ಸುದ್ದಿಬಿಂದು ಬ್ಯೂರೋ
ಯಲ್ಲಾಪುರ :
ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಾರಿ ಬದಲಾವಣೆಯ ಗಾಳಿ ಬೀಸುತ್ತಿದ್ದು ಕಾರ್ಮಿಕ ಸಚಿವ ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ್ ಹೆಬ್ಬಾರ್ ಅವರ ಆಪ್ತರಲ್ಲಿ ಒಬ್ಬರಾಗಿರುವ ಮಂಗಲಾ ನಾಯ್ಕ ಸೇರಿದಂತೆ ಹಲವು ಮುಖಂಡರು ಕೆಲದಿನದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ‌ಸೇರ್ಪಡೆಯಾಗಲಿದ್ದಾರೆ ಎನ್ನುವ ಚರ್ಚೆ ಜೋರಾಗಿ ಕೇಳಿ ಬರುತ್ತಿದೆ.

ಮಂಗಲಾ ನಾಯ್ಕ ಈ ಹಿಂದೆ ಶಿವರಾಮ ಹೆಬ್ಬಾರ್ ಅವರು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರ್ಪಡೆ ಆದ ಬಳಿಕ ಮಂಗಲಾ ನಾಯ್ಕ ಸಹ ಹಾಗು ಹೆಬ್ಬಾರ್ ಹಾದಿಯಲ್ಲೆ ತಮ್ಮ‌ ನೂರಾರು ಮುಖಂಡರ ಜೊತೆ ಬಿಜೆಪಿ ಸೇರಿಕೊಂಡಿದ್ದರು. ಬಳಿಕ‌ ಶಿವರಾಮ ಹೆಬ್ಬಾರ್ ಕೆಲ ಆಪ್ತರು ಮಂಗಲಾ ನಾಯ್ಕ ಹಾಗೂ ಅವರ ಜೊತೆಯಲ್ಲಿ ಅಂದು ಬಿಜೆಪಿಗೆ ಬಂದ ಮುಖಂಡರ ಜೊತೆ ಆರಂಭದಿಂದಲ್ಲೂ ಮುನಿಸಿಕೊಂಡು ಬರುತ್ತಿದ್ದರು ಎನ್ನಲಾಗಿದೆ. ಈ ಮುನಿಸು ಚುನಾವಣೆ ಹತ್ತಿರವಾಗುತ್ತಿದ್ದಂತೆ ಇನ್ನಷ್ಟೂ ದೊಡ್ಡ ಮಟ್ಟದಲ್ಲಿ ಮುಂದುವರೆದಿದೆ ಎನ್ನಲಾಗಿದೆ.

ಇದರಿಂದ ಹೆಬ್ಬಾರ್ ಅವರಿಗಿಂತ ಅವರ ಆಪ್ತರ ವರ್ಥನೆಯಿಂದ ಬೇಸತ್ತಿರುವ ಮಂಗಲಾ ನಾಯ್ಕ ಹಾಗೂ ಅವರ ಆಪ್ತರು ಆ ಮುಖಂಡರ ಮೇಲೆ ವರ್ಥನೆಯಿಂದ ವಾಪಸ್ ಕಾಂಗ್ರೆಸ್ ಗೆ ಸೇರ್ಪಡೆ ಆಗಲಿದ್ದಾರೆ ಎನ್ನುವ ಮುನ್ಸೂಚನೆ ಸಿಕ್ಕಿದೆ. ಇತ್ತೀಚೆಗಷ್ಟೆ ಬಿಜೆಪಿಯಲ್ಲಿದ್ದ ಮಂಗಲಾ ನಾಯ್ಕ ಅವರ ಆಪ್ತರು ಈಗಾಗಲೆ‌ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದು, ಇನ್ನೂ ಕೆಲ‌ ದಿನಗಳಲ್ಲಿ ಶಿವರಾಮ್ ಹೆಬ್ಬಾರ್ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷೆ ಮಂಗಲಾ ನಾಯ್ಕ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ಮಾತುಗಳು ಕೇಳಿಬರುತ್ತಿವೆ.

ಮೂಲಗಳ ಪ್ರಕಾರ ಮುಂಡಗೋಡದಲ್ಲಿ ಮುಂದಿನವಾರದಲ್ಲಿ ನಡೆಯುವ ಸಿದ್ದರಾಮಯ್ಯನವರ ಕಾರ್ಯಕ್ರಮದಲ್ಲಿ ಮಂಗಲಾ ನಾಯ್ಕ ಸೇರಿ ಹಲವಾರು ಪ್ರಭಾವಿಗಳು ಬಿಜೆಪಿ ತೊರೆದು ಕಾಂಗ್ರೇಸ್ ಸೇರುವ‌ ಬಗ್ಗೆ ಈಗಾಗಲೇ ಮಾತುಕತೆ ನಡೆದಿದ್ದು, ಅದು ಸಫಲತೆ ಆಗಿದೆ ಎನ್ನಲಾಗಿದೆ. ಇನ್ನೂ ಕಾಂಗ್ರೆಸ್ ಸೇರಲಿರುವ ಈ ಪ್ರಮಖರು ಹೆಬ್ಬಾರ ಅವರಿಗಿಂತ ಅವರ ಆಪ್ತರ ಮೇಲಿನ ಅಸಮಧಾನದಿಂದಲ್ಲೆ ಕಾಂಗ್ರೆಸ್ ಸೇರಲಿದ್ದಾರೆ ಎನ್ನಲಾಗಿದೆ