ಸುದ್ದಿಬಿಂದು ಬ್ಯೂರೋ
ಕಾರವಾರ : ರಾಜ್ಯದಲ್ಲಿ ಈ ಸರ್ಕಾರ ಇರುವ ವರೆಗೇ ಏನು ಮಾಡಬೇಕೋ ಅದನ್ನು ಮಾಡಿ ಹೋಗಬೇಕು ಎಂದು ಮುಸ್ಲೀಮರು ತೀರ್ಮಾನಿಸಿದ್ದಾರೆ.ಯಾವಾಗ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಿದಾರೋ ಸಂದರ್ಭದಲ್ಲಿ ಹಿಂದುಗಳು ಬದುಕುವುದು ಕಷ್ಟವಾಗಿದೆ ಎಂದು ಚಿಂತಕ ಚಕ್ರವರ್ತಿ ಸೂಲೆಬೆಲೆ ಕಾರವಾರದಲ್ಲಿ ಹೇಳಿಕೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಘಟನೆ ಆಗಲು ಮುಖ್ಯ ಕಾರಣವೇ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತದಲ್ಲಿ ಇರುವುದು. ಮುಸಲ್ಮಾನರು ಹಿಂದು ಸಮಾಜವನ್ನು ಹೇಡಿ ಸಮಾಜ ಎಂದು ತೋರಿಸುವ ಪ್ರಯತ್ನ ಮಾಡುತಿದ್ದಾರೆ.
ಮುಸ್ಲೀಮರಿಗೆ ಸಿದ್ದರಾಮಯ್ಯನವರು ನಾನಿದ್ದೇನೆ ಎಂದು ಅಭಯ ಹಸ್ತ ಕೊಟ್ಟು ನಾನಿದ್ದೀನಿ ಎಂದು ಹೇಳುತ್ತಾರೋ ಅಲ್ಲಿ ವರೆಗೆ ಈ ದಂಗೆಗಳು ನಿರಂತರವಾಗಿ ಇರುತ್ತದೆ ಎಂದು ಚಕ್ರವರ್ತಿ ಸೂಲೆಬೆಲೆ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ.