suddibindu.in
ಕುಮಟಾ : ತಾಲ್ಲೂಕಿನ ಗ್ರಾಮೀಣ ಭಾಗದ ಶಾಲೆಯಾದ ಬಹುತೇಕ ಬಡ ಹಿಂದುಳಿದ ವರ್ಗದ ಮಕ್ಕಳೇ ಇರುವ ಸರಕಾರಿ ಪ್ರೌಢಶಾಲೆ ಅಘನಾಶಿನಿಯು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 100% ಫಲಿತಾಂಶ ದಾಖಲಿಸಿದೆ .

ಇದು ಗ್ರಾಮೀಣ ಭಾಗದ ಸರಕಾರಿ ಶಾಲೆಯೊಂದರ ಅತ್ಯದ್ಭುತ ಸಾಧನೆ ಎಂದೇ ಹೇಳಬಹುದು. ನಿರಂತರವಾಗಿ ಉತ್ತಮ ಫಲಿತಾಂಶ ದಾಖಲಿಸುತ್ತಾ ಬಂದಿರುವ ಈ ಶಾಲೆ ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿದೆ.ಪರೀಕ್ಷೆಗೆ ಕುಳಿತ ಎಲ್ಲಾ 41 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶಾಲೆಗೆ ಹಾಗೂ ಊರಿಗೆ ಕೀರ್ತಿ ತಂದಿದ್ದಾರೆ. 41 ವಿದ್ಯಾರ್ಥಿಗಳಲ್ಲಿ 5 ವಿದ್ಯಾರ್ಥಿಗಳು ಡಿಸ್ಟಿ0ಕ್ಷನ್ನಲ್ಲಿ ,28 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ 8 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ .

ಕು. ಭುವನ ಪಟಗಾರ 94.8%ಪಡೆದು ಶಾಲೆಗೆ ಪ್ರಥಮ ಸ್ಥಾನ, ಕು.ಪ್ರಿಯಾ ಎಲ್ ಗೌಡ 92.64% ಪಡೆದು ದ್ವಿತೀಯ ಸ್ಥಾನ, ಕು.ಗಗನ. ಪಿ. ಗೌಡ ಹಾಗು ಮದನ್ ಲಕ್ಕುಮನೆ 86.88%ಪಡೆದು ತೃತೀಯ ಸ್ಥಾನ ಗಳಿಸಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಶಾಸಕ ದಿನಕರ ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಭಟ್ ನಿಕಟ ಪೂರ್ವ ಜಿ ಪಂ ಸದಸ್ಯ ರತ್ನಾಕರ ನಾಯ್ಕ, ಕಾಗಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಾವಿತ್ರಿ ಪಟ ಗಾರ,ನಿಕಟ ಪೂರ್ವ ಅಧ್ಯಕ್ಷ ಶಶಿಕಾಂತ ನಾಯ್ಕ, ಎಸ್ ಡಿಎಂ ಸಿ ಉಪಾಧ್ಯಕ್ಷ ಲಕ್ಷ್ಮಣ ಹರಿಕಾಂತ,ಮುಖ್ಯ ಶಿಕ್ಷಕಿ ಮಮತಾ ನಾಯ್ಕ, ಶಿಕ್ಷಕಕರು,ಎಸ್ ಡಿ ಎಂ ಸಿ ಸದಸ್ಯರುಗಳು ಅಘನಾಶಿನಿ ಊರ ನಾಗರಿಕರು ಅಭಿನಂದನೆ ಸಲ್ಲಿಸಿದ್ದಾರೆ.