suddibindu.in
ಕುಮಟಾ : ತಾನು ಪ್ರೀತಿಸುತ್ತಿದ್ದ ಯುವತಿ ಬೇರೊಬ್ಬ ಯುವಕನನ್ನ ಪ್ರೀತಿಸುತ್ತಿರುವುದಕ್ಕೆ ಸಿಟ್ಟಾದ ಮಾಜಿ ಪ್ರೀಯಕರ ಹಾಲಿ ಪ್ರೀಯಕರನ ಕುತ್ತಿಗೆಗೆ ಚಾಕು ಇರಿದು ಹಲ್ಲೆ ಮಾಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾ ಪಟ್ಟಣ ಮಣಕಿ ಗ್ರೌಂಡ ನಲ್ಲಿ ನಡೆದಿದೆ
- 428 ಕಿಲೋ ಮೀಟರ್, 589ಸಾವು, ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಗಂಭೀರ
- ಹನಿಟ್ರ್ಯಾಪ್ ಪ್ರಕರಣವನ್ನ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ : ಗೃಹ ಸಚಿವ ಡಾ.ಜಿ ಪರಮೇಶ್ವರ ಹೇಳಿಕೆ
- ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಆಡಳಿತ ಕಚೇರಿ ನವೀಕರಣಕ್ಕೆ ಐದು ಲಕ್ಷ ಘೋಷಿಸಿದ ಶಾಸಕ ಸತೀಶ್ ಸೈಲ್
ಸಂತೋಷ ಅಂಬಿಗ ಎಂಬಾತನೆ ಚಾಕು ಇರಿತಕ್ಕೆ ಒಳಗಾಗಿದ್ದು, ರಾಜೇಶ ಎಂಬಾತ ಹಲ್ಲೆ ಮಾಡಿದ ಆರೋಪಿಯಾಗಿದ್ದಾನೆ. ರಾಜೇಶ ಅಂಬಿಗ ಯುವತಿ ಓರ್ವಳನ್ನ ಪ್ರೀತಿ ಮಾಡುತ್ತಿದ್ದು ಇಬ್ಬರೂ ಚೆನ್ನಾಗಿಯೇ ಇದ್ದರೂ ಎನ್ನಲಾಗಿದೆ. ಕಳೆದ ಒಂದು ವರ್ಷದಿಂದ ರಾಜೇಶನ ನಡವಳಿಕೆ ಸರಿಯಿಲ್ಲದ ಕಾರಣ ಆಕೆ ರಾಜೇಶ ಪ್ರೀತಿಯನ್ನ ನಿರಾಕರಣೆ ಮಾಡಿದ್ದಳು ಎನ್ನಲಾಗಿದೆ. ನಂತರದಲ್ಲ ಇದೀಗ ಹಲ್ಲೆಗೆ ಒಳಗಾದ ಸಂತೋಷ ಅಂಬಿಗ ಈ ಹಿಂದೆ ರಾಜೇಶ ಪ್ರೀತಿ ಮಾಡುತ್ತಿದ್ದ ಯುವತಿಯನ್ನ ಪ್ರೀತಿ ಮಾಡಲು ಆರಂಭಿಸಿ ವಿವಾಹ ಕೂಡ ನಿಶ್ಚಿತವಾಗಿತ್ತು ಎನ್ನಲಾಗಿದೆ.
ಇದೆ ವಿಚಾರಕ್ಕೆ ಸಿಟ್ಟಾದ ರಾಜೇಶ ಸಂತೋಷ ಅಂಬಿಗ ಇಂದು ಸಂತೋಷ ಅಂಬಿಗ ಎಂಬಾತನಿಗೆ ಪೋನ್ ಕರೆ ನಿನ್ನ ಬಳಿ ಮಾತನಾಡುವುದು ಇದೆ ನೀ ಒಬ್ಬನೆ ಮಣಕಿ ಗ್ರೌಂಡ್‌ಗೆ ಬಾ ಎಂದು ತಿಳಿಸಿದ್ದಾನೆ. ಆದರೆ ಸಂತೋಷ ಬರುವಾಗ ತನ್ನ ಜೊತೆ ಒಂದಿಬ್ಬರೂ ಸ್ನೇಹಿತರನ್ನ ಕರೆದುಕೊಂಡು ಬಂದಿದ್ದ, ಈ ವೇಳೆ ರಾಜೇಶ, ಸಂತೋಷ ಕಣ್ಣಿಗೆ ಕಾರ ಪುಡಿ ಎಸೆದು ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ಇದರಿಂದಾಗಿ ಸಂತೋಷ ಅಂಬಿಗ ಗಂಭೀರವಾಗಿ ಗಾಯಗೊಂಡಿದ್ದು, ಕುಮಟಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.