ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯ ಮತ ಏಣಿಕೆ ಆರಂಭವಾಗಿದ್ದು,ಮೂರು ಕ್ಷೇತ್ರದಲ್ಲಿಯೂ ಮೈತ್ರಿ ಹಾಗೂ ಕಾಂಗ್ರೇಸ್ ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ.
ಸಂಡೂರು,ಶಿಗ್ಗಾಂವ ಹಾಗೂ ಚನ್ನಪಟ್ಟಣ ಈ ಮೂರು ಕ್ಷೇತ್ರಕ್ಕೆ ನಡೆದ ಉಪ ಚುನಾವೆಯ ಮತ ಏಣಿಕೆ ಇಂದು ಆರಂಭವಾಗಿದ್ದು, ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ಕಣದಲ್ಲಿದ್ದರೆ ಇನ್ನೂ ಕಾಂಗ್ರೇಸ್ ಏಕಾಂಗಿಯಾಗಿ ಸ್ಪರ್ಧೆಯಲ್ಲಿದೆ. ಸಂಡೂರು ಕ್ಷೇತ್ರದ ಮತ ಏಣಿಕೆ ಆರಂಭದಿಂದಲ್ಲೂ ಕಾಂಗ್ರೇಸ್ ಅಭ್ಯರ್ಥಿ ಮೈತ್ರಿ ಅಭ್ಯರ್ಥಿಗಳಿಗಿಂತ ಮುನ್ನಡೆಯಲ್ಲಿ ಸಾಗುತ್ತಿದ್ದಾರೆ.
ಇನ್ನೂ ಮಾಜಿ ಮುಖ್ಯಮಂತ್ರಿಗಳಾಗಿರುವ ಬಸವರಾಜ್ ಬೊಮ್ಮಾಯಿ ಶಿಗ್ಗಾಂವ ಕ್ಷೇತ್ರದಲ್ಲಿ ತನ್ನ ಮಗನಿಗೆ ಕಣಕ್ಕಿಳಿಸಿದ್ದರೆ. ಚೆನ್ನಪ್ಪಟ್ಟಣ ಕ್ಷೇತ್ರದ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಬಿಜೆಪಿ ಜೆಡಿಎಸ್ ಮೈತ್ರಿಯಲ್ಲಿ ಕಣದಲ್ಲಿದ್ದಾರೆ.ಆದರೆ ಈ ಎರಡು ಕ್ಷೇತ್ರದಲ್ಲಿಯೂ ಕಾಂಗ್ರೇಸ್ ಅಭ್ಯರ್ಥಿಗಳ ಎದುರು ಅಂತರ ಹೆಚ್ಚಿಸಿಕೊಳ್ಳು ಮೈತ್ರಿ ಅಭ್ಯರ್ಥಿಗಳು ತಿಣಿಕಾಟ ನಡೆಸುವಂತಾಗಿದೆ. ಹಾವೇರಿಯಲ್ಲಿ ಸದ್ಯ ಕಾಂಗ್ರೇಸ್ ಅಭ್ಯರ್ಥಿ ಸಾವಿರಕ್ಕೂ ಅಧಿಕಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಗಮನಿಸಿ