suddibindu.in
ಕುಮಟಾ : 2024ರ ಲೋಕಸಭಾ ಚುನಾವಣೆಯಲ್ಲಿ ಉತ್ತರಕನ್ನಡ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರದ ಪೈಕಿ ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ಠೇವಣಿ ಕಳೆದುಕೊಂಡ ‘ಕೈ’ ಅಭ್ಯರ್ಥಿಯ ನಡೆಯಿಂದಾಗಿ ಈ ಕ್ಷೇತ್ರದಲ್ಲಿ ಮಾತ್ರ ಹಿನ್ನಡೆ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ ಎನ್ನುವ ಬಗ್ಗೆ ಇಂಟಲಿಜೆನ್ಸಿ ಮಾಹಿತಿಯಿಂದ ಹೊರಬಿದ್ದಿದೆ ಎನ್ನಲಾಗಿದೆ.

ಈ ಭಾರಿ ಉತ್ತರಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಉತ್ತಮವಾದ ವಾತಾವರಣ ಇದೆ ಎನ್ನಲಾಗುತ್ತಿದ್ದು, ಆದರೆ ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇದಕ್ಕೆ ಪ್ರಮುಖ ಕಾರಣ 2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕೊನೆ ಕ್ಷಣದಲ್ಲಿ ಕ್ಷೇತ್ರ ಬಿಟ್ಟು ಫಲಾಯನ ಮಾಡಿರುವ ಠೇವಣಿ ಕಳೆದುಕೊಂಡ ವ್ಯಕ್ತಿಯೇ ಪ್ರಮುಖ ಕಾರಣ ಎನ್ನುವ ಮಾಹಿತಿ ಬಹಿರಂಗವಾಗುತ್ತಿದೆ. ಈಗಾಗಲೇ ಪಕ್ಷದಲ್ಲಿ ಪದಾಧಿಕಾರಿಗಳನ್ನ ನೇಮಕ ಮಾಡಲಾಗಿದ್ದು,ಅದರಲ್ಲಿ ಬಹುತೇಕ ಹೆಚ್ಚಿನ ಪದಾಧಿಕಾರಿಗಳು ಒಂದೇ ಕುಟುಂಬಕ್ಕೆ ಸೇರಿಕೊಂಡವರು ಎನ್ನಲಾಗಿದೆ.ಅಷ್ಟೆ ಅಲ್ಲದೆ ಅವರಿಂದಾಗಿ ಪಕ್ಷಕ್ಕೆ ಯಾವುದೇ ಲಾಭ ಇಲ್ಲ ಎನ್ನುವ ಬಗ್ಗೆ ಕಾಂಗ್ರೆಸ್ ಪಕ್ಷದ ಅನೇಕ ಹಿರಿಯರು ಆಡಿಕೊಳ್ಳುತ್ತಿದ್ದಾರೆ. ಆ ಪಧಾರಿಕಾರಿಗಳನ್ನ ಪಟ್ಟಿಯನ್ನ ಒಮ್ಮೆ ನೀಡಿದ್ದರೆ ಎಂಥವರಿಗೂ ಅರ್ಥವಾಗುತ್ತದೆ.
ಇದನ್ನೂ ಓದಿ
- Police/ಪೊಲೀಸರ ಬಲೆಗೆ ಬಿದ್ದ ಕೋಟ್ಯಾಂತರ ರೂಪಾಯಿ ನಕಲಿ ನೋಟಿನ ಆರೋಪಿ
- ಕರಾವಳಿ ಭಾಗದಲ್ಲಿ ಅಪರಾಧ ಮಾಡಿ ಶಿರಸಿ ಪೊಲೀಸರ ಕೈಯಲ್ಲಿ ಸಿಕ್ಕಿಬಿದ್ದ ಆರೋಪಿಗಳು.!
- ಕುಮಟಾ ಪೊಲೀಸರ ಭರ್ಜರಿ ಕಾರ್ಯಚರಣೆ : ಗೋವು ಕಳ್ಳರ ಬಂಧನ
ಕುಮಟಾ ಕ್ಷೇತ್ರದಲ್ಲಿ ಈ ಓರ್ವನಿಂದಾಗಿ ಪಕ್ಷಕ್ಕೆ ಹಿನ್ನಡೆ ಆಗುತ್ತಿರುವುದನ್ನ ಗಮನಿಸಿದ ನಿಷ್ಠಾವಂತ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಹಿರಿಯ ನಾಯಕ ಆರ್ ವಿ ದೇಶಪಾಂಡೆ, ಹಾಗೂ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಶಾಸಕರ ಹಾಗೂ ಲೋಕಸಭಾ ಅಭ್ಯರ್ಥಿಯಾಗಿರುವ ಡಾ.ಅಂಜಲಿ ನಿಂಬಾಳ್ಕರ್ ಅವರ ಮುಖ ನೋಡಿ ಪಕ್ಷ ಸಂಘಟನೆ ಮಾಡಬೇಕಾಗಿದೆ ಎಂದು ಕ್ಷೇತ್ರದ ಬಹುತೇಕ ಮುಖಂಡರು ಆಡಿಕೊಳ್ಳುತ್ತಿದ್ದಾರೆ ತಾನು ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಠೇವಣಿ ಕಳೆದುಕೊಂಡರು ಎಲ್ಲವೂ ತನ್ನ ಆದೇಶ ದಂತೆ ನಡೆಯಬೇಕೆಂದು ಮೆರೆಯುತ್ತಿದ್ದಾನೆಂದು ಪಕ್ಷದ ಅನೇಕ ಪ್ರಮುಖರು ಆರೋಪಿಸುತ್ತಿದ್ದಾರೆ.
ಶಿರಸಿ ಕ್ಷೇತ್ರದಲ್ಲಿ ಇಷ್ಟು ವರ್ಷ ಕಾಂಗ್ರೇಸ್ ಸೋಲಿಗೆ ಇವರೆ ಕಾರಣ.?
ಕಳೆದ ಅನೇಕ ವರ್ಷಗಳಿಂದ ಶಿರಸಿ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಾಗುತ್ತಿರಲು ಇವರೇ ಪ್ರಮುಖ ಕಾರಣ ಎನ್ನುವುದು ಈ ಭಾರಿ ಅಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಭೀಮಣ್ಣ ನಾಯ್ಕ ಗೆಲುವಿನ ನಂತರದಲ್ಲ ವ್ಯಾಪಕ ಚರ್ಚೆಯಾಗುತ್ತಿದೆ.ಈ ಠೇವಣಿ ಕಳೆದುಕೊಂಡ ವ್ಯಕ್ತಿ ಕುಮಟಾ ಕ್ಷೇತ್ರಕ್ಕೆ ಕಾಲಿಡುವ ಮೊದಲು ಶಿರಸಿ ಕ್ಷೇತ್ರದಲ್ಲಿ ಚುನಾವಣೆ ವೇಳೆ ಬಂದು ತಮ್ಮ ಪಕ್ಷದ ಅಭ್ಯರ್ಥಿ ಸೋಲಿಗೆ ಕಾರಣವಾಗತ್ತಾ ಇದ್ದರು ಎನ್ನುವ ಮಾತು ಇದೀಗ ಜಿಲ್ಲೆಯ ತುಂಬಾ ಕೇಳಿ ಬರತ್ತಾ ಇದೆ. ಈ ಭಾರಿ ಕುಮಟಾ ಕ್ಷೇತ್ರದಲ್ಲಿ ಗೆಲ್ಲಬಹುದಾಗಿದ್ದ ಸ್ಥಳೀಯರಿಗೆ ಟಿಕೆಟ್ ತಪ್ಪಿಸಿ ಇವರನ್ಮ ಕಣಕ್ಕಿಳಿಸಿರುವುದು, ಠೇವಣಿ ಕಳೆದು ಕೊಳ್ಳಬೇಕಾದ ಪರಿಸ್ಥಿತಿ ಉಂಟಾಗುವಂತಾಯತ್ತು. ಈಗ ಲೋಕಸಭಾ ಚುನಾವಣೆಯಲ್ಲಿ ತಾನೇ ಜಿಲ್ಲೆಗೆ ಹೈಕಮಾಂಡ ಎಂದು ಓಡಾಡಿಕೊಳ್ಳುತ್ತಿದ್ದು,ಇವರ ನಡೆಯಿಂದ ಕುಮಟಾ ಕ್ಷೇತ್ರದಲ್ಲಿ ಯಾರೂ ಕೂಡ ಪಕ್ಷ ಸಂಘಟನೆಗೆ ಅಷ್ಟಾಗಿ ಮುಂದಾಗುತ್ತಿಲ್ಲ. ತಮ್ಮಗಿರುವ ಒಂದು ಮತವನ್ನ ಚಲಾಯಿಸಿಕೊಂಡು ಇದ್ದರಾಯುತ್ತು ಎನ್ನುವ ಮನಸ್ಥಿತಿಯಲ್ಲಿ ಅನೇಕ ಮುಖಂಡರಿದ್ದಾರೆ. ಇವರ ನಡೆಯ ಬಗ್ಗೆ ಸಾಮಾನ್ಯ ಕಾರ್ಯಕರ್ತರು ಸಹ ಬೇಸತ್ತು ಹೋಗಿದ್ದಾರೆನ್ನಲಾಗಿದೆ. ಪಕ್ಷದೊಳಗೆ ಗುಂಪುಗಾರಿಗೆ ಮಾಡುತ್ತಿರುವುದನ್ನ ತಕ್ಷಣ ತಡೆಬೇಕಿದೆ..ಎಂದು ಕಾಂಗ್ರೆಸ್‌ನ ಅನೇಕ ಮುಖಂಡರು ತಿಳಿಸಿದ್ದಾರೆ.