ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ: ಶಿರೂರು ಗುಡ್ಡಕುಸಿತದ ದುರಂತದಲ್ಲಿ ಪತ್ತೆಯಾದ ಕೇರಳದ ಅರ್ಜುನ್ ಮೃತ ದೇಹದ ಕಳೆಬರಹವನ್ನು ಅವರ ಕುಟುಂಬಕ್ಕೆ ಹಸ್ತಾಂತರ ಮಾಡಿಬರುವಂತೆ ಸಿ ಎಂ ಸಿದ್ದರಾಮಯ್ಯ ಅವರು ಶಾಸಕ ಸತೀಶ್ ಸೈಲ್ ಅವರಿಗೆ ದೂರವಾಣಿ ಕರೆ ಮಾಡಿ ಸೂಚಿಸಿದ ಹಿನ್ನಲೆಯಲ್ಲಿ ಶಾಸಕ ಸೈಲ್ ಅವರು ಇದೀಗ ಕೇರಳಕ್ಕ ತೆರಳಿದ್ದಾರೆ.
ಜುಲೈ 16ರಂದು ನಡೆದ ಶಿರೂರು ಗುಡ್ಡಕುಸಿತ ಘಟನೆಯಲ್ಲಿ ಅರ್ಜುನ್ ಚಾಕಲನಾಗಿದ್ದ ಕೇರಳ ಮೂಲದ ಭಾರತ್ ಬೆಂಜ್ ಲಾರಿ ಸಹಿತ ದುರಂತದ ಭೀಕರತೆಗೆ ಗಂಗಾವಳಿ ನದಿಯಲ್ಲಿ ಹನ್ನೊಂದು ಮಂದಿ ಮೃತಪಟ್ಟಿದ್ದರು, ಆರಂಭ ಕಾರ್ಯಚರಣೆಯಲ್ಲಿ ಏಂಟು ಮಂದಿಯ ಶವ ಪತ್ತೆಯಾಗಿತ್ತು.ಇನ್ನೂಳಿದ ಮೂವರಾದ ಲಾರಿ ಚಾಲಕ ಅರ್ಜುನ್, ಜಗನ್ನಾಥ ನಾಯ್ಕ ಹಾಗೂ ಲೋಕೇಶ ನಾಯ್ಕ ಅವರ ಪತ್ತೆಗಾಗಿ ನಿರಂತರವಾಗಿ ಕಾರ್ಯಚರಣೆ ನಡೆಸಲಾಗಿತ್ತು.
ಇದೀಗ ಗಂಗಾವಳಿ ನದಿಯಲ್ಲಿ ನಡೆದ ಮೂರನೆ ಹಂತದ ಕಾರ್ಯಚರಣೆಯಲ್ಲಿ ಈ ವೇಳೆ ಲಾರಿ ಸಹಿತ ಚಾಲಕ ಅರ್ಜನ್ ಮೃತದೇಹದ ಕಳೆಬರಹ ಪತ್ತೆಯಾಗಿದೆ.ಇನ್ನೂಳಿದ ಇಬ್ಬರಾದ ಲೋಕೇಶ ಹಾಗೂ ಜಗನ್ನಾಥ ನಾಯ್ಕ ಅವರಿಗಾಗಿವ ಶೋಧ ಕಾರ್ಯ ಮುಂದುವರೆದಿದೆ.ಸೆಪ್ಟೆಂಬರ್ 25ರಂದು ಗಂಗಾವಳಿ ನದಿಯಲ್ಲಿ ಅರ್ಜುನ್ ಇದ್ದ ಲಾರಿ ಪತ್ತೆಯಾಗಿತ್ತು,ಅದರಲ್ಲಿ ಅರ್ಜುನ್ ಮೃತದೇಹ ಸಹ ಪತ್ತೆಯಾಗಿತ್ತು. ಅದನ್ನ ಕಾರವಾರದ ಜಿಲ್ಲಾ ಆಸ್ಪತ್ರೆಯ ಶವಗಾರದಲ್ಲಿ ಇಡಲಾಗುತ್ತು. ಅದನ್ನ ಇಂದು ಅರ್ಜುನ್‌ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿದ್ದು, ಅದನ್ನ ಕುಟುಂಬಸ್ಥರು ಕೇರಳಕ್ಕೆ ಕೊಂಡೊಯ್ಯದಿದ್ದು, ಇವರ ಜೊತೆಯಲ್ಲಿ ಕಾರವಾರ ಶಾಸಕ ಸತೀಶ ಸೈಲ್ ಕೂಡ ತೆರಳಿದ್ದಾರೆ.
ಗಮನಿಸಿ