ಸುದ್ದಿ ಬಿಂದು ವರದಿ
ಕುಮಟಾ : ಪಟ್ಟಣದ ಪ್ರತಿಷ್ಠಿತ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಅವರ ಶಾಲಾ ವಾಹನ ಗುಡ್ಡ ಹತ್ತಲಾಗದೆ ಪರದಾಡಿದ ಪರಿಣಾಮ ಬಗ್ಗೋಣ ಕ್ರಾಸ್ ಬಳಿ ಟ್ರಾಫಿಕ್ ಕಿರಿಕಿರಿಯಾದ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ.
ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಇಡೀ ಜಿಲ್ಲೆಯಲ್ಲೇ ಪ್ರತಿಷ್ಠಿತ ಮತ್ತು ಅತ್ಯುತ್ತಮ ಶಿಕ್ಷಣ ನೀಡುವ ಶಾಲೆ ಎಂದು ಹೆಸರು ಮಾಡಿದ್ದು, ಪ್ರತೀ ವರ್ಷ ಈ ಶಾಲೆಯ ವಿದ್ಯಾರ್ಥಿಗಳು ರಾಜ್ಯಕ್ಕೆ ರ‍್ಯಾಂಕ್ ಬರುತ್ತಿದ್ದು, ಬಡವರಲ್ಲೂ ಈ ಶಾಲೆ ಮನೆ ಮಾತಾಗಿದೆ. ಹಾಗಾಗಿ ಬಡವ, ಶ್ರೀಮಂತನೆನ್ನದೆ ಪ್ರತಿಯೊಬ್ಬರೂ ತಮ್ಮ ಮಕ್ಕಳನ್ನು ಈ ಶಾಲೆಗೆ ಸೇರಿಸಲು ಬಯಸುತ್ತಾರೆ. ಪ್ರತೀ ವರ್ಷ ಇಲ್ಲಿಗೆ ಸೇರುವ ವಿದ್ಯಾರ್ಥಿಗಳ ಸಂಖ್ಯೆ ಕೂಡ ಏರುತ್ತಲೇ ಇದೆ. ಆದರೆ ಇನ್ಫ್ರಾಸ್ಟ್ರಕ್ಚರ್ ವಿಷಯ ಬಂದಾಗ ಮಾತ್ರ ಪ್ರಶ್ನೆಗಳು ಕಾಡುತ್ತವೆ.
ಇದನ್ನೂ ಓದಿ : ಲಿಂಕ್ ಶೇರ್ ಮಾಡಿ
- ಕೊಲೆಯಾದ 18 ತಿಂಗಳ ಬಳಿಕ ಮನೆಗೆ ಬಂದ “ಲಲಿತಾ”
- Breaking News| ವಿಧಾನ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಬಸವರಾಜ್ ಹೊರಟ್ಟಿ ರಾಜೀನಾಮೆ.!
- ಕಿಕ್ಕೇರಿಸುವ ಮದ್ಯವೇ ಈ ದೇವರಿಗೆ ನೈವೇದ್ಯ : ಉತ್ತರ ಕನ್ನಡದಲ್ಲೊಂದು ವಿಶೇಷ ಜಾತ್ರೆ
ಈ ಶಾಲಾ ರಸ್ತೆಯ ಅಕ್ಕಪಕ್ಕ ಪಟ್ಟಣದ ಪ್ರಸಿದ್ಧ ಖಾಸಗಿ ಆಸ್ಪತ್ರೆ, ಸಭಾಭವನ ಮತ್ತು ಸರ್ಕಾರಿ ಆಸ್ಪತ್ರೆಗಳಿವೆ. ಆಸ್ಪತ್ರೆಗೆ ಬರುವವರಂತೂ ತುರ್ತು ಕಾರ್ಯದ ನಿಮಿತ್ತವೇ ಬಂದಿರುತ್ತಾರೆ.ಕಲ್ಯಾಣ ಮಂಟಪಕ್ಕೆ ಬರುವವರೂ ಕೂಡ ಮುಹೂರ್ತ ಫಿಕ್ಸ್ ಮಾಡಿಯೇ ಬಂದವರಾಗಿರುತ್ತಾರೆ. ವಾಸ್ತವ ಹೀಗಿರುವಾಗ ದೇಶದ ಭವಿಷ್ಯ ಎಂದೇ ಪರಿಭಾವಿಸುವ ಶಾಲಾ ಮಕ್ಕಳನ್ನು ಹೊತ್ತಿರುವ ಸಂಸ್ಥೆಯ ಭಾರೀ ವಾಹನ (ಬಸ್) ಗುಡ್ಡ ಏರಲಾಗದೇ ರಸ್ತೆಯಲ್ಲೇ ಬುರ್, ಬುರ್…. ಎನ್ನುತ್ತ ನಿಂತರೆ ಬೆಳಬೆಳಗ್ಗೆ ಎಂತವರಿಗಾದರೂ ಕಿರಿಕಿರಿ ಆಗುವುದು ಸಹಜ. ವಿಷೇಶವೆಂದರೆ ಶಾಲೆಯ ಟ್ರಸ್ಟಿಗಳಲ್ಲಿ ಒಬ್ಬರು ಹಾಗೂ ಖ್ಯಾತ ಉದ್ಯಮಿಯೂ ಆದ ದಾಸ್ ಶಾನಭಾಗ್ ಎನ್ನುವುವರೇ ಖುದ್ದು ರಸ್ತೆಯಲ್ಲಿ ನಿಂತು ಇಂದಿನ ಟ್ರಾಫಿಕ್ ಕಿರಿಕಿರಿ ಪರಿಹಾರಕ್ಕೆ ಪ್ರಯತ್ನಿಸಿದ್ದಾರೆ.
ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಶಾಲೆಯ ಬೆಳವಣಿಗೆ ಬಗ್ಗೆ ಜಿಲ್ಲೆಯ ಅನೇಕ ಶಿಕ್ಷಣ ಪ್ರೇಮಿಗಳು ಹೆಮ್ಮೆ ಪಡುತ್ತಾರೆ. ಶಿಕ್ಷಣ ಚೆನ್ನಾಗಿರುವ ಕಾರಣ ಸಾವಿರಾರು ಸಂಖ್ಯೆಯಲ್ಲಿ ಮಕ್ಕಳು ಈ ಶಾಲೆಗೆ ಬರುತ್ತಾರೆ. ಬಡ ಪಾಲಕರು ಕೂಡ ತಮ್ಮ ಮಕ್ಕಳನ್ನು ಸಾಲ ಮಾಡಿಯಾದರೂ ಈ ಶಾಲೆಗೆ ಸೇರಿಸುತ್ತಿದ್ದಾರೆ. “ಶಾಲೆಯಲ್ಲಿ ಶಿಕ್ಷಣ ಚೆನ್ನಾಗಿದೆ, ಆದರೆ ಇಲ್ಲಿ ಆವಾಗಾವಾಗ ಟ್ರಾಫಿಕ್ ಕಿರಿಕಿರಿ ಆಗುತ್ತಿರುತ್ತದೆ. ಆಡಳಿತ ಮಂಡಳಿಯವರು ಕೂಡಲೇ ಈ ಟ್ರಾಫಿಕ್ ಕಿರಿಕಿರಿಯನ್ನು ಗಂಭೀರವಾಗಿ ಪರಿಗಣಿಸಿ ರಸ್ತೆ ಅಗಲೀಕರಣ ಮಾಡುವ ಬಗ್ಗೆ ಯೋಚಿಸಬೇಕು” ಎಂದು ಪಾಲಕರು ಆಗ್ರಹಿಸಿದ್ದಾರೆ.