ಸುದ್ದಿಬಿಂದು ಬ್ಯೂರೋ
ಕಾರವಾರ :ಬೆಳಗಾವಿಯ ಹೊರವಲಯದಲ್ಲಿ ನಿನ್ನೆ ರಾತ್ರಿ ಡಿ ಕೆ ಶಿವಕುಮಾರ ಏರ್ಪಡಿಸಿದ ಔತಣ ಕೂಟದಲ್ಲಿ ಬಿಜೆಪಿ ವಲಸಿಗ ಶಾಸಕರು ಪಾಲ್ಗೊಂಡಿದ್ದು, ಇವರೆಲ್ಲರೂ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆಯೇ ಎನ್ನುವ ಚರ್ಚೆ ರಾಜಕೀಯ ವಲಯದಲ್ಲಿ ಈಗ ಚರ್ಚೆಗೆ ಕಾರಣವಾಗಿದೆ.
ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್, ಯಶವಂತಪುರ ಸೋಮಶೇಖರ್ ಸೇರಿ ಹತ್ತಕ್ಕೂ ಹೆಚ್ಚು ಬಿಜೆಪಿ ವಲಸೆ ಶಾಸಕರು ಡಿ ಕೆ ಶಿವಕುಮಾರ ಅವರು ಕರೆದ ಔತಣ ಕೂಟದಲ್ಲಿ ಪಾಲ್ಗೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಬಿಜೆಪಿ ಸಭೆಗಳಿಂದ ದೂರ ಉಳಿದಿರುವ ಅವರು, ಮತ್ತೆ ಕಾಂಗ್ರೆಸ್ ಸೇರುವ ಸಾಧ್ಯತೆ ದಟ್ಟವಾಗಿದೆ.
ಈ ಬಗ್ಗೆ ಪ್ರತಿಕೆಯೆ ನೀಡಿದ ಶಾಸಕ ಸೋಮಶೇಖರ್ ಅವರು ಡಿ ಕೆ ಶಿವಕುಮಾರ ಅವರು ಕರೆದಿದ್ದರು ಅದಕ್ಕೆ ನಾವು ಹೋಗಿ ಅವರಿಗೆ ವಿಶ್ ಮಾಡಿ ಬಂದಿದ್ದೇವೆ. ನಾವು ಹೋಗಿದ್ದ ವೇಳೆ ಊಟದ ಸಮಯ ಆಗಿತ್ತು. ಅದಕ್ಕೆ ಊಟ ಮಾಡಿ ಬಂದಿದ್ದೇವೆ ಎಂದು ಸೋಮಣ್ಣ ಅವರು ಹೇಳಿಕೆ ನೀಡಿದ್ದಾರೆ.