suddibindu.in
Goa: ಗೋವಾ ಬಸ್ ಅಫಘಾತ : ಮಹಿಳೆ ಗಂಭೀರ
Karwar: ಕಾರವಾರ
: ನಗರದ ಸುಭಾಷ ಸರ್ಕಲ್ ಬಳಿ ಮಹಿಳೆ ಓರ್ವಳು ನಡೆದುಕೊಂಡು ಹೋಗುತ್ತಿದ್ದ ವೇಳೆ ಗೋವಾ ನೊಂದಣಿಯ‌ ಬಸ್ ಮಹಿಳೆಗೆ ಡಿಕ್ಕಿ ಹೊಡೆದು ಆಕೆ‌ ಗಂಭಿರವಾಗಿ ಗಾಯಗೊಂಡ ಘಟನೆ ನಡೆದಿದೆ.ಶೇಜವಾಡದ ಜೋಗಮ್ಮ ಗಾಯಗೊಂಡ ಮಹಿಳೆಯಾಗಿದ್ದಾಳೆ. ಗೋವಾ ಕಡೆಯಿಂದ ಕಾರವಾರ ಬಸ್ ನಿಲ್ದಾಣದ ಕಡೆ ಬರುವಾಗ ಸುಭಾಷ ವೃತ್ತದಲ್ಲಿ ಬಸ್ ನಿಲ್ದಾಣಕ್ಕೆ ತಿಗುತ್ತಿದ್ದಾಗ ಬಸ್‌ಗೆ ವೃದ್ಧೆಗೆ ಡಿಕ್ಕಿ ಹೊಡೆದು ಮೇಲೆ ಹರಿದಿದೆ. ವೃದ್ಧಿಯ ಮೇಲೆ ಹರಿದ ರಭಸಕ್ಕೆ ವೃದ್ಧೆಗೆ ಗಂಭೀರ ಗಾಯಗಳಾಗಿವೆ. ಘಟನೆ ತಿಳಿದು ಸ್ಥಳಕ್ಕಾಗಮಿಸಿದ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿ ವೃದ್ಧೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

ಇದನ್ನೂ ಓದಿ

ಮಂಗನ ತಪ್ಪಿಸಲು ಹೋಗಿ ಬೈಕ್ ಪಲ್ಟಿ: ಸವಾರ ಗಂಭೀರ
Joda:ಜೋಯಿಡಾ
:ಬೈಕ್‌‌ನಲ್ಲಿ ಚಲಿಸುತ್ತಿದ್ದ ವೇಳೆ ಅಡ್ಡ ಬಂದ ಮಂಗನಿಗೆ ತಪ್ಪಿಸಲು ಹೋದ ಬೈಕ್ ಸವಾರರೊಬ್ಬರು ಸ್ಕಿಡ್ ಆಗಿ ಹೆದ್ದಾರಿಯಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ನುಜ್ಜಿ ಗ್ರಾಮದ ಮಾಸೇತ್ ಎಂಬಲ್ಲಿ ನಡೆದಿದೆ.ಅಣಶಿ ಗ್ರಾಮದ ಗ್ರಾಮ ಆಡಳಿತಾಧಿಕಾರಿ ರಾಜು ನಾಯ್ಕ ಎಂಬವರೇ ಗಂಭೀರ ಗಾಯಗೊಂಡ ಬೈಕ್ ಸವಾರರಾಗಿದ್ದಾರೆ.ಇವರು ಜೋಳದಿಂದ ದ್ವಿಚಕ್ರ ವಾಹನದಲ್ಲಿ ಅಣಶಿಗೆ ಹೋಗುತ್ತಿರುವಾಗ ಈ ಘಟನೆ ನಡೆದಿದೆ.ರಾಜು ನಾಯ್ಕ ಅವರ ತಲೆ‌ ಭಾಗಕ್ಕೆ ಮತ್ತು ಬಲಗಾಲು ಹಾಗೂ ಮುಖಕ್ಕೆ ಗಂಭೀರ ಗಾಯವಾಗಿದೆ.ತಕ್ಷಣ ಜೋಯಿಡಾ ತಾಲೂಕು ಆಸ್ಪತ್ರೆ ಸಾಗಿಸಿ ಚಿಕಿತ್ಸೆ ನೀಡಲಾಗಿತ್ತಾದರು ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡ ಆಸ್ಪತ್ರೆಗೆ ರವಾನಿಸಲಾಗಿದೆ.ಸ್ಥಳಕ್ಕೆ ಜೋಯಿಡಾ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದ್ದು, ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ

ಬೃಹತ್ ಗಾತ್ರದ ಕಾಳಿಂಗ ಸರ್ಪ ರಕ್ಷಣೆ
Kumta:ಕುಮಟಾ:
ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದನ್ನ ಉರಗ ರಕ್ಷಕ ಪವನ್ ನಾಯ್ಕ ಕಾಳಿಂಗ ಸರ್ಪವನ್ನ ರಕ್ಷಣೆ ಮಾಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾದ ಮೂರೂರು ಗ್ರಾಮದ ರಾಮಕೃಷ್ಣ ಹೆಗಡೆ ತೋಟದಲ್ಲಿ ಕಾಣಿಸಿಕೊಂಡಿತ್ತು. ತಕ್ಷಣ ಉರಗ ರಕ್ಷಕ ಪವನ್ ನಾಯ್ಕ ಅವರಿಗೆ ಮಾಹಿತಿ ನೀಡಿದ್ದ ಮನೆಯವರು ಉರಗ ಪ್ರೇಮಿ ಪವನ್ ನಾಯ್ಕರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪವನ್ ನಾಯ್ಕ ಸುಮಾರು 13ಅಡಿ ಉದ್ದದ 6 ಕೆಜಿ ತೂಕವಿದ್ದ ಕಾಳಿಂಗ ಸರ್ಪ ಅರ್ಧ ಗಂಟೆ ಕಾಲ‌ ಹರಸಾಹಸಪಟ್ಟು ಸುರಕ್ಷಿತವಾಗಿ ರಕ್ಷಣೆ ಮಾಡಿ ಕಾಳಿಂಗ ಸರ್ಪವನ್ನ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

ಕಟ್ಟಡ ತೆರವುಗೊಳಿಸಲು ಮುಂದಾಗಿದ್ದ ಅಧಿಕಾರಿಗಳ‌ ಮೇಲೆ ಹಲ್ಲೆಗೆ ಯತ್ನ
ಕುಮಟಾ:
ರಾಜ್ಯ ಹೆದ್ದಾರಿಗೆ ಸಂಬಂಧಿಸಿದ ಜಾಗದಲ್ಲಿ ಕಟ್ಟಲಾದ ಅನಧಿಕೃತ ಕಟ್ಟಡವನ್ನು ತೆರವುಮಾಡಲು ಹೋದ ಸಂದರ್ಭದಲ್ಲಿ ಕಟ್ಟಡದ ಮಾಲಿಕರು ಸರಕಾರಿ ಅಧಿಕಾರಿಗಳನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ ಮಾಡಿದ ಘಟನೆ ಕುಮಟಾ ತಾಲೂಕಿನ ಸಂತೇಗುಳಿಯ ಉರ್ದು ಶಾಲೆ ಬಳಿ ನಡೆದಿದೆ. ಕಟ್ಟಡದ ಮಾಲಿಕರಿಗೆ ನೋಟಿಸ್ ನೀಡಿ ತೆರವುಗೊಳಿಸಿ ಕೆಲಸ ಪ್ರಾರಂಭಿಸಿದ್ದು, ಜಾಗದಲ್ಲಿ ಅಬ್ದುಲ್ ಶುಕುರ್ ಸಾಬ ಮತ್ತು ಅಲಿ ಸಾಬ ಅಬ್ದುಲ್ ಕರಿಂ ಸಾಬ ಇವರು ಕಟ್ಟಡಗಳನ್ನು ಕಟ್ಟಿಕೊಂಡು ವ್ಯಾಪಾರ ಮಾಡುತ್ತಾ ಬಂದಿದ್ದು, ಅವರಿಗೂ ಕಟ್ಟಡಗಳನ್ನು ತೆರವುಗೊಳಿಸುವ ಸಂಬಂಧ ಇಲಾಖೆಯಿಂದ ನೋಟಿಸ್ ನೀಡಲಾಗಿತ್ತು.ಆದರೆ ಕಟ್ಟಡಗಳನ್ನು ತೆರವುಗೊಳಿಸದೇ ಇದ್ದದರಿಂದ ಲೊಕೋಪಯೋಗಿ ಇಲಾಖೆಯ ಅಧಿಕಾರಿಗಳು ಕಟ್ಟಡ ತೆರವುಗೊಳಿಸಲು ಹೋದಾಗ ಸಂತೇಗುಳಿಯ ಮುಜಾಫರ ಅಬ್ದುಲ್ ಕರೀಂ ಸಾಬ, ಮನ್ಸೂರ ಅಬ್ದುಲ್ ಕರೀಂ ಸಾಬ, ಅಬುತಾಲಿಬ್ ಅಬ್ದುಲ್ ಕರೀಂ ಸಾಬ ಸೇರಿ ಇಲಾಖೆಯ ಅಧಿಕಾರಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೆ ಮುಂದಾಗಿದ್ದಾರೆ. ಈ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಅನಾಧಿಕಾದ ರಸ್ತೆ ಬಂದ್ : ತಹಶಿಲ್ದಾರಿಗೆ ಮನವಿ
Sirsi ಶಿರಸಿ :
ತಾಲೂಕಿನ ಬದನಗೋಡ ಗ್ರಾ.ಪಂ.ವ್ಯಾಪ್ತಿಯಲ್ಲಿ ಸುಮಾರು ನೂರಕ್ಕೂ ಹೆಕ್ಟೇರ್ ಪ್ರದೇಶದ ಕೃಷಿ ಜಮೀನುಗಳಿಗೆ ಅನಾಧಿಕಾಲದಿಂದಲೂ ಓಡಾಡುವ ರಸ್ತೆಯನ್ನು ಬಂದ್ ಮಾಡಿರುವದನ್ನು ಖಂಡಿಸಿ ಕರ್ನಾಟಕ ರಾಜ್ಯ. ರೈತ ಸಂಘ ಹಾಗು ಹಸೀರು ಸೇನೆಯಿಂದ ತಹಶಿಲ್ದಾರ ಇವರಿಗೆ ಮನವಿ ನೀಡಲಾಯಿತು. ಈ ಸಂದರ್ಭದಲ್ಲಿ ಲಲಿತಾ ಕರಿಯಪ್ಪ ಶೇಟ್,ರತ್ನಾ ಮಂಜುನಾಥ ಶೇಟ್ ಹಾಗು ರಾಮಚಂದ್ರ ಶೇಟ್ ಬಂದ್ ಮಾಡಿರುವ ರಸ್ತೆಯನ್ನು ಕೂಡಲೇ ತೆರವುಗೊಳಿಸಿ ಕೃಷಿ ಚಟುವಟಿಕೆಗೆ ಅನುಕೂಲ ಮಾಡಿಕೊಡಬೇಕೆಂದು ರೈತ ಮುಖಂಡ ರಾಘವೆಂದ್ರ ನಾಯ್ಕ ಕಿರವತ್ತಿ ಸರಕಾರಕ್ಕೆ ಆಗ್ರಹಿಸಿದ್ದಾರೆ.

ಕೆಪಿಸಿಸಿ ವಿವೇಕ್ ಹೆಬ್ಬಾರ್ ಅವರಿಗೆ ಸನ್ಮಾನ
ಯಲ್ಲಾಪುರ :
ಕೆ.ಪಿ.ಸಿ.ಸಿ(kpcc)ಸದಸ್ಯರಾಗಿ ನೇಮಕಗೊಂಡ ವಿವೇಕ್ ಹೆಬ್ಬಾರ್ ಅವರನ್ನು ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಇಂದು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸನ್ಮಾನಿಸಿ ಅಭಿನಂದಿಸಿದರು. ಸನ್ಮಾನ ಸ್ವೀಕರಿಸಿ, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ಯುವನಾಯಕರಾದ ವಿವೇಕ್ ಹೆಬ್ಬಾರ್ ಅವರು ಪಕ್ಷ ನೀಡಿರುವ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕವಾಗಿ ನಿರ್ವಹಿಸಿ ಬೂತ್ ಮಟ್ಟದಲ್ಲಿ ಪಕ್ಷದ ಬಲವರ್ಧನೆ ಶ್ರಮಿಸುತ್ತೇನೆ. ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಜನರ ಸಮಸ್ಯೆಗಳಿಗೆ ಸ್ಪಂದಿಸಿ ಜನರ ವಿಶ್ವಾಸವನ್ನು ಗಳಿಸುವ ಕೆಲಸ ಮಾಡಬೇಕು ಎಂದರು.ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎನ್.ಕೆ.ಭಟ್, ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ಉಲ್ಲಾಸ ಶಾನಭಾಗ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಾರೇನ್ಸ ಸಿದ್ದಿ, ಜಿಲ್ಲಾ ಕಾರ್ಯದರ್ಶಿ ವಿ.ಎಸ್.ಭಟ್, ಮಹಿಳಾ ಅಧ್ಯಕ್ಷೆ ಪೂಜಾ ನೇತ್ರೇಕರ್, ಪ್ರಮುಖರಾದ ಮುರಳಿ ಹೆಗಡೆ, ವಿಲ್ಸನ್ ಫರ್ನಾಂಡೀಸ್, ಸುಬ್ಬಣ್ಣ ಕುಂಟೆಕಾಳಿ, ದತ್ತು ನಾಯ್ಕ, ಶಿರೀಷ್ ಪ್ರಭು,ಡಾ.ರವಿ ಭಟ್ ಬರಗದ್ದೆ,ರಾಘು ನಾಯ್ಕ ಗುಳ್ಳಾಪುರ, ಪ್ರಶಾಂತ್ ಸಭಾಹಿತ್,ರವಿಚಂದ್ರ ನಾಯ್ಕ,ಅನಿಲ್ ಮರಾಠಿ, ಯುವ ಕಾಂಗ್ರೆಸ್ ಅಧ್ಯಕ್ಷರಾದ ವಿಶ್ವಾಸ್ ನಾಯ್ಕ, ಫಕ್ಕೀರ್ ಕುಂದರಗಿ ಪ.ಪಂ ಸದಸ್ಯರಾದ ಸುನಂದಾ ದಾಸ್, ನರ್ಮದಾ ನಾಯ್ಕ, ಸತೀಶ್ ನಾಯ್ಕ, ಕೈಸರ್ ಸೈಯದ್ ಅಲ್ಲಿ ಸೇರಿದಂತೆ ಪಕ್ಷದ ವಿವಿಧಸ್ಥರದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

ವಿಶ್ವ ತಂಬಾಕು ರಹಿತ ದಿನಾಚರಣೆ
ಕಾರವಾರ :
ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರದಡಿಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಮೇ 31 ರಂದು ಬೆಳಗ್ಗೆ 10ಗಂಟೆಗೆ ‘ವಿಶ್ವ ತಂಬಾಕು ರಹಿತ ದಿನಾಚರಣೆ’ಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

ಹೆಸ್ಕಾಂ ಕಚೇರಿ ಸ್ಥಳಾಂತರ
ಶಿರಸಿ :
ಅಯ್ಯಪ್ಪನಗರ, ಹುಬ್ಬಳ್ಳಿ ರಸ್ತೆ, ಶಿರಸಿಯಲ್ಲಿ ಬಾಡಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಹೆಸ್ಕಾಂ, ಕಾರ್ಯ ಮತ್ತು ಪಾಲನಾ ವೃತ್ತ ಕಛೇರಿಯನ್ನು, ಕವಿಪ್ರನಿನಿ ಆವರಣದಲ್ಲಿ ಮುಕ್ತಾಯ ಹಂತದಲ್ಲಿರುವ ಹೊಸ ಕಟ್ಟಡದ 1ನೇ ಮಹಡಿಗೆ (ವಿಭಾಗೀಯ ಕಚೇರಿ ಉದ್ದೇಶಿತ ಕಟ್ಟಡ) ತಾತ್ಕಾಲಿಕವಾಗಿ ಸ್ಥಳಾಂತರಗೊಳಿಸಲಾಗಿದ್ದು, ಹೆಸ್ಕಾಂ ಕಾರ್ಯ ಮತ್ತು ಪಾಲನಾ ವೃತ್ತ ಕಛೇರಿಯ ಹೊಸ ವಿಳಾಸವು, ಅಧೀಕ್ಷಕ ಇಂಜಿನೀಯರ (ವಿ) ರವರ ಕಚೇರಿ, ಕಾರ್ಯ ಮತ್ತು ಪಾಲನಾ ವೃತ್ತ, ಕೋರ್ಟ ರಸ್ತೆ, ಕವಿಪ್ರನಿನಿ ಆವರಣ, ಹೆಸ್ಕಾಂ, ಶಿರಸಿ, ೫೮೧೪೦೧ ಉತ್ತರ ಕನ್ನಡ ಜಿಲ್ಲೆ, ಇ-mಚಿiಟ Iಆ: seesಡಿs.hesಛಿom@gmಚಿiಟ.ಛಿom ಎಂದು ಅಧೀಕ್ಷಕ ಇಂಜಿನಿಯರ್ (ವಿ) ಹೆಸ್ಕಾಂ ಅವರ ಪ್ರಕಟಣೆ ತಿಳಿಸಿದೆ