ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ಹೃದಯಾಘಾತದಿಂದಾಗಿ ನ್ಯಾಯವಾದಿ ಓರ್ವರು ತಹಶೀಲ್ದಾರ ಕಚೇರಿಯಲ್ಲಿ ಕುಸಿದು ಬಿದ್ದು,ಮೃತ ಪಟ್ಟಿರುವ ಘಟನೆ ಕುಮಟಾ ತಹಶೀಲ್ದಾರ ಕಚೇರಿಯಲ್ಲಿ ನಡೆದಿದೆ.
ಕೋಲಾರ ಜಿಲ್ಲೆಯ ಮಾಲೂರಿನ ರೈಲ್ವೆ ಪಿಲ್ಡ್ ರೋಡ್‌ನ ಶಕ್ತಿ ನಗರದ ನಿವಾಸಿಯಾಗಿದ್ದ ವೆಂಕಟಾಛಲಪತಿ (42) ಎಂಬುವವರೆ ಮೃತಪಟ್ಟಿರುವ ನ್ಯಾಯವಾದಿಯಾಗಿದ್ದಾರೆ. ಇವರು ಕುಮಟಾ ತಾಲೂಕಿನ ಹಿರೇಗುತ್ತಿಯ ಮಾಲತಿ ನಾಗರಾಜ್ ನಾಯ್ಕ ಎಂಬುವವರ ಪ್ರಕರಣ ಒಂದಕ್ಕೆ ಸಂಬಂಧಿಸಿ ಕುಮಟಾ ನ್ಯಾಯಾಲಯದಲ್ಲಿ ದಾವೆ ದಾಖಲು ಮಾಡಲು ಕುಮಟಾ ನ್ಯಾಯಾಲಯಕ್ಕೆ ಬಂದಿದ್ದರು ಎನ್ನಲಾಗಿದೆ.
ಇದೆ ಪ್ರಕರಣಕ್ಕೆ ಸಂಬಂಧಿಸಿದ ಆರ್‌ಟಿಸಿ ತೆಗೆಸುವುದಕ್ಕೆ ಅಂತಾ ಕುಮಟಾ ತಹಶೀಲ್ದಾರ ಕಚೇರಿಗೆ ಹೋಗಿದ್ದರು ಎನ್ನಲಾಗಿದೆ. ಈ ವೇಳೆ ಅಲ್ಲಿಯೇ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನ ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ತಪಾಸಣೆ ವೇಳೆ ಅವರು ಮೃತಪಟ್ಟಿರುವುದಾಗಿ ಆಸ್ಪತ್ರೆಯ ವೈದ್ಯರು ದೃಢಪಡಿಸಿದ್ದಾರೆ. ಮೃತ ದೇಹವನ್ನ ಈಗಗಾಲೇ ಕೋಲಾರಕ್ಕೆ ಸಾಗಿಸಲಾಗಿದೆ.
ಗಮನಿಸಿ