ರಾಜಕೀಯ, ಮಡಿವಂತಿಕೆ ಕಳೆದುಕೊಳ್ಳುತ್ತಿದೆ ಅನ್ನೋದಕ್ಕೆ ಹಾಸನದ ಈ ಘಟನೆ ಸಾಕ್ಷಿಯಾಗಿದೆ. ಚುನಾವಣೆಗೆ ಇನ್ನು ನಾಲ್ಕು ದಿನ ಬಾಕಿ ಇರುತ್ತಿದ್ದಂತೆ ಹಾಸನದ ರಾಜಕೀಯದಲ್ಲಿ ವ್ಯಕ್ತಿಯೊಬ್ಬರ ಅಶ್ಲೀಲ ತುಣುಕುಗಳು ಹರಿದಾಡುತ್ತಿವೆ.
ನಾಡಿನುದ್ದಕ್ಕೂ ರಾಜಕಾರಣದ ಬೇರು ಹೊಂದಿರುವ ಪಕ್ಷವೊಂದರ ಯುವ ನಾಯಕನಿಗೆ ಸಂಬಂದಪಟ್ಟಿವೆ ಎಂದು ಹೇಳಲಾದ ಅಶ್ಲೀಲ ತುಣುಕುಗಳನ್ನು ವೈರಲ್ ಮಾಡಲಾಗಿದೆ..
ಇದನ್ನೂ ಓದಿ
- ಕುಮಟಾ ತಾಲೂಕಾ ಪಂಚಾಯತ್ ಕಾಮಗಾರಿ ಟೆಂಡರ್ನಲ್ಲಿ ಅವ್ಯವಹಾರ ಆರೋಪ
- ಡಿಸೆಂಬರ್ 6ಕ್ಕೆ ಉತ್ತರ ಕನ್ನಡಕ್ಕೆ ಕೇಂದ್ರ ಸಚಿವ ಕುಮಾರಸ್ವಾಮಿ ಭೇಟಿ
- ಕಾಂಗ್ರೇಸ್ ವಿರುದ್ಧ ಕಾರವಾರದಲ್ಲಿ ಬಿಜೆಪಿ ಪ್ರತಿಭಟನೆ
ಎಪ್ರಿಲ್ 26 ರಂದು ಹಾಸನ ಲೋಕಸಭಾ ಕ್ಷೇತ್ರಕ್ಕೆ ಮತದಾನ ನಡೆಯಲಿದ್ದು, ಮತದಾನಕ್ಕೂ ಮುನ್ನ ವೈರಲ್ ಆಗಿರುವ ಅಶ್ಲೀಲ ತುಣುಕುಗಳು ಹಾಸನದ ಜನರನ್ನು ಹೈರಾಣಾಗಿಸಿದೆ ಎನ್ನಲಾಗಿದೆ. ನಗ್ನ ರಾಜಕಾರಣ, ದ್ವೇಷ, ಅಸೂಯೆಯ ರಾಜಕಾರಣಕ್ಕೆ ಕಾರಣವಾಗಿದೆ ಎನ್ನಲಾಗಿದೆ.







