ಸುದ್ದಿಬಿಂದು ಬ್ಯೂರೋ
ಕುಮಟಾ: ಐವತ್ತೈದು ವರ್ಷಗಳಿಂದ ರಾಜೀಕಿಯದಲ್ಲಿ ಎಲ್ಲಾ ಸೇವೆ ಮಾಡಿದ್ದೇನೆ.ಇವತ್ತು ನನ್ನಗೆ ಒಂದು ಸಹಾಯ ಮಾಡಿ ಎಂದು ಬೇಡಿಕೊಳ್ಳುತ್ತೇನೆ ಎಂದು ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡ ಎದುರು ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವ ಅವರು ಪರೋಕ್ಷವಾಗಿ ತನ್ನ ಪುತ್ರ ನಿವೇದಿತಾ ಆಳ್ವ ಗೆ ಕುಮಟಾ ಕಾಂಗ್ರೆಸ್ ಟಿಕೆಟ್ ಪಕ್ಕಾ ಅಗಿದೆ ಎನ್ನುವುದನ್ನ ಖಚಿತಪಡಿಸಿದ್ದರು.

ತಾಲೂಕಿನ ಮೊರಬಾ ಗ್ರಾಮದಲ್ಲಿ ಅವರು ತಮ್ಮ 81ನೇ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ಅಭಿಮಾನಿಗಳು ಹಾಗೂ ಮುಖಂಡರ ಸಮ್ಮುಖದಲ್ಲಿ ಟಿಕೇಟ್ ಖಚಿತವಾಗಿರುವ ಬಗ್ಗೆ ಸುಳಿವು ನೀಡಿದ್ದರು.ಮೊರಬದಲ್ಲಿ ಮನೆ ಮಾಡಿದ್ದೇನೆ ಚುನಾವಣೆ ಮುಗಿಯುವವರೆಗೆ ತಾನು ಇಲ್ಲೆ ಇರತ್ತೇನೆ. ಇದು ನನ್ನ ಕೊನೆ ಚುನಾವಣೆ. ಎಲ್ಲಾ ಒಗ್ಗಟ್ಟಾಗಿ ದುಡಿಯುವ ಮೂಲಕ ಗೆಲ್ಲಿಸಬೇಕು. ಎಂದರು.
ಅವರ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಕ್ಷೇತ್ರದ ಬಹುತೇಕ ಎಲ್ಲಾ ಮುಖಂಡರು. ಆಳ್ವಾ ಅಭಿಮಾನಿಗಳು, ಕಾರ್ಯಕರ್ತರು ಹಾಜರಿದ್ದರು. ಮನೆಗೆ ಆಗಮಿಸಿದ ಎಲ್ಲರ ಬಳಿಯೂ ಮಾರ್ಗರೇಟ್ ಆಳ್ವ ಕಾಂಗ್ರೆಸ್ ಗೆಲ್ಲಿಸಬೇಕು.ಮತ್ತು ನಿವೇದಿತಾ ಆಳ್ವ ಪರ ನಿಂತು ಕೆಲಸ ಮಾಡುವಂತೆ ಹೇಳಿಕೊಂಡಿದ್ದಾರೆ. ಇವರ ಪ್ರತಿಯೊಂದು ಮಾತನ್ನು ಗಮನಿಸಿದ್ದರೆ. ನಿವೇದಿತಾ ಆಳ್ವಾ ಗೆ ಟಿಕೆಟ್ ಫೈನಲ್ ಮಾಡಿಕೊಂಡೆ ಮಾರ್ಗರೆಟ್ ಆಳ್ವ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ ಎನ್ನುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ.
ಇನ್ನೆನ್ನಿದ್ದರೂ ಟಿಕೆಟ್ ಘೋಷಣೆ ಮಾತ್ರ ಬಾಕಿ ಇದೆ. ನಿವೇದಿತಾ ಆಳ್ವ ಅವರಿಗೆ ಟಿಕೆಟ್ ಘೋಷಣೆ ಆದ ನಂತರಲ್ಲಿ ಭಾರೀ ದೊಡ್ಡಮಟ್ಟದಲ್ಲಿ ಕ್ಷೇತ್ರದಲ್ಲಿ ಭಿನ್ನಮತ ಸ್ಪೋಟವಾಗಿವ ಸಾಧ್ಯತೆ ಸಹ ಇದೆ ಎನ್ನಲಾಗುತ್ತಿದೆ.