ಸುದ್ದಿಬಿಂದು ಬ್ಯೂರೋ
ಬೆಂಗಳೂರು
: ಜೆಡಿಎಸ್ ನ ಮೊದಲ ಪಟ್ಟಿಯನ್ನ ರಿಲೀಸ್ ಮಾಡಿದ್ದ ಜೆಡಿಎಸ್ ಇದೀಗ ಎರಡನೇ ಪಟ್ಟಿಯನ್ನ ಬಿಡುಗಡೆ ಮಾಡಿದೆ. ನಗರದ ಜೆಡಿಎಸ್ ಕಚೇರಿಯಲ್ಲಿ ಇಂದು ಬಿಡುಗಡೆ ಮಾಡಲಾಗಿದೆ.

ಉತ್ತರಕನ್ನಡ ಜಿಲ್ಲೆಯ ಆರು ವಿಧಾನಭಾ ಕ್ಷೇತ್ರದಲ್ಲಿಯೂ ಅಭ್ಯರ್ಥಿಗಳನ್ನ ಕಣಕ್ಕಿಳಿಸಲಾಗಿದೆ. ಕುಮಟಾ ಸೂರಜ್ ನಾಯ್ಕ ಸೋನಿ, ಭಟ್ಕಳ ನಾಗೇಂದ್ರ ನಾಯ್ಕ, ಯಲ್ಲಾಪುರ ಡಾ. ನಾಗೇಶ ನಾಯ್ಕ, ಶಿರಸಿ ಉಪೇಂದ್ರ ಪೈ, ಹಳಿಯಾಳ ಎಸ್ ಎಲ್ ಘೋಟ್ನೆಕರ್, ಕಾರವಾರ ಚೈತ್ರಾ ಕೋಠಾರಕರ್ ಅವರ ಹೆಸರು ಘೋಷಣೆ ಮಾಡಿಲಾಗಿದೆ.

ಇನ್ನೂ ಸಾಕಷ್ಟು ಕೂತುಹೊಲಕ್ಕೆ ಕಾರಣವಾಗಿದ್ದ ಹಾಸನ ಟಿಕೆಟ್ ವಿಚಾರದಲ್ಲಿ ಕೊನೆಗೂ ಕುಮಾರಸ್ವಾಮಿ ಅವರು ಹೇಳಿದಂತೆ ನಡೆದುಕೊಂಡಿದ್ದು, ಹಾಸನ ಕ್ಷೇತ್ರದಲ್ಲಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಟಿಕೆಟ್ ಬಗ್ಗೆ ಸಾಕಷ್ಟು ಕಸರತ್ತು ನಡೆಸಿದ್ದರು‌. ಆದರೆ ಕೊಟ್ಟಮಾತಿನಂತೆ ಕುಮಾರ ಸ್ವಾಮಿ ಅವರು ಹಾಸನ ಟಿಕೆಟ್ ನ್ನ ಸ್ವರೂಪ್ ಅವರಿಗೆ ಅಧಿಕೃತವಾಗಿ ಘೋಷಣೆ ಮಾಡಿದ್ದು, ಇದರಲ್ಲಿ ಯಾವುದೆ ಗೊಂದಲ್ಲ ಇಲ್ಲ ಎನ್ನುವ ಮೂಲ ಸಿ ‘ಹಾಸನ’ ಟಿಕೆಟ್ ವಿಚಾರಕ್ಕೆ ತೆರೆ ಎಳೆದಿದ್ದಾರೆ.