರ್ಶನದಲ್ಲಿ ಸಿನಿಮಾದಲ್ಲಿ ಕೆಲಸ ಮಾಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.ಐಶ್ವರ್ಯಾ ರೈ ಬಚ್ಚನ್‌ರಂತಹ ಚಿತ್ರಗಳಲ್ಲಿ ನಟಿಸುವುದಾಗಿ ಹೇಳಿಕೊಂಡಿದ್ದಾಳೆ.
ಅಲ್ಲದೆ ಆಕೆಯ ವಿಡಿಯೋ ವೈರಲ್ ಆದ ನಂತರ ಜನರ ಒತ್ತಡದಿಂದಾಗಿ ಮಹಾಕುಂಭವನ್ನು ತೊರೆಯಲು ತಯಾರಿ ನಡೆಸುತ್ತಿದ್ದಾಳೆ.. ಸದ್ಯ ಯುವತಿ ಭಯಗೊಂಡಿದ್ದಾಳೆ ಅವಳು ಹೊರಬಂದ ತಕ್ಷಣ ಜನರು ಅವಳನ್ನು ಸುತ್ತುವರೆಯುತ್ತಿದ್ದಾರೆ ಮಹಾಕುಂಭದಿಂದ ಕರೆದುಕೊಂಡು ಹೋಗುವುದಾಗಿ ಬೆದರಿಕೆ ಹಾಕಿದ್ದಾರೆ’ ಎಂದು ಮೊನಾಲಿಸಾ ಹೇಳಿದ್ದಾರೆ. ಇದರಿಂದ ತನಗೆ ಮತ್ತು ತನ್ನ ಕುಟುಂಬದವರಿಗೆ ಭಯವಾಗುತ್ತಿದೆ ಎಂದಿರುವ ಮೊನಾಲಿಸಾ, ಭದ್ರತೆಗಾಗಿ ಯುಪಿ ಸಿಎಂ ಯೋಗಿ ಆದಿತ್ಯನಾಥ್‌ಗೆ ಮನವಿ ಮಾಡಿದ್ದಾರೆ.
ಸಿಎಂ ಯೋಗಿ ಆದಿತ್ಯನಾಥ್ ಮಧ್ಯಪ್ರದೇಶದ ಮೊನಾಲಿಸಾ ಅವರ ಭದ್ರತೆಗೆ ವ್ಯವಸ್ಥೆ ಮಾಡಲಿ,ಹಾರ ಮಾರುವ ಮೂಲಕ ನನ್ನ ಕುಟುಂಬಕ್ಕೆ ಆಸರೆಯಾಗಬೇಕು ಎಂದಿದ್ದಾರೆ. ರಾತ್ರೋರಾತ್ರಿ ಸ್ಟಾರ್ ಆಗಿರುವುದರಿಂದ ನನಗೆ ಏನೂ ಸಿಗುತ್ತಿಲ್ಲ. ಫುಟ್‌ಪಾತ್ ಮೇಲೆ ಸರ ಮಾರಲು ಕುಳಿತರೆ ತಕ್ಷಣ ಜನ ಮುತ್ತಿಕೊಳ್ಳುತ್ತಾರೆ. ನನ್ನ ಫೋಟೋಗಳನ್ನ ತೆಗೆದುಕೊಳ್ಳುತ್ತಿರುವುದರಿಂದ. ಸಾಕಷ್ಟು ಕಿರುಕುಳ ನೀಡುತ್ತಿದ್ದಾರೆ. ಜನಜಂಗುಳಿಯಿಂದ ಹಾರ ಮಾರಲು ಆಗುತ್ತಿಲ್ಲ, ಇದರಿಂದ ಅಪಾರ ನಷ್ಟ ಅನುಭವಿಸುತ್ತಿದ್ದೇನೆ. ಲಕ್ಷಾಂತರ ಸಾಲ ಮಾಡಿಕೊಂಡು ಕುಟುಂಬದ ನಿರ್ವಹಣೆಗಾಗಿ ಇಲ್ಲಿಗೆ ಬಂದು ವ್ಯಾಪಾರ ಮಾಡುತ್ತಿದ್ದೇನೆ. ಆದರೆ ಈಗ ವ್ಯಾಪಾರ ಮಾಡಲು ಆಗುತ್ತಿಲ್ಲ.ಪೋಟೋ ತೆಗೆಸಿಕೊಳ್ಳಲು ಬಂದರು ಹಾಗೆ ಸುಮ್ಮನೆ ಹೋಗತ್ತಿದ್ದಾರೆ. ಹೊರೆತು ಸರ ಖರೀದಿ ಸಹ ಮಾಡತ್ತಿಲ್ಲ..ಸೌಂದರ್ಯದ ಮೂಲಕವೇ ಅಪಾಯ ಎದುರಿಸುತ್ತಿರುವ ಮೋನಾಲಿಸಾಗಿ ಯಾವುದೆ ಅಪಾಯ ಆಗದಿರಲಿ ಎನ್ನುವುದು ಎಲ್ಲರ ಆಶಯ..
ಇದನ್ನೂ ಓದಿ