ಸುದ್ದಿಬಿಂದು ಬ್ಯೂರೋ
ಶಿರಸಿ :ಉತ್ತರಕನ್ನಡ ಜಿಲ್ಲೆಯ ಶಿರಸಿಯಿಂದ ಅಕ್ರಮವಾಗಿ ಮೈಸೂರಿಗೆ ಗಂಧದ ತುಂಡುಗಳನ್ನ ಸಾಗಾಟ ‌ಮಾಡುತ್ತಿದ್ದ ಆರೋಪಿಗಳನ್ನ ಬಂಧಿಸಿರುವ ಘಟನೆ ಶಿರಸಿಯಲ್ಲಿ ನಡೆದಿದೆ.

ಶಿರಸಿಯಿಂದ ಮೈಸೂರಿನ ಮಂಡಿ ಮೊಹಲ್ಲಾಕ್ಕೆ ಗಂಧದ ತುಂಡುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಶಿರಸಿ ಗಂಧದ ಸಂಕಿರಣ ನಿವಾಸಿ ರಾಘವೆಂದ್ರ ಗುಡಿಗಾರ ಹಾಗೂ ಶಿವಮೊಗ್ಗ ಮತ್ತು ಮೈಸೂರಿನ ಆರೋಪಿಗಳನ್ನ ಮೈಸೂರು ಅರಣ್ಯ ಸಂಚಾರಿ ದಳದ ಪೋಲಿಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ಆರೋಪಿಗಳು 308 ಕೆ ಜಿ ಗಂಧದ ತುಂಡುಗಳನ್ನು ಸಾಗಿಸುತ್ತಿದ್ದ ಬಗ್ಗೆ ಖಚಿತಗಾಗಿರುವ ಮಾಹಿತಿಯನ್ನ ಪಡೆದ ಪೋಲಿಸರು ಆರೋಪಿಗಳನ್ನ ಬಂದಿಸಲಾಗಿದೆ.