ಸುದ್ದಿಬಿಂದು ಬ್ಯೂರೋ
ಕುಮಟಾ : ನಾಮಪತ್ರ ವಾಪಸ್ ಪಡೆಯುದರ ಜತೆ ರಾಜಕೀಯ ನಿವೃತ್ತಿ ಘೋಷಿಸುವುದಾಗು ಕಾಂಗ್ರೆಸ್ ನ ಮಾಜಿ ಶಾಸಕಿ ಶಾರದಾ ಶೆಟ್ಟಿ ತಿಳಿಸಿದಿದ್ದಾರೆ‌.

ಅವರು ಇಂದು ತಮ್ಮ ನಿವಾಸದಲ್ಲಿ ಅಪಾರ ಬೆಂಬಲಿಗರ ಜೊತೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ನಮ್ಮ ಕುಟುಂಬ ಕಳೆದ ಅನೇಕ ವರ್ಷದಿಂದ ಕಾಂಗ್ರೆಸ್ ಪಕ್ಷಗಾಗಿ ದುಡಿದಿದ್ದೇವೆ. ಆದರೆ ಪಕ್ಷ ಈ ಬಾರಿ ನಮ್ಮ ಕೈ ಬಿಟ್ಟಿದೆ.ಎಂದಿದ್ದಾರೆ. ಟಿಕೆಟ್ ಕೈ ತಪ್ಪಿದ ಹಿನ್ನಲೆಯಲ್ಲಿ ಅವರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಆಗಿ ನಾಮಪತ್ರ ಸಲ್ಲಿಕೆ ಮಾಡಿದ್ದರು. ಅದರೆ ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ್ ದೂರವಾಣಿ ಕರೆ ಮಾಡಿ ನಾಮಪತ್ರ ಹಿಂಪಡೆಯುವಂತೆ ಹೇಳಿದ್ದರು, ಅಷ್ಟೆ ಅಲ್ಲದೆ ಎಂ.ಎಲ್.ಸಿ. ಅಥವಾ ನಿಗಮ ಮಂಡಳಿ ಅಧ್ಯಕ್ಷ ಹುದ್ದೆ ಕೊಡುವುದಾಗಿಯೂ ಸಹ ಭರವಸೆ ಕೊಟ್ಟಿದ್ದರು.ನಾಮಪತ್ರ ಹಿಂಪಡೆಯುವ ಜೊತೆಗೆ ರಾಜಕೀಯವಾಗಿಯೂ ನಿವೃತ್ತಿ ಪಡೆಯುವುದಾಗಿ ಶಾರದಾ ಶೆಟ್ಟಿ ತಿಳಿಸಿದ್ದಾರೆ.

ಪಕ್ಷದ ನಿರ್ಧಾರದಿಂದ ಬಹಳಷ್ಟು ನೊಂದಿದ್ದೇನೆ’. ರಾಜಕೀಯ ನಿವೃತ್ತಿ ಪಡೆದ ಮೇಲೆ ಯಾರೊಬ್ಬರಿಗೂ ಬೆಂಬಲಿಸುವ ಪ್ರಮೇಯವೇ ಇಲ್ಲ. ನಮ್ಮ ಬೆಂಬಲಿಗರು ಯಾರನ್ನಾದರೂ ಬೆಂಬಲಿಸಲು ಸ್ವತಂತ್ರರು ಎನ್ನುವ ಮೂಲಕ ಶಾರದಾ ಶೆಟ್ಟಿ ಅವರು ತಮ್ಮ ರಾಜಕೀಯ ಕ್ಷೇತ್ರದಿಂದಲ್ಲೆ ದೂರ ಸರಿದಿದ್ದಾರೆ. ಸದ್ಯ ಅವರ ಬೆಂಬಲಿಗರು ಯಾರ ಕಡೆ ಬೆಂಬಲಿಸಲಿದ್ದಾರೆ ಎನ್ನುವುದನ್ನ ಕಾದು ನೋಡಬೇಕಿದೆ.ಇದೀಗ ಕುಮಟಾ ರಾಜಕೀಯ ಚಿತ್ರಣ ಮತ್ತಷ್ಟು ಕುತೂಹಲ ಕೆರಳಿಸಿದೆ…