ಸುದ್ದಿಬಿಂದು ಬ್ಯೂರೋ
ಬಳ್ಳಾರಿ: ನಗರದ ಶಾಸಕ‌ರಾದ ಭರತ್ ರೆಡ್ಡಿ(MLA Bharat Reddy),ಮತ್ತವರ ಸಂಬಂಧಿಕರ ಮನೆ ಹಾಗು ಕಚೇರಿ ಮೇಲೆ ಇಡಿ ಅಧಿಕಾರಿಗಳು ಇಂದು ದಾಳಿ ನಡೆಸಿ(ED attack) ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಕುರಿತು ದಾಖಲೆಗಳ ಪರಿಶೀಲನೆ ಮತ್ತು ನಗದು ಸೇರಿದಂತೆ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆಂಬ ಮಾಹಿತಿ ಇದೆ.

ಕೇಂದ್ರ ಭದ್ರತಾ ಪಡೆಯ ಸಿಬ್ಬಂದಿಯೊಂದಿಗೆ ಆಗಮಿಸಿರುವ 20 ಕ್ಕೂ ಹೆಚ್ಚು ಅಧಿಕಾರಿಗಳ ತಂಡ ನಗರದ ನೆಹರೂ ಕಾಲೋನಿಯಲ್ಲಿನ ಭರತ್ ಹಾಗು ಅವರ ಚಿಕ್ಕಪ್ಪ ನಾರಾ ಪ್ರತಾಪ್ ರೆಡ್ಡಿ ಅವರ ಮನೆ. ಗಾಂಧಿನಗರದಲ್ಲಿರುವ ಅವರ ಮತ್ತವರ ತಂದೆ ಸೂರ್ಯನಾರಾಯಣ ರೆಡ್ಡಿ ಅವರ ಕಚೇರಿ, ಪ್ರತಾಪ್ ರೆಡ್ಡಿ ಅವರ ಕಚೇರಿ, ಆಪ್ತ ಸತೀಶ್ ರೆಡ್ಡಿ ಅವರ ಮನೆ ಮೇಲೆ ಬೆಳಿಗ್ಗೆ 6 ಗಂಟೆಗೆ ದಾಳಿ ನಡೆಸಲಾಗಿದೆ.ಇದೇ ರೀತಿ ಬೆಂಗಳೂರಿನ ಇಂದಿರಾ ನಗರದಲ್ಲಿನ ಹಾಗು ಚೆನ್ನೈನಲ್ಲಿರುವ ಕಚೇರಿಗಳ ಮೇಲೂ ದಾಳಿ ನಡೆದಿದೆಯಂತೆ.

ಇದನ್ನೂ ಓದಿ:- ಮೀನು ಹಿಡಿಯಲು ಹೋಗಿದ್ದ ತಂದೆ,ಮಗ ಸಾವು

ರಾಜ್ಯದ ಮತ್ತು ನೆರೆಯ ಆಂದ್ರ ಪ್ರದೇಶದಲ್ಲಿ ಗ್ರಾನೈಟ್ ವ್ಯವಹಾರದಲ್ಲಿ ಅವರು ಮತ್ತವರ ತಂದೆಯವರು ತೊಡಗಿದ್ದಾರೆ. ಈ ಕುರಿತಾಗಿ ಈ ಹಿಂದೆ ಐಟಿ ದಾಳಿ ನಡೆದಿತ್ತು. ನಂತರ ಈಗ ಇಡಿ ದಾಳಿ ನಡೆದಿದೆ‌.