suddibindu.in
ಮುಂಡಗೋಡ :ಪಟ್ಟಣದ ಅಮ್ಮಾಜಿ ಕೆರೆಯ ಬಳಿ ಕುರಿ ಸಾಕಾಣಿಕೆ ಘಟಕಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ 78 ಕುರಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ನಜೀರ ಅಹ್ಮದ ದರ್ಗಾವಾಲೆ ಎಂಬುವರಿಗೆ ಸೇರಿದ ಕುರಿ ಸಾಕಾಣಿಕಾ ಘಟಕ ಸಂಪೂರ್ಣ ಬೆಂಕಿಗೆ ಆಹುತಿಯಾಗಿದ್ದು, ಅಲ್ಲಿದ್ದ 78 ಕುರಿಗಳು ಜೀವಂತ ಸುಟ್ಟು ಕರಕಲಾಗಿದೆ ಎನ್ನಲಾಗಿದೆ.ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕದಳ ದೌಡಾಯಿಸಿದ್ದು, ಬೆಂಕಿ ನಂದಿಸುವಷ್ಟರಲ್ಲಿ ಕುರಿಗಳು ಸುಟ್ಟು ಮೃತಪಟ್ಟಿವೆ.ಘಟನಾ ಸ್ಥಳಕ್ಕೆ ಕಂದಾಯ ಇಲಾಖೆ ಸಿಬ್ಬಂದಿಗಳು ಆಗಮಿಸಿ ಪರಿಶೀಲಿಸಿದ್ದು.ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ
- ಓದಿನ_ಮನೆಯಲ್ಲೊಂದಿಷ್ಟು…
- ಮಳೆಯಿಂದ ಮನೆ ಕಳೆದುಕೊಂಡ ಕುಟುಂಬ : ಮಾನವೀಯತೆ ಮೆರೆದ ಅನಂತಮೂರ್ತಿ ಹೆಗಡೆ
- School holiday /ಜಿಲ್ಲೆಯ ನಾಲ್ಕು ತಾಲೂಕುಗಳ ಶಾಲೆ ಹಾಗೂ ಅಂಗನವಾಡಿಗಳಿಗೆ ರಜೆ ಘೋಷಣೆ
.