suddibindu.in
ಗೋಕರ್ಣ : ಎಸ್.ಎಸ್.ಎಲ್.ಸಿ ಮಾಡರ್ನ್ ಎಜುಕೇಶನ್ ಸ್ಕೂಲ್ ನಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾರ್ಥಿಗಳು ನೂರಕ್ಕೆ ನೂರು ಫಲಿತಾಂಶವನ್ನು ದಾಖಲಿಸುವ ಮೂಲಕ ಅತ್ಯುತ್ತಮ ಸಾಧನೆ ಮಾಡಿರುತ್ತಾರೆ.

ಪ್ರಥಮ ಸ್ಥಾನವನ್ನು ಕುಮಾರಿ ಸಿಂಚನ ಶ್ರೀಧರ ಆಚಾರಿ ( 95.68%), ದ್ವಿತೀಯ ಸ್ಥಾನವನ್ನು ಕುಮಾರಿ ದೀಕ್ಷಾ ಸುಬ್ರಹ್ಮಣ್ಯ ಭಟ್ (93.92%) ತೃತೀಯ ಸ್ಥಾನವನ್ನು ಶ್ರಾವ್ಯ ಶೇಷಗಿರಿ ಗಾಂವ್ಕರ್(92%), ನಾಲ್ಕನೇ ಸ್ಥಾನ ವನ್ನು ಭಾಗ್ಯಶ್ರೀ ನಿತ್ಯಾನಂದ ಶೆಟ್ಟಿ (90.88%) ಐದನೇ ಸ್ಥಾನವನ್ನು ಇಶಾನ್ ವಿವೇಕಾನಂದ ಸೂರ್ವೆ(89.44%) ಆರನೇ ಸ್ಥಾನವನ್ನು ತನ್ಮಯೀ ಮಂಜುನಾಥ್ ನಾಯ್ಕ್(88.64%) ಮತ್ತು ಭಾಗ್ಯಶ್ರೀ ಗಣಪತಿ ಭಟ್ ಜಂಬೆ(88.64%) ಏಳನೇ ಸ್ಥಾನವನ್ನು ಅಪೇಕ್ಷ ಪ್ರವೀಣ್ ಕುಮಾರ್ ಪಟಗಾರ್ ( 87.20%) ಎಂಟನೇ ಸ್ಥಾನವನ್ನು ಅನ್ವಿತಾ ಪ್ರಣಮ್ಯಾ(85%) ಹಾಗೂ ಅನಂತ್ ಉತ್ತಮ್ ಕಾಂಬಳೆ (85%) ಪಡೆದು ಶಾಲೆಗೆ , ಸಂಸ್ಥೆಗೆ ಹಾಗೂ ಪಾಲಕರಿಗೆ ಕೀರ್ತಿ ತಂದಿರುತ್ತಾರೆ.

ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಮಾಡರ್ನ್ ಎಜುಕೇಶನ್ ನೆಲಗುಣಿ- ಗೋಕರ್ಣ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರ ಇದ್ದು ಪ್ರತಿಯೊಂದು ಕೊಠಡಿಗೂ ಸಿಸಿ ಕ್ಯಾಮರವನ್ನ ಅಳವಡಿಸಿ ರಾಜ್ಯಕ್ಕೆ ಮಾದರಿಯಾದ ಪರೀಕ್ಷಾ ಕೇಂದ್ರವಾಗಿ ಪ್ರತಿಯೊಬ್ಬರ ಅಧಿಕಾರಿಗಳ ಪ್ರಶಂಸೆಗೆ ಪಾತ್ರವಾಗಿತ್ತು. ಈ ಬಾರಿಯ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ಸಂತೋಷ್ ನಾಯಕ್ ತೊರ್ಕೆ ಉಪಾಧ್ಯಕ್ಷರಾದ ನಾಗೇಂದ್ರ ಶೆಟ್,ಮ್ಯಾನೇಜಿಂಗ್ ಟ್ರಸ್ಟಿ ಡಾಕ್ಟರ್ ಎಂ ಡಿ ನಾಯ್ಕ್ ಹಾಗೂ ಶಾಲಾ ಮುಖ್ಯೋದ್ಯಪಕರಾದ ರಾಜೇಶ್ ಗೋನ್ಸಾಲ್ವೀಸ್, ಶಿಕ್ಷಕ ವೃಂದದವರು ಹಾಗೂ ಊರ ನಾಗರಿಕರು ಅಭಿನಂದಿಸಿದ್ದಾರೆ.