suddibindu.in
Kumta:ಕುಮಟಾ : ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಟಿಕೆಟ್ ನೀಡಿಲ್ಲವೆಂಬ ಕಾರಣಕ್ಕೆ ರಾಜಕೀಯದಿಂದ(Politics)ದೂರ ಉಳಿದಿದ್ದ ಕುಮಟಾ ಕ್ಷೇತ್ರದ ಕಾಂಗ್ರೆಸ್‌ನ(Congress) ಮಾಜಿ ಶಾಸಕಿ ಶಾರದಾ ಶೆಟ್ಟಿ (Sharada Shetty)ಅವರು ವಾಪಸ್ ಕಾಂಗ್ರೆಸ್‌ಗೆ ಮರಳಿದ್ದಾರೆನ್ನಲಾಗುತ್ತಿದೆ
.

ಕುಮಟಾ ವಿಧಾಸಭಾ ಕ್ಷೇತ್ರದ ಮಾಜಿ ಶಾಸಕಿಯಾಗಿದ್ದ ದಿ. ಮೋಹನ್ ಶೆಟ್ಟಿ ಅವರ ಪತ್ನಿ ಶಾರದಾ ಶೆಟ್ಟಿ ಅವರಿಗೆ ಪಕ್ಷದ ಹೈಕಮಾಂಡ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡದೆ ಕ್ಷೇತ್ರದವರಲ್ಲದೆ ಇರುವ ನಿವೇದಿತಾ ಆಳ್ವಾ ಅವರಿಗೆ ಟಿಕೆಟ್ ನೀಡಲಾಗಿತ್ತು.ಹೈಕಮಾಂಡ ಮೂಲಕ ಟಿಕೆಟ್ ‌ಗಿಟ್ಟಿಸಿಕೊಂಡ ಆಳ್ವಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಗಿಂತ ಅತೀ ಕಡಿಮೆ ಮತಗಳನ್ನ ಪಡೆದು ಉತ್ತರಕನ್ನಡ ಜಿಲ್ಲೆಯ ಇತಿಹಾಸದಲ್ಲೇ ಕಾಂಗ್ರೆಸ್ ‌ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ಹೀನಾಯವಾಗಿ ಸೋಲುವಂತಾಗಿತ್ತು.ಇದರಿಂದಾಗಿ ಕಾಂಗ್ರೆಸ್‌ಗೆ ಭಾರೀ ಹಿನ್ನಡೆ ಉಂಟಾಯಿತು.

ಇದನ್ನೂ ಓದಿ

ಇನ್ನೂ ಚುನಾವಣೆ ನಂತರದಲ್ಲಾದ್ದರೂ ಸಹ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಆಗಬಹುದು ಅಂದುಕೊಂಡಿದ್ದ ನಾಯಕರಿಗೆ ನಿರಾಶೆ ಉಂಟಾಗಿದೆ.ಲೋಕಸಭಾ ಚುನಾವಣೆ ಎದುರಾದರೂ ಸಹ ಕುಮಟಾ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯಲ್ಲಿ ಯಾವುದೇ ಚೇತರಿಕೆ ಕಂಡು ಬಂದಿಲ್ಲ. ಹೀಗಾಗಿ ಪಕ್ಷ ಸಂಘಟನೆ ಅಸಾಧ್ಯ ಎಂದು ಅರಿತ ಜಿಲ್ಲೆಯ ಕಾಂಗ್ರೆಸ್ ನಾಯಕರು, ಕುಮಟಾ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಲೇ ಬೇಕಾದ ಅನಿವಾರ್ಯತೆ ಇರುವ ಕಾರಣ ಮಾಜಿ ಶಾಸಕಿ ಶಾರದಾ ಶೆಟ್ಟಿಯವರನ್ನ ವಾಪಸ್ ಪಕ್ಷಕ್ಕೆ ಸೇರಿಸಿಕೊಳ್ಳಲು ತೀರ್ಮಾನಿಸಿದ್ದು, ಈ ಬಗ್ಗೆ ಜಿಲ್ಲೆಯ ಕಾಂಗ್ರೆಸ್‌ನ ಪ್ರಮುಖ‌ ನಾಯಕರು ಶಾರದಾ ಶೆಟ್ಟಿ ಅವರೊಂದಿಗೆ ಮಾತುಕತೆ ನಡೆಸಿದ್ದು ಯಶಸ್ವಿಯಾಗಿದೆ ಎನ್ನಲಾಗಿದೆ.

ಇನ್ನೂ ಕಳೆದ ವರ್ಷದ ವಿಧಾನಸಭಾ ಚುನಾವಣೆಯ ಪ್ರಭಲ ಟಿಕೆಟ್ ಆಕಾಂಕ್ಷಿಯಾಗಿದ್ದ ಶಿವಾನಂದ ಹೆಗಡೆ ಕಡತೋಕ ಅವರಿಗೆ ಟಿಕೆಟ್ ‌ಕೈ ತಪ್ಪಿರುವುದರಿಂದ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು. ಆದರೆ ಇದೀಗ ಅಲ್ಲಿಯೂ ಅವರಿಗೆ ಸರಿಯಾದ ಸ್ಥಾನ ಮಾನ ಸಿಗದ ಕಾರಣ ಅವರೂ ಕೂಡ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಮರಳಲು ತೀರ್ಮಾನಿಸಿದ್ದಾರೆನ್ನಲಾಗಿದ್ದು, ಇನ್ನೇರಡು ದಿನದಲ್ಲಿ ಶಾರದಾ ಶೆಟ್ಟಿ ಹಾಗೂ ಶಿವಾನಂದ ಹೆಗಡೆ ಇಬ್ಬರೂ ಕಾಂಗ್ರೆಸ್‌ಗೆ ಮರಳಿದ್ದಾರಂತೆ.