ಸುದ್ದಿಬಿಂದು ಬ್ಯೂರೋ
ಹೊನ್ನಾವರ: ರಾಜ್ಯದ ಮಹಾ ನಗರ ಪಾಲಿಕೆ,ನಗರ ಸಭೆ,ಪುರ ಸಭೆ ಹಾಗೂ ಪಟ್ಟಣ ಪಂಚಾಯತಗಳಲ್ಲಿ ಘನ ತ್ಯಾಜ್ಯ ಕಸ ವಿಲೇವಾರಿ ಮಾಡುವ ವಾಹನ ಚಾಲಕರನ್ನು(ಪೌರ ಚಾಲಕರು) ಖಾಯಂ ನೌಕರರಾಗಿ ಅಥವಾ ನೇರ ಪಾವತಿಗೆ ಒಳ ಪಡಿಸಬೇಕೆಂದು ಜಿಲ್ಲೆಯ ಪೌರ ಚಾಲಕರು ಜಿಲ್ಲಾ ಉಸ್ತುವಾರ ಸಚಿವ ಮಂಕಾಳು ವೈದ್ಯ ಅವರಿಗೆ ಮನವಿ ಸಲ್ಲಿಸಿದರು.

ರಾಜ್ಯದ ಮಹಾನಗರ ಪಾಲಿಕೆ,ನಗರ ಸಭೆ, ಪುರ ಸಭೆ, ಹಾಗೂ ಪಟ್ಟಣ ಪಂಚಾಯತಗಳಲ್ಲಿ ಘನ ತ್ಯಾಜ್ಯ ಕಸ ವಿಲೇವಾರಿ ಮಾಡುವ ವಾಹನ (ಟಿಪ್ಪರ್, ಟ್ರ್ಯಾಕ್ಟರ್, ಬುಲೆರೊ, ಲಗೇಜ್ ರೀಕ್ಷಾ,ಜೆ ಸಿ ಬಿ, ಹಿಟಾಚಿ, ಕೋಂಪ್ರೆಕ್ವರ್ ವಾಹನ,ಸಕ್ಕಿಂಗ್ ಮಷೀನ್) ಚಾಲಕರಾಗಿ (ಪೌರ ಚಾಲಕರು) ಸುಮಾರು1 ರಿಂದ 24 ವರ್ಷಗಳಿಂದ ಕೆಲಸ ಮಾಡುತ್ತ ಬಂದಿದ್ದು.ಇನ್ನು ತನಕ ಯಾವುದೇ ಸರ್ಕಾರವು ಇವರನ್ನ ಖಾಯಂ ಗೊಳಿಸಲು ಅಥವಾ ನೇರ ಪಾವತಿಗೆ ಪರಿಗಣಿಸಿಲ್ಲ.ಹೀಗಾಗಿ ತಮ್ಮನ್ನ ಖಾಯಂ ಗೊಳಿಸುವುದರಿಂದ ಅಥವಾ ನೇರ ಪಾವತಿ ಮಾಡುವುದರಿಂದ ಸರ್ಕಾರಕ್ಕೆ ಜಿ ಎಸ್ ಟಿ ಉಳಿತಾಯದ ಜೋತೆಗೆ ನಮಗೆ ಸೇವಾ ಭದ್ರತೆಯು ದೊರಕಲಿದೆ.ಏಜೆನ್ಸಗಳ ಕಿರುಕುಳ ತಪ್ಪಿದಂತಾಗುತ್ತದೆ.

ಈಗಾಗಲೆ ಎರಡು ವರ್ಷ ಮೆಲ್ಪಟ್ಟ ಹಲವು ಪೌರ ಕಾರ್ಮಿಕರನ್ನ ಖಾಯಂ ಗೊಳಿಸಲಾಗಿದೆ.ಅವರ ಜೊತೆಯಲ್ಲಿ ಇದ್ದು ಅವರ ಸರಿ ಸಮಾನವಾಗಿ ಜವಾಬ್ದಾರಿಯಿಂದ ಕೆಲಸ ಮಾಡುತ್ತಿರು ನಮ್ಮನ್ನು ಪರಿಗಣನೆಗೆ ತೆಗೆದುಕೊಳ್ಳದೇ ನಿರ್ಲಕ್ಷ ಮಾಡುತ್ತಿದ್ದಾರೆ.ಅಧಿಕಾರಿಗಳ ತಾರತಮ್ಯ ನೀತಿಯಿಂದಾಗಿ ನಮ್ಮ ಜೀವನ ಡೊಲಾಯಮಾನ ವಾಗಿದೆ.ಜೊತೆಗೆ ನಾವೆಲ್ಲವರು ಮುನ್ಸಿಪಾಲ್ ಕಾಯ್ದೆ ಪ್ರಕಾರ ಪೌರ ಕಾರ್ಮಿಕರೆ ಆಗಿದ್ದೆವೆ. ನಗರಾಭಿವೃದ್ಧಿ ಇಲಾಖೆಯು ನಮ್ಮಂತ ಬಡ ಪೌರ ಚಾಲಕರ ವಿರೋಧಿ ಧೊರಣಿಯನ್ನ ಅನುಸರಿಸುತ್ತಾ ಇದೆ.

ಘನ ತ್ಯಾಜ್ಯ ಕಸ ವಿಲೇವಾರಿ ಮಾಡುವ ವಾಹನ ಚಾಲಕರಾಗಿದ್ದು, ,ಕನಿಷ್ಠ ಸಂಬಳವನ್ನು ಪಡೆದು,ನಿಕೃಷ್ಟ ಜೀವನವನ್ನು ನಡೆಸುತ್ತಾ ಇದ್ದೆವೆ.ನಾವು ಇದೆ ವೃತ್ತಿಯನ್ನು ನಂಬಿ ಕರ್ತವ್ಯ ನಿಷ್ಠೆಯಿಂದ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವುದರಿಂದ ತಮ್ಮನ್ನ‌ ಖಾಯಂ ಮಾಡಬೇಕು.ಘನ ತ್ಯಾಜ್ಯ ಕಸ ವಿಲೇವಾರಿ ಮಾಡುವ ವಾಹನ ಚಾಲಕರ(ಪೌರ ಚಾಲಕರು) ಕಣ್ಣೀರು ಒರೆಸುವ ಕಾರ್ಯವಾಗಬೇಕು ಎಂದು ಸಚಿವರಿಗೆ ಮನವಿ ಸಲ್ಲಿದ್ದಾರೆ.